ಬೆಂಗ್ಳೂರಿನ ಹೋಂಡಾ ಕಂಪನಿ ಈಗ ವಿಶ್ವದಲ್ಲೇ ನಂಬರ್ ಒನ್!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 2: ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಹೋಂಡಾ ಮೋಟರ್ ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ (ಎಚ್ಎಂಎಸ್ಐ), ನರಸಾಪುರದಲ್ಲಿ ಹೊಂದಿರುವ ತನ್ನ ದ್ವಿಚಕ್ರ ವಾಹನ ತಯಾರಿಕಾ ಕಾರ್ಖಾನೆಯ ನಾಲ್ಕನೇ ಘಟಕವನ್ನು ಮಂಗಳವಾರ ಉದ್ಘಾಟಿಸಿತು.

ಈ ಮೂಲಕ, ಜಗತ್ತಿನ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಘಟಕವಾಗಿ ಅದು ಹೊರಹೊಮ್ಮಿದ್ದು, ಬೆಂಗಳೂರಿಗೂ ಇದು ಮತ್ತೊಂದು ಹಿರಿಮೆಯನ್ನು ತಂದುಕೊಟ್ಟಿದೆ.

Honda Two-Wheelers Expands Production; Karnataka Factory World's Largest Honda Plant

ಈ ಹೊಸ ಘಟಕದಲ್ಲಿಪ್ರತಿ ವರ್ಷ ಹೋಂಡಾದ 6 ಲಕ್ಷ ದ್ವಿಚಕ್ರ ವಾಹನಗಳು ಉತ್ಪಾದನೆಯಾಗಲಿವೆ ಎಂದು ಕಂಪನಿ ಹೇಳಿದೆ. ಅಲ್ಲದೆ, ಬೆಂಗಳೂರಿನಲ್ಲಿರುವ ಒಟ್ಟಾರೆ ಹೊಂಡಾದ 4 ನಾಲ್ಕು ಘಟಕಗಳಿಂದ 24 ಲಕ್ಷ ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವುದಾಗಿ ಅದು ಹೇಳಿದೆ.

Bengaluru shamed again CCTV footage | OneIndia Kannada

ವಿಶ್ವದ ನಾನಾ ದೇಶಗಳಲ್ಲಿ ದ್ವಿಚಕ್ರ ವಾಹನಗಳ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದ್ದು, 2016-17ನೇ ಆರ್ಥಿಕ ವರ್ಷದಲ್ಲಿ ಜಗತ್ತಿನ ಒಟ್ಟು ದ್ವಿಚಕ್ರ ವಾಹನ ಬೇಡಿಕೆಯಲ್ಲಿ ಶೇ. 28ರಷ್ಟನ್ನು ಭಾರತವೇ ಪೂರೈಸಿದೆ. ಈ ಪೂರೈಕೆಯಲ್ಲಿ ಹೊಂಡಾ ಕಂಪನಿಯ ಪಾಲು ಅಧಿಕವಾಗಿದ್ದು ಆ ಮೂಲಕ ಜಗತ್ತಿನ ಅತಿ ಹೆಚ್ಚು ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆಯಾಗಿ ಹೊಂಡಾ ಬೆಳೆದು ನಿಂತಿದೆ ಎಂದು ಕಂಪನಿ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Honda Motorcycle and Scooter India (HMSI) has inaugurated the fourth assembly line at the company's Narsapura plant near Bengaluru, Karnataka, increasing annual production by 6 lakh units.
Please Wait while comments are loading...