ಫೋನ್ ಕರೆ ಬಂದಾಗ ಈ ಆಪ್ ಇರಲೇಬೇಕು!
ಸ್ಮಾರ್ಟ್ ಪೋನ್ ಬಳಕೆ ಜತೆಗೆ ವೈವಿಧ್ಯಮಯ ಆಪ್ಲಿಕೇಷನ್ ಗಳನ್ನು ಬಳಸುವುದು ಹೆಚ್ಚಾಗುತ್ತಿದೆ. ಆದರೆ, ಯಾರಾದ್ರೂ ಕರೆ ಮಾಡಿದಾಗ ಏನಾದರೂ ಬರೆದುಕೊಳ್ಳಬೇಕೆನಿಸಿದಾಗ ಮಾತ್ರ ಕಿರಿಕಿರಿ ಉಂಟಾಗುತ್ತದೆ. ಈಗ ಈ ಕಿರಿಕಿರಿಗೆ ವಿದಾಯ ಹೇಳಬಹುದು,
ಬೆಂಗಳೂರು, ಫೆಬ್ರವರಿ 27: ಸ್ಮಾರ್ಟ್ ಪೋನ್ ಬಳಕೆ ಜತೆಗೆ ವೈವಿಧ್ಯಮಯ ಆಪ್ಲಿಕೇಷನ್ ಗಳನ್ನು ಬಳಸುವುದು ಹೆಚ್ಚಾಗುತ್ತಿದೆ. ಆದರೆ, ಯಾರಾದ್ರೂ ಕರೆ ಮಾಡಿದಾಗ ಏನಾದರೂ ಬರೆದುಕೊಳ್ಳಬೇಕೆನಿಸಿದಾಗ ಮಾತ್ರ ಕಿರಿಕಿರಿ ಉಂಟಾಗುತ್ತದೆ. ಈಗ ಈ ಕಿರಿಕಿರಿಗೆ ವಿದಾಯ ಹೇಳಬಹುದು, ಒಂದು ಸರಳ ಆಂಡ್ರಾಯ್ಡ್ ಅಪ್ಲಿಕೇಷನ್ ಈ ಸಮಸ್ಯೆಯನ್ನು ದೂರಾಗಿಸಿದೆ.
ಯಾವುದಾದರೂ ಫೋನ್ ಕರೆ ಸ್ವೀಕರಿಸುತ್ತೀರಿ ಎಂದುಕೊಳ್ಳಿ. ಆಗ ಏನಾದ್ರೂ ಬರೆದುಕೊಳ್ಳಬೇಕೆನಿಸಿಕೊಂಡಾಗ ಪಕ್ಕದಲ್ಲರುವವರಿಗೆ ಸ್ವಲ್ಪ ನಂಬರ್ ನೋಟ್ ಮಾಡ್ಕೊಳ್ಳಿ ಎಂದು ಹಲ್ಲು ಗಿಂಜಬೇಕಾಗುತ್ತದೆ. ಇಲ್ಲಾ ಕಾಲ್ ಹೋಲ್ಡ್ ಮಾಡಿ ನೋಟ್ ಪ್ಯಾಡ್, ಕಲರ್ ನೋಟ್, ಎವರ್ ನೋಟ್ ಆಪ್ಸ್ ಹುಡುಕಬೇಕಾಗುತ್ತದೆ.
ಆದರೆ, ಈಗ ಕಾಲ್ ರೈಟ್ (call write) ಅಪ್ಲಿಕೇಷನ್ ಮೂಲಕ ಸುಲಭವಾಗಿ ನೋಟ್ ಮಾಡಿಕೊಳ್ಳಬಹುದು. ಅಥವಾ ನಿಮ್ಮ ಕೈ ಬರಹದಲ್ಲಿ ಬೇಕಾದ್ದು ಕೆತ್ತಬಹುದು.
ಫೋನ್ ಕಾಲ್ ರಿಸೀವ್ ಗೂ ಮುನ್ನ ಈ ಆಪ್ ಜೀವಂತವಾಗುತ್ತದೆ. ಕಾಲ್ ಕಟ್ ಆಗುತ್ತಿದ್ದಂತೆ ನೋಟ್ ಸೇವ್ ಆಗುತ್ತದೆ. ನಂತರ ಈ ನೋಟ್ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳಬಹುದು. ಈ ಅಪ್ಲಿಕೇಷನ್ ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ

ಅಪ್ಲಿಕೇಷನ್ ಡೌನ್ ಲೋಡ್ ಹೇಗೆ
* ಗೂಗಲ್ ಪ್ಲೇ ಸ್ಟೋರಿಗೆ ಹೋಗಿ call write ಎಂದು ಸರ್ಚ್ ಮಾಡಿ
* photonapps ಹೊರ ತಂದಿರುವ ನೀಲಿಚಿತ್ರದ ಥಂಬ್ ನೈಲ್ ಇರುವ ಅಪ್ಲಿಕೇಷನ್ ಮೇಲೆ ಕ್ಲಿಕ್ ಮಾಡಿ ಇನ್ ಸ್ಟಾಲ್ ಮಾಡಿಕೊಳ್ಳಿ. [ಕ್ಲಿಕ್ ಮಾಡಿ]
* ಯಾವುದಾದರೂ ಕರೆ ಬಂದಾಗ, ಈ ಅಪ್ ಗೆ ತಾನಾಗೆ ಚಲನೆ ಸಿಗಲಿದೆ.
* ಫೋನ್ ಕರೆಗೂ ಮುನ್ನವೇ ಆಪ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದೆ.
* ಕರೆ ಸ್ವೀಕರಿಸಿದ ಮೇಲೂ ನೋಟ್ ಮಾಡಿಕೊಳ್ಳಬಹುದು

ನಿಮ್ಮ ಅಗತ್ಯಕ್ಕೆ ತಕ್ಕಂತೆ ರೂಪಿಸಿ
ಮೊಬೈಲಿನಲ್ಲಿರುವ ಕಾಲ್ ರೈಟ್ ಅಪ್ಲಿಕೇಷನ್ ಕ್ಲಿಕ್ ಮಾಡಿ ನಂತರ Settings ಗೆ ಹೋಗಿ
1. App Status - On/Off
2. Notifications - On/Off
3. Close Automatically after Call - On/Off (ಕರೆ ನಂತರ ನೋಟ್ ಕೂಡ ಬಂದ್ ಆಗಲಿದೆ, ಜತೆಗೆ ಸೇವ್ ಆಗಲಿದೆ)
4. Eraser size
ಶಿಯೋಮಿ ಮೊಬೈಲ್ ನಲ್ಲಿ ಸೆಟ್ಟಿಂಗ್ ಬದಲಾಯಿಸಲು ಹೀಗೆ ಮಾಡಿ
settings -> installed apps -> call writer -> permission manager -> display pop up window -> accept ಮಾಡಿಕೊಳ್ಳಿ.

ಕೈ ಬರಹದಲ್ಲಿ ಗೀಚಬಹುದು
ಟೈಪ್ ಮಾಡಿ ನೋಟ್ ಬರೆದುಕೊಳ್ಳಬಹುದು ಅಥವಾ ಕೈಬರಹದಲ್ಲಿ ಪೈಂಟ್ ನಲ್ಲಿ ಪೆನ್ಸಿಲ್ ನಲ್ಲಿ ಗೀಚುವಂತೆ ನೋಟ್ ನಲ್ಲಿ ಏನಾದರೂ ಬರೆದುಕೊಳ್ಳಬಹುದು.

ಎಲ್ಲಿ ಬೇಕೋ ಹಂಚಿ
ಸೇವ್ ಆದ ನೋಟ್ ಗಳನ್ನು ಬದಲಾಯಿಸಬಹುದು. ಅಥವಾ ಹಾಗೆ ಹಂಚಿಕೊಳ್ಳಬಹುದು. ಇಮೇಲ್, ವಾಟ್ಸಪ್, ಹ್ಯಾಂಗ್ ಔಟ್ ಸೇರಿದಂತೆ ವಿವಿಧ ಸಾಮಾಜಿಕ ಜಾಲ ತಾಣಗಳಿಗೆ ಸುಲಭವಾಗಿ ಹಂಚಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ : https://www.facebook.com/photonapps












Click it and Unblock the Notifications