ಏರ್‌ಟೆಲ್‌ನಿಂದ ಉಚಿತವಾಗಿ 11GB ಡೇಟಾ ಪಡೆಯುವುದು ಹೇಗೆ?
ನವದೆಹಲಿ, ನವೆಂಬರ್ 30: ದೇಶದ ಅಗ್ರಮಾನ್ಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಹೊಸ ಆಫರ್ ನೀಡಿದೆ. ಹೊಸ 4 ಜಿ ಗ್ರಾಹಕರಿಗೆ ಅಥವಾ 4 ಜಿ ಗೆ ಅಪ್‌ಗ್ರೇಡ್ ಮಾಡುವ ಗ್ರಾಹಕರಿಗೆ ಏರ್‌ಟೆಲ್ ಉಚಿತವಾಗಿ 11 ಜಿಬಿ ಡೇಟಾವನ್ನು ಒದಗಿಸುತ್ತದೆ.
ಏರ್‌ಟೆಲ್ ಮೂಲಕ 11 ಜಿಬಿ ಡೇಟಾವನ್ನು ಉಚಿತವಾಗಿ ಪಡೆಯಲು ಎರಡು ಹಂತಗಳಿವೆ. ಇದು ಪ್ರಿಯೇಯ್ಡ್ ಗ್ರಾಹಕರಿಗೆ ಮಾತ್ರ ಮಾನ್ಯವಾಗಿರುತ್ತದೆ. ಹೊಸ ಏರ್‌ಟೆಲ್ 4 ಜಿ ಗ್ರಾಹಕರು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದಾಗ 5 ಜಿಬಿ ಡೇಟಾವನ್ನು ಪಡೆಯುತ್ತಾರೆ. ಈ ಎಲ್ಲಾ ಡೇಟಾವನ್ನು ಮೂರು ದಿನಗಳ ಅವಧಿಯಲ್ಲಿ (72 ಗಂಟೆಗಳಲ್ಲಿ) ಐದು 1 ಜಿಬಿ ಕೂಪನ್‌ಗಳ ರೂಪದಲ್ಲಿ ಅಪ್ಲಿಕೇಶನ್ ಮೂಲಕ ಜಮಾ ಮಾಡಲಾಗುತ್ತದೆ.
ಹೊಸ ಮೊಬೈಲ್ ಸಂಖ್ಯೆಯನ್ನು ಸಕ್ರಿಯಗೊಳಿಸಿದ ಒಂದು ತಿಂಗಳೊಳಗೆ ನೀವು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನೀವು ಐದು ಕೂಪನ್‌ಗಳಲ್ಲಿನ ಡೇಟಾ ಪಡೆಯಲು ನೀವು ಆ್ಯಪ್‌ನ 'ಮೈ ಕೂಪನ್' ವಿಭಾಗಕ್ಕೆ ಹೋಗಿ ಅವುಗಳನ್ನು ಕ್ಲೈಮ್ ಮಾಡಬಹುದು. ಆ್ಯಪ್‌ನಲ್ಲಿ ಕ್ರೆಡಿಟ್ ಮಾಡಿದ 90 ದಿನಗಳಲ್ಲಿ 1 ಜಿಬಿ ಡೇಟಾ ಕೂಪನ್ ಅನ್ನು ಪುನಃ ಪಡೆದುಕೊಳ್ಳಬಹುದು. ನೀವು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡದಿದ್ದರೆ, ನೀವು 5 ಜಿಬಿ ಬದಲಿಗೆ 2 ಜಿಬಿ ಡೇಟಾವನ್ನು ಪಡೆಯುತ್ತೀರಿ.

ಏರ್‌ಟೆಲ್ ತನ್ನ ಅನಿಯಮಿತ ಪ್ಯಾಕೇಜ್ ತೆಗೆದುಕೊಳ್ಳುವ ಗ್ರಾಹಕರಿಗೆ 6 ಜಿಬಿ ಡೇಟಾವನ್ನು ಉಚಿತವಾಗಿ ನೀಡುತ್ತದೆ. 84 ದಿನಗಳ ವ್ಯಾಲಿಡಿಟಿಯ 598 ರೂ.ಗಿಂತ ಹೆಚ್ಚಿನ ಪ್ಯಾಕೇಜ್ ಅನ್ನು ರೀಚಾರ್ಜ್ ಮಾಡಿದರೆ ಗ್ರಾಹಕರು 6 ಜಿಬಿ ಡೇಟಾವನ್ನು ಉಚಿತವಾಗಿ ಪಡೆಯುತ್ತಾರೆ. ಈ ಎಲ್ಲಾ ಡೇಟಾವು ಒಮ್ಮೆಗೇ ಬರುವುದಿಲ್ಲ. 6 ಜಿಬಿ ಉಚಿತ ಡೇಟಾ ಕೂಪನ್‌ಗಳ ರೂಪದಲ್ಲಿ ಬರುತ್ತದೆ.












Click it and Unblock the Notifications