ಎಚ್ಚರ, ಏನನ್ನಾದರೂ ಮಾರಲು ಸಿದ್ಧವಿರುವ ಲಾಭಕೋರ ಜಗತ್ತಿದು...

By: ಕೆಜಿ ಕೃಪಾಲ್
Subscribe to Oneindia Kannada

ಇಂದಿನ ವ್ಯವಹಾರಗಳು ಯಾವ ರೀತಿಯಿವೆ ಎಂದರೆ ಎಲ್ಲವೂ ಅಲಂಕಾರಿಕ. ವಿಂಡೋ ಡ್ರೆಸ್ಸಿಂಗ್ ನಿಂದ ಟ್ರಿಮ್ ಮಾಡಿ, ಮೇಲ್ನೋಟಕ್ಕೆ ಸದೃಢವಾಗಿದೆ ಎಂಬ ಭಾವನೆ ಮೂಡಿಸುತ್ತದೆ. ಆದರೆ ಆಂತರಿಕವಾಗಿ ಆತಂಕಕಾರಿಯಾಗಿದೆ. ಗ್ಲೋಬಲೈಸೇಶನ್ ಮುಂಚೆ ತೃಪ್ತಿಕರವಾಗಿದ್ದ ಜೀವನ, ಆ ನಂತರ ಹೊರ ದೇಶಗಳ ವ್ಯಾಮೋಹ, ಪರಿಸರದಲ್ಲಿ ಇತರರ ಪ್ರಭಾವಕ್ಕೆ ಒಳಗಾದವು.

ಆದ್ದರಿಂದಲೇ ಅನವಶ್ಯಕ ಆಚರಣೆಗಳು ಅಳವಡಿಸಿಕೊಂಡು ನೆಮ್ಮದಿ, ತೃಪ್ತಿ ಎಂಬುದು ಈಗ ಕೇವಲ ಡಿಕ್ಷನರಿಯಲ್ಲಿ ಅಡಗಿಕುಳಿತಿವೆ. ಇಂದು ಕಾರ್ಪೊರೇಟ್ ಗಳು ಭಯಂಕರ ಸ್ಪರ್ಧೆ ಎದುರಿಸುತ್ತಿವೆ. ಅದು ಎಷ್ಟರ ಮಟ್ಟಿಗೆ ನಡೆಯುತ್ತಿವೆ ಅಂದರೆ, ವ್ಯವಹಾರಗಳಲ್ಲಿ 'ನೈತಿಕತೆ' ಯನ್ನು ಕರಗಿಸುತ್ತಿದೆ.[300 ಕೋಟಿ ರುಪಾಯಿ ಮಾರಾಟ ಮಾಡಿದ ಒಂದು ರುಪಾಯಿ ಕ್ಯಾಂಡಿ]

ಮೊದಲೆಲ್ಲ ಸಿನಿಮಾ ನೋಡಲು ಥಿಯೇಟರ್ ಗಳಿಗೆ ಹೋಗುತ್ತಿದ್ದೆವು. ಅದು ನಿಜಕ್ಕೂ ಮನರಂಜನೆ, ಮಜಾ ನೀಡುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ದೊಡ್ಡ ಶಾಪಿಂಗ್ ಮಾಲ್ ಗಳಿಗೆ ಹೋಗಿ ಅಲ್ಲಿ ಸಿನಿಮಾ ನೋಡಿ, ಈಗಿನ ಯುವ ಜನತೆಗೆ ಸಾಮಾನ್ಯ ಚಿತ್ರಮಂದಿರಗಳಿಗೆ ಹೋಗುವ ಹವ್ಯಾಸವೇ ಕರಗಿಹೋಗಿದೆ.

ಜತೆಗೆ ಅನೇಕ ಚಿತ್ರಮಂದಿರಗಳು ಅಸ್ತಿತ್ವವನ್ನೇ ಕಳೆದುಕೊಂಡು ಕಮರ್ಷಿಯಲ್ ಕಾಂಪ್ಲೆಕ್ಸ್ ಗಳಾಗಿ ಪರಿವರ್ತನೆಗೊಂಡಿವೆ. ಸಾಮಾನ್ಯವಾಗಿ ಪಾಪ್ ಕಾರ್ನ್, ಸಾಫ್ಟ್ ಡ್ರಿಂಕ್ಸ್ ಗಳು ಥಿಯೇಟರ್ ಗಳಿಗೆ ಹೋದಾಗ ಖರೀದಿಸುವುದು ಅಭ್ಯಾಸ. ಆದರೆ ಶಾಪಿಂಗ್ ಮಾಲ್ ಗಳಲ್ಲಿನ ಮಲ್ಟಿ ಪ್ಲೆಕ್ಸ್ ಗಳಲ್ಲಿ ಹೊರಗಿನಿಂದ ತಂದ ತಿನಿಸುಗಳನ್ನು ಒಳಬಿಡುವುದಿಲ್ಲ, ಅಲ್ಲಿಯೇ ಖರೀದಿಸಬೇಕು.[ಶುಲ್ಕ, ದಂಡ ನಿಯಮ ಮರುಪರಿಶೀಲಿಸಿ: ಬ್ಯಾಂಕುಗಳಿಗೆ ಕೇಂದ್ರದ ಮನವಿ]

ನಿಯಮ ಪಾಲಿಸಲೇ ಬೇಕು

ನಿಯಮ ಪಾಲಿಸಲೇ ಬೇಕು

ಹೊರಗೆ ಖರೀದಿಸುವ ಮತ್ತು ಒಳಗೆ ಖರೀದಿಸುವ ತಿನಿಸುಗಳ ಬೆಲೆಯಲ್ಲಿ ರೂಪಾಯಿ ಮತ್ತು ಡಾಲರ್ ಗಳಷ್ಟು ವ್ಯತ್ಯಾಸವಿರುತ್ತದೆ. ಆದರೆ ನಿಯಮ ಮಾಡಿದ್ದಾರೆ. ಅಲ್ಲಿ ಖರೀದಿಸುವುದು ಅನಿವಾರ್ಯವಾಗಿದೆ. ಇದು ಈಗಿನ ದಿನಗಳ ಜೀವನ ಶೈಲಿಯ ಬದಲಾವಣೆ.

ಮೂಲ ಉದ್ದೇಶವೇ ಮರೆತಿದ್ದಾರೆ

ಮೂಲ ಉದ್ದೇಶವೇ ಮರೆತಿದ್ದಾರೆ

ಎದುರಾಳಿಯು ದುರ್ಬಲನಾದಲ್ಲಿ ನನ್ನ ವ್ಯವಹಾರ ಚೆನ್ನಾಗಿರುತ್ತದೆ ಎಂಬ ಆಧಾರದ ಮೇಲೆ ನಡೆಯುತ್ತಿರುವ ಈ ಸ್ಪರ್ಧೆಯು ಬದುಕಿ, ಬದುಕಲು ಬಿಡಿ ನೀತಿಗೆ ವಿರುದ್ಧವಾಗಿದ್ದು, ಇದು ಪ್ರೊಗ್ರೆಸ್ಸಿವ್ ಯೋಚನೆಯಲ್ಲ. ಎಲ್ಲ ಯೋಜನೆಗಳಲ್ಲೂ ನನ್ನತನ ಅಂದರೆ ನನಗೆಷ್ಟು ಸಿಗುತ್ತದೆ, ನಾನು ಇದರಿಂದ ಎಷ್ಟು ಲಾಭವಾಗುತ್ತದೆ ಎಂಬ ದೃಷ್ಟಿಯಿಂದ ಮಾತ್ರ ನೋಡಲಾಗುತ್ತಿದೆ. ಮೂಲ ಉದ್ದೇಶ ಮರೆತುಹೋಗುವಂತಾಗಿದೆ.

ಸುದ್ದಿಗೆ ನಂತರದ ಪ್ರಾಮುಖ್ಯ

ಸುದ್ದಿಗೆ ನಂತರದ ಪ್ರಾಮುಖ್ಯ

ವ್ಯಾವಹಾರಿಕತೆ ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ, ಪ್ರಖ್ಯಾತ ಪತ್ರಿಕೆಗಳ ಮುಖಪುಟಗಳನ್ನೇ ನುಂಗಿಹಾಕಿದೆ. ಪತ್ರಿಕೆಯ ಮುಖಪುಟವು ಪ್ರಚಾರ ಪುಟವಾಗಿ, ಮುಖಪುಟದ ಸುದ್ದಿಯು ನಂತರದ ಪುಟಗಳಲ್ಲಿ ಸ್ಥಾನ ಪಡೆದಿದೆ.

ಇ ಕಾಮರ್ಸ್ ಕಂಪನಿ

ಇ ಕಾಮರ್ಸ್ ಕಂಪನಿ

ಈಗಿನ ವ್ಯವಹಾರ ಲಾಭ ಗಳಿಕೆಗಿಂತ ಟರ್ನ್ ಓವರ್ ಗೆ ಹೆಚ್ಚು ಇಂಪಾರ್ಟನ್ಸ್ ನೀಡಿದೆ. ಈ ಕಾರಣಕ್ಕೆ ಕಾರ್ಪೊರೇಟ್ ಗಳು ಹೆಚ್ಚು ಒತ್ತಡಕ್ಕೊಳಗಾಗಿವೆ. ಟರ್ನ್ ಓವರ್ ಹೆಚ್ಚಾದಲ್ಲಿ ಪ್ರಾಫಿಟ್ ಮಾರ್ಜಿನ್ ಕಡಿಮೆ ಮಾಡಿ, ಗ್ರಾಹಕರನ್ನು ಆಕರ್ಷಿಸಲು ಯತ್ನಿಸುತ್ತಿದೆ. ಈ ತರಹದ ವ್ಯವಹಾರದ ಫಲಿತಾಂಶವನ್ನು ಈಗಿನ ಇ ಕಾಮರ್ಸ್ ಕಂಪನಿಗಳ ಪರಿಸ್ಥಿತಿಯನ್ನು ಕಂಡಾಗ ಅರಿವಾಗುವುದು.

600 ನೌಕರಿಗೆ ಕತ್ತರಿ

600 ನೌಕರಿಗೆ ಕತ್ತರಿ

ಈ ಪದ್ಧತಿ ಅಳವಡಿಕೆಯಿಂದ ತನ್ನ ಆರ್ಥಿಕ ಸ್ಥಿರತೆ ಕಂಡುಕೊಳ್ಳಲು ಸಾಧ್ಯವಾಗದೆ ಪ್ರಮುಖ ಕಂಪನಿಯೊಂದರಲ್ಲಿ ಸುಮಾರು 600 ನೌಕರಿಗೆ ಕತ್ತರಿ ಬೀಳಲಿದೆ ಎಂಬುದು ಗಮನಾರ್ಹ. ಸಾವಿರಾರು ಕೋಟಿ ರುಪಾಯಿ ಹಾನಿ ಅನುಭವಿಸಿದರೂ ವೆಂಚರ್ ಕ್ಯಾಪಿಟಲ್ ಮೂಲಕ ಕಂಪನಿಯ ಬ್ರಾಂಡ್ ಆಧಾರದ ಮೇಲೆ ಹಣ ಲಭ್ಯವಾಗುವುದು ಇ ಕಾಮರ್ಸ್ ಕಂಪನಿಗಳು ಅನುಭವಿಸುತ್ತಿರುವ ನಷ್ಟ ಮತ್ತು ಅವುಗಳು ಹಾಳುಗೆಡವುತ್ತಿರುವ ವ್ಯಾವಹಾರಿಕ ಪರಿಸರ ಅನೇಕ ಸಣ್ಣ ಸಣ್ಣ ಅಂಗಡಿಗಳಿಗೆ ಉಳಿಗಾಲವಿಲ್ಲದಂತೆ ಮಾಡಿವೆ.

ಘಟಾನುಘಟಿ ಕಾರ್ಪೊರೇಟ್ ಗಳ ಆರ್ಥಿಕ ಸಂಕಷ್ಟ

ಘಟಾನುಘಟಿ ಕಾರ್ಪೊರೇಟ್ ಗಳ ಆರ್ಥಿಕ ಸಂಕಷ್ಟ

ಈ ವ್ಯವಸ್ಥೆ ಹೆಚ್ಚು ದಿನ ನಡೆಯುವುದಿಲ್ಲ. ಕುಳಿತು ತಿಂದರೆ ಕುಡಿಕೆ ಹಣ ಸಾಲದು ಎಂದಾದರೆ, ಈ ಪದ್ಧತಿ ಇನ್ನೂ ಕೆಳಮಟ್ಟದ್ದು. ಹಾಗಾಗಿ ಘಟಾನುಘಟಿ ಕಾರ್ಪೊರೇಟ್ ಗಳು ಆರ್ಥಿಕ ಸಂಕಷ್ಟಕ್ಕೊಳಗಾಗಿವೆ. ಸಾವಿರಾರು ಕೋಟಿ ನಷ್ಟ ಅನುಭವಿಸಿದರೂ ಅವುಗಳ ಬ್ರಾಂಡ್ ಆಧಾರದ ಮೇಲೆ ವೆಂಚರ್ ಕ್ಯಾಪಿಟಲ್ ಮೂಲಕ ಅಗಾಧವಾದ ಮಟ್ಟದಲ್ಲಿ ಹಣ ಹರಿದು ಬರುತ್ತದೆ. ಇನ್ನು ಹೂಡಿಕೆ ಮಾಡಿದ ಹಣ ಏನಾಗುತ್ತದೆಂಬುದು ಕಲ್ಪಿಸಿಕೊಳ್ಳಬಹುದು.

ಬ್ಯಾಂಕ್ ಗಳಲ್ಲಿ ಎನ್ ಪಿಎ ಹೆಚ್ಚಾಗಿವೆ

ಬ್ಯಾಂಕ್ ಗಳಲ್ಲಿ ಎನ್ ಪಿಎ ಹೆಚ್ಚಾಗಿವೆ

ಆದ್ದರಿಂದ ಬ್ಯಾಂಕ್ ಗಳಲ್ಲಿ ಎನ್ ಪಿಎ (ಅನುತ್ಪಾದಕ ಸಾಲ)ಗಳು ಹೆಚ್ಚಾಗಿವೆ. ಈ ಮೂಲಕ ಬ್ಯಾಂಕ್ ಗಳು ಸಹ ಹೆಚ್ಚು ಒತ್ತಡಕ್ಕೊಳಗಾಗಿವೆ. ಈ ಹಿಂದೆ ಬ್ಯಾಂಕ್ ಗಳಿಂದ ಒಂದು ದಿನಕ್ಕೆ 50 ಸಾವಿರಕ್ಕೂ ಹೆಚ್ಚಿನ ಹಣ ಹಿಂತೆಗೆದರೆ ಶೇ 0.1ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿತ್ತು, ಅದು ಸೇವಿಂಗ್ಸ್ ಬ್ಯಾಂಕ್ ಖಾತೆಗಳನ್ನು ಹೊರತುಪಡಿಸಿ ವಿಧಿಸಲಾದ ತೆರಿಗೆಯಾಗಿದ್ದುದು ಗಮನಾರ್ಹ.

ಲಾಭಗಳಿಕೆ ದೃಷ್ಟಿ

ಲಾಭಗಳಿಕೆ ದೃಷ್ಟಿ

ಈ ಕ್ರಮದಿಂದ ಸಾಮಾನ್ಯರ ಮೇಲೆ ಪ್ರಭಾವ ಬೀರದಿದ್ದರೂ ಹಿಂಪಡೆಯಲಾಯಿತು 2005ರಿಂದ 2009ರವರೆಗೂ ಈ ತೆರಿಗೆ ಜಾರಿಯಾಗಿತ್ತು. ಆಗ ವಿಧಿಸಿದ ತೆರಿಗೆಯು ಸರ್ಕಾರದ ಬೊಕ್ಕಸಕ್ಕೆ ಸೇರುತ್ತಿತ್ತು. ಆದರೆ ಈಗ ಬ್ಯಾಂಕ್ ಗಳು ವಿಧಿಸಿರುವುದು ಸೇವಿಂಗ್ಸ್ ಬ್ಯಾಂಕ್ ಖಾತೆಗಳಿಗೆ ಮಾತ್ರ. ಇದು ಕೇವಲ ತಮ್ಮ ಖಜಾನೆ ತುಂಬಿಸಿ ಕೊಳ್ಳುವ ಲಾಭಗಳಿಕೆ ದೃಷ್ಟಿಯಿಂದ ಮಾತ್ರ.

ಪಾಕಿಸ್ತಾನ, ಭಾರತ ಮತ್ತು ಗ್ರೀಸ್ ದೇಶಗಳಲ್ಲಿ

ಪಾಕಿಸ್ತಾನ, ಭಾರತ ಮತ್ತು ಗ್ರೀಸ್ ದೇಶಗಳಲ್ಲಿ

ನಿಮಗೆ ಗೊತ್ತಿರಲಿ, ಪಾಕಿಸ್ತಾನ, ಭಾರತ ಮತ್ತು ಗ್ರೀಸ್ ದೇಶಗಳಲ್ಲಿ ಮಾತ್ರ ಇದುವರೆಗೂ ಈ ರೀತಿ ತೆರಿಗೆ ವಿಧಿಸಲಾಗಿದೆ. 2015ರಲ್ಲಿ ಗ್ರೀಸ್ ದೇಶವು ದಿವಾಳಿಯ ಅಂಚಿನಲ್ಲಿದ್ದಾಗ, ನಾಗರಿಕರು ತಮ್ಮ ಹಣವನ್ನು ಬ್ಯಾಂಕ್ ಗಳಿಂದ ಪೂರ್ಣವಾಗಿ ಹಿಂಪಡೆಯಲು ಮುಂದಾದ್ದರಿಂದ 'ಕ್ಯಾಶ್ ಪಾಯಿಂಟ್ ಟ್ಯಾಕ್ಸ್' ಎಂದು ಜಾರಿಗೊಳಿಸಿತ್ತು.

ಮುಂಚಿನ ನಂಬಿಕೆ ಈಗಿಲ್ಲ

ಮುಂಚಿನ ನಂಬಿಕೆ ಈಗಿಲ್ಲ

ನಮ್ಮಲ್ಲಿ ಹಿಂದಿನಿಂದ ಬೆಳೆದುಬಂದ ನಂಬಿಕೆ ಏನೆಂದರೆ ಬ್ಯಾಂಕ್ ಗಳು ಸರಿಯಾಗಿರುತ್ತವೆ. ನಮ್ಮ ಖಾತೆಯಲ್ಲಿರುವ ಹಣವು ಸುರಕ್ಷಿತ. ಯಾವ ಕಾರಣಕ್ಕೂ ವ್ಯತ್ಯಯವಾಗುವುದಿಲ್ಲ ಎಂಬುದು ಓಬೀರಾಯನ ಕಾಲದ ನಂಬಿಕೆ. ಈಗಿನ ಬೆಳವಣಿಗೆಗಳನ್ನು ಕಂಡಾಗ, ನಮ್ಮ
ಖಾತೆಯಲ್ಲಿರುವ ಹಣ ಸರಿಯಾಗಿದೆಯೇ, ಯಾವುದೇ ಕಾರಣಕ್ಕಾಗಿ ನಮ್ಮ ಖಾತೆಯಿಂದ ಹಣ ಡೆಬಿಟ್ ಆಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಹಣವು ಕರಗುವ ಸಾಧ್ಯತೆ

ಹಣವು ಕರಗುವ ಸಾಧ್ಯತೆ

ಯಾವುದಾದರೂ ಎಂಟ್ರಿಗಳು ನಮ್ಮದಲ್ಲದಿದ್ದರೆ ಅದನ್ನು ತಕ್ಷಣ ಬ್ಯಾಂಕ್ ಗೆ ತಿಳಿಸಿ ಸರಿಪಡಿಸಿಕೊಳ್ಳಬೇಕು. ಹೊಸ ರೂಪದ ಚಾರ್ಜ್ ಗಳೇನಾದರೂ ಡೆಬಿಟ್ ಆಗಿದ್ದಲ್ಲಿ ಬ್ಯಾಂಕ್ ನವರಲ್ಲಿ ಮಾತನಾಡಿ, ಸರಿಪಡಿಸಿಕೊಳ್ಳಲೇಬೇಕು. ಇಲ್ಲದಿದ್ದಲ್ಲಿ ಖಾತೆಯಲ್ಲಿರುವ ಹಣವು ಕರಗುವ ಸಾಧ್ಯತೆ ಇರುತ್ತದೆ.

ಕೇವಲ ಹಣ ಗಳಿಸುವ ಗುರಿ

ಕೇವಲ ಹಣ ಗಳಿಸುವ ಗುರಿ

ಬ್ಯಾಂಕ್ ಗಳಲ್ಲಿ ವಿವಿಧ ರೂಪದ ಹೊಸ ಚಾರ್ಜ್/ ಡೆಬಿಟ್ ಗಳೇನಾದರೂ ವಿಧಿಸಿದ್ದಲ್ಲಿ ತಕ್ಷಣ ವಿಚಾರಿಸಿಕೊಳ್ಳುವುದು ಒಳಿತು. ಈಗ ಕೇವಲ ಹಣ ಗಳಿಸುವ ಗುರಿ ಮುಖ್ಯವೇ ಹೊರತು ಅದಕ್ಕನುಸರಿಸಬೇಕಾದ ದಾರಿ ನಗಣ್ಯವಾಗಿದೆ. ಈಗ ಖಾಸಗಿ ಬ್ಯಾಂಕ್ ಗಳು ಜಾರಿಗೊಳಿಸಿದ ಈ ಕ್ಯಾಶ್ ವಿತ್ ಡ್ರಾವಲ್ ಚಾರ್ಜಸ್, ಅದು ಸೇವಿಂಗ್ಸ್ ಬ್ಯಾಂಕ್ ಖಾತೆಯ ಮೇಲೆ ವಿಧಿಸಿರುವುದು ಅವುಗಳ ದಿವಾಳಿತನವೇ?

465 ಬ್ಯಾಂಕ್ ಗಳು ಫೇಲ್

465 ಬ್ಯಾಂಕ್ ಗಳು ಫೇಲ್

ಇದನ್ನು ಖಂಡಿಸದಿದ್ದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಸಹ ಈ ದಾರಿ ಹಿಡಿಯಬಹುದು. 2008ರಿಂದ 2012ರವರೆಗೆ ಅಮೆರಿಕಾದಲ್ಲಿ ಸುಮಾರು 465 ಬ್ಯಾಂಕ್ ಗಳು ಫೇಲ್ ಆಗಿದ್ದರಿಂದ ಮುಚ್ಚಲಾಯಿತು ಎಂಬುದು ನೆನಪಿನಲ್ಲಿಟ್ಟಿರಬೇಕು. ಖಾಸಗಿ ವಲಯದ ಬ್ಯಾಂಕ್ ಗಳ ಈ ನಡತೆಯನ್ನು, ಭಾರತೀಯ ಬ್ಯಾಂಕ್ ಗಳ ಹಿತದ ದೃಷ್ಟಿಯಿಂದ ಕೇಂದ್ರ ಸರ್ಕಾರ, ಆರ್ ಬಿ ಐ ನಿಯಂತ್ರಿಸಿ ಕಡಿವಾಣ ಹಾಕಲೇಬೇಕಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
How corporates changed the strategy of profit making, how globalisation affects life style in India, Stock broker and columnist KG Kripal explains.
Please Wait while comments are loading...