ಎಚ್ ಪಿ ನೆವರ್ ಸ್ಟಾಪ್ ಲೇಸರ್ ಪ್ರಿಂಟರ್ ಮಾರುಕಟ್ಟೆಗೆ ಬಿಡುಗಡೆ
ಬೆಂಗಳೂರು, ಮೇ 30: ಲಾಕ್ ಡೌನ್ ಹಿನ್ನೆಲೆಯಲ್ಲಿ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಎಚ್ ಪಿ ಇಂಡಿಯಾ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು(ಎಸ್ಎಂಬಿಗಳು) ಹಾಗೂ ಮನೆಯ ಬಳಕೆದಾರರಿಗೆ ಪ್ರಿಂಟಿಂಗ್ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೊಸ ಆಫರ್ ಗಳನ್ನು ಪ್ರಕಟಿಸಿದೆ.
ಹೆಚ್ಚುವರಿ ಎಚ್ ಪಿ ಟೋನರ್ ರೀಲೋಡ್ ಕಿಟ್ ನೊಂದಿಗೆ ಎಚ್ ಪಿ ನೆವರ್ ಸ್ಟಾಪ್ ಪ್ರಿಂಟರ್ ಬಂದಿದೆ. ಇದರಲ್ಲಿ ಸ್ಮಾರ್ಟ್ ಪ್ರಿಂಟಿಂಗ್ ತಂತ್ರಜ್ಞಾನ ಇರಲಿದ್ದು, ಸಣ್ಣ ಮತ್ತು ಮಧ್ಯಮ ವ್ಯವಹಾರಗಳು(ಎಸ್ಎಂಬಿಗಳು) ಹಾಗೂ ಮನೆಯ ಬಳಕೆದಾರರ ಪ್ರಿಂಟಿಂಗ್ ಅಗತ್ಯತೆಗಳನ್ನು ಪೂರೈಸುತ್ತದೆ. ನಿರ್ಬಂಧ ಇರುವ ಈ ಸಂದರ್ಭದಲ್ಲಿ ನಮ್ಮ ಗ್ರಾಹಕರು ಮನೆಯಿಂದ ಹೊರಗೆ ಹೋಗಿ ರೀಲೋಡ್ ಅನ್ನು ಖರೀದಿಸುವುದನ್ನು ತಪ್ಪಿಸಲು ಈ ಎಚ್ ಪಿ ನೆವರ್ ಸ್ಟಾಪ್ ನೆರವಾಗಲಿದೆ.
ಬಳಕೆದಾರರು 2020 ರ ಜುಲೈ 31 ರವರೆಗೆ ಕೂಪನ್ ಅನ್ನು ರಿಡೀಮ್ ಮಾಡಿಕೊಂಡು ಈ ಆಫರ್ ಅನ್ನು ಪಡೆಯಬಹುದಾಗಿದೆ. ಈ ಮುಕ್ತವಾದ, ಸುಲಭವಾಗಿ ಬಳಕೆ ಮಾಡಬಹುದಾದ ಎಚ್ ಪಿ ಟೋನರ್ ರೀಲೋಡ್ ಕಿಟ್ ಹೆಚ್ಚುವರಿಯಾಗಿ 2500 ಪುಟಗಳನ್ನು ಪ್ರಿಂಟ್ ತೆಗೆಯುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಈ ಎಚ್ ಪಿ ನೆವರ್ ಸ್ಟಾಪ್ ಪ್ರಿಂಟರ್ ಗಳು 5000 ಪುಟಗಳ ಪ್ರಿಂಟ್ ತೆಗೆಯುವ ಇನ್ ಬಾಕ್ಸ್ ಸಾಮರ್ಥ್ಯವನ್ನು ಹೊಂದಿರುತ್ತವೆ. ಈ ರಿಡೆಂಪ್ಷನ್ ಆಫರ್ ನಿಂದ ಗ್ರಾಹಕರು ಹೆಚ್ಚುವರಿಯಾಗಿ 2500 ಪುಟಗಳು ಸೇರಿ ಒಟ್ಟು 7500 ಪುಟಗಳ ಪ್ರಿಂಟ್ ತೆಗೆಯಬಹುದಾಗಿದೆ. ಈ ಮೂಲಕ ಅವರು ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ವೈಫೈ ಡೈರೆಕ್ಟ್ ವೇರಿಯೆಂಟ್ ಮಲ್ಟಿಫಂಕ್ಷನ್ ಮತ್ತು ಸಿಂಗಲ್-ಫಂಕ್ಷನ್ ಡಿವೈಸ್ ಗಳು ತಡೆರಹಿತವಾದ ಅನುಕೂಲಗಳನ್ನು ನೀಡುತ್ತದೆ. ಇದಲ್ಲದೇ, ಮೊಬೈಲ್ ಡಿವೈಸ್ ಗಳಿಗೆ ರೂಟರ್ ಲೆಸ್ ಸಂಪರ್ಕವನ್ನು ಕಲ್ಪಿಸುತ್ತದೆ. ಟೋನರ್ ಅಲರ್ಟ್ ಸಿಸ್ಟಂ ಮತ್ತು 15 ಸೆಕೆಂಡ್ ಗಳ ಮೆಸ್ ಫ್ರೀ ರೀಲೋಡ್ ಸಾಧನವು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಸಾಮಾನ್ಯ ಪ್ರಿಂಟಿಂಗ್ ಅಡೆತಡೆಗಳನ್ನು ನಿವಾರಿಸುತ್ತದೆ.

ಇದರಿಂದ 5000 ಪ್ರತಿಗಳನ್ನು ಪ್ರಿಂಟ್ ತೆಗೆಯಬಹುದಾಗಿದೆ ಮತ್ತು ಎಚ್ ಪಿ ಟೋನರ್ ಮೇಲಿನ ಶೇ.80 ರಷ್ಟು ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದಲ್ಲದೇ, ಎಚ್ ಪಿ ನೆವರ್ ಸ್ಟಾಪ್ 1200 ಸೀರೀಸ್ ಆಪ್ಟಿಕಲ್ ಕ್ಯಾರಕ್ಟರ್ ರೆಕಗ್ನಿಶನ್ (ಒಸಿಆರ್)ನಿಂದ ಸಕ್ರಿಯಗೊಂಡಿದೆ. ಈ ವೈಶಿಷ್ಟ್ಯತೆಯು ಸ್ಟೋರೇಜ್ ನಲ್ಲಿ ಅತ್ಯುತ್ತಮವಾದ ಉತ್ಪಾದಕತೆಯನ್ನು ಹೆಚ್ಚು ಮಾಡಲಿದೆ, ಸ್ಕ್ಯಾನ್ ದಾಖಲೆಗಳನ್ನು ಹುಡುಕುವುದು ಮತ್ತು ಎಡಿಟ್ ಮಾಡಲು ಸುಲಭವಾದ ಸಾಧನವಾಗಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications