ಗೂಗಲ್ ಪೇ ಮೂಲಕ ವ್ಯವಹರಿಸಿ, 1 ಲಕ್ಷ ತನಕ ಬಹುಮಾನ ಗೆಲ್ಲಿ!

ಬೆಂಗಳೂರು, ಆಗಸ್ಟ್ 29: ಗೂಗಲ್ ತನ್ನ ಮೊಬೈಲ್ ಪಾವತಿ ಬ್ಯಾಂಕಿಂಗ್ ಆಪ್ ತೇಜ್ ನ ಮೊದಲ ವರ್ಷಾಚರಣೆ ಸಂಭ್ರಮಕ್ಕೆ ಹೊಸ ಆಫರ್ ನೀಡುತ್ತಿದೆ.

ಮಂಗಳವಾರದಂದು ತೇಜ್ ಆಪ್ಲಿಕೇಷನ್ ಗೆ ಗೂಗಲ್ ಪೇ ಎಂದು ಮರುನಾಮಕರಣಗೊಳಿಸಿದ ಬೆನ್ನಲ್ಲೇ ಡಿಜಿಟಲ್ ಹಣಪಾವತಿ,ವ್ಯವಹಾರ ಮಾಡುವ ಬಳಕೆದಾರರು ಒಂದು ಲಕ್ಷ ರು ತನಕ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸುತ್ತಿದೆ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ತೇಜ್ ಹೆಸರಿನಲ್ಲೇ ಲಭ್ಯವಿದ್ದು, ಸುಮಾರು 50 ಮಿಲಿಯನ್ ಅದೃಷ್ಟಶಾಲಿಗಳಿಗೆ 5 ರು ಗಳಿಂದ 1 ಲಕ್ಷ ರು ತನಕ ಬಹುಮಾನ ಗೆಲ್ಲುವ ಅವಕಾಶವಿದೆ.

Google Pay offers users golden chance to win Rs 1,00,000 reward – How to get

ಗೂಗಲ್ ಪೇ ಬಳಸಿ ವ್ಯಕ್ತಿಯಿಂದ ವ್ಯಕ್ತಿಗೆ(ಪಿ2ಪಿ) ಮತ್ತು ಇತರ ಗೂಗಲ್ ಪೇ ಬಳಕೆದಾರರಿಗೆ ನಗದುರೂಪದ ವಹಿವಾಟುಗಳು,ಇತರ ಬ್ಯಾಂಕ್ ಖಾತೆಗಳಿಗೆ ಹಣಪಾವತಿ,ವ್ಯಾಪಾರಿಗಳಿಗೆ ಹಣಪಾವತಿ,ಗೂಗಲ್ ತೇಜ್ ಯುಪಿಐ ಐಡಿ ಬಳಸಿ ಪಾವತಿ ಮುಂತಾದ ಕನಿಷ್ಟ ಐದು ಬಗೆಯ ವಹಿವಾಟುಗಳನ್ನು ನಡೆಸುವವರು ಈ ಕೊಡುಗೆಗೆ ಅರ್ಹರಾಗುತ್ತಾರೆ. ಸೆಪ್ಟೆಂಬರ್ 18ರ 9 ಗಂಟೆಯೊಳಗೆ ಈ ಎಲ್ಲಾ ವ್ಯವಹಾರಗಳು ದಾಖಲಾಗಬೇಕು.

* ಕೊಡುಗೆಗಳಿಗೆ ಅರ್ಹರಾಗಲು ಬಳಕೆದಾರರು ಗೂಗಲ್ ಪ್ಲೇಸ್ಟೋರಿನಲ್ಲಿ ತೇಜ್ ಆಪ್ ಅಪ್ಗ್ರೇಡ್ ಮಾಡಿಕೊಂಡಿರಬೇಕು.
* ಪ್ರತಿ ತೇಜ್ ಗ್ರಾಹಕರು ತೇಜ್ ಕ್ರೆಡೆನ್ಶಿಯಲ್ಸ್‌ನ ಒಂದು ಸೆಟ್ ಅನ್ನು ಮಾತ್ರ ಬಳಸಬಹುದಾಗಿದೆ.
* ಪ್ರತಿ ಬಹುಮಾನದ ಮೊತ್ತ ಅವರ ನಿಯೋಜಿತ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
* ಪಾವತಿಯನ್ನು ಸ್ವೀಕರಿಸಲು ಬಳಕೆದಾರರು ಯುಪಿಐ-ಎನೇಬಲ್ಡ್ ಬ್ಯಾಂಕ್ ಖಾತೆಯನ್ನು ತಮ್ಮ ಆಯಾ ತೇಜ್ ಖಾತೆಗಳಿಗೆ ಜೋಡಣೆಗೊಳಿಸಿರಬೇಕು.
* ಬಹುಮಾನಗಳ ಮೇಲೆ ಅನ್ವಯಿಸುವ ತೆರಿಗೆಯನ್ನು ಗೂಗಲ್ ಕಡಿತಗೊಳಿಸಬಹುದು.
* ತಮಿಳುನಾಡು ಹೊರತುಪಡಿಸಿ ದೇಶದ ಎಲ್ಲೆಡೆ ಈ ಯೋಜನೆ ಜಾರಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+