ಭಾರತದಲ್ಲಿ ಸ್ವಿಸ್ ವಾಚುಗಳ ಮಾರಾಟಕ್ಕೆ ಮುಂದಾದ ಟೈಟಾನ್

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 20: ಟೈಟಾನ್ ಕಂಪನಿ ಲಿಮಿಟೆಡ್ ನ ಭಾರತದ ಬೃಹತ್ ಮಲ್ಟಿಬ್ರ್ಯಾಂಡ್ ಕೈಗಡಿಯಾರ ರೀಟೆಲರ್ ಹೆಲಿಯೋಸ್, ಜನಪ್ರಿಯ ಸ್ವಿಸ್ ಕೈಗಡಿಯಾರ ಉತ್ಪಾದಕ ರೇಮಂಡ್ ವೇಲ್ ಜೊತೆ ಪಾಲುದಾರಿಕೆ ಘೋಷಿಸಿದೆ. ಈ ಪಾಲುದಾರಿಕೆಯೊಂದಿಗೆ ರೇಮಂಡ್ ವೇಲ್ ಭಾರತದಲ್ಲಿ ಹೆಲಿಯೋಸ್ ಮತ್ತು ಎಥೋ್ ನಲ್ಲಿ ಎಕ್ಸ್ ಕ್ಲೂಸೀವ್ ಆಗಿ ಮಾರಾಟಗೊಳ್ಳಲಿದೆ.

ರೇಮಂಡ್ ವೇಲ್ ತನ್ನ ಮಾಸ್ಟ್ರೊ ಸಂಗ್ರಹದಡಿ ಉತ್ಕೃಷ್ಟ ಸ್ವಿಸ್ ಕೈಗಡಿಯಾರಗಳನ್ನು ಪ್ರದರ್ಶಿಸಲಿದ್ದು, ಟೈಟಾನ್ ಕಂಪನಿ ಲಿಮಿಟೆಡ್ ನ ವಾಚ್ ಮತ್ತು ಸಂಬಂಧಿ ಉತ್ಪನ್ನ ವಿಭಾಗದ ಸಿಇಒ ಎಸ್.ರವಿಕಾಂತ್ ಮತ್ತು ರೇಮಂಡ್ ವೇಲ್ ಅಧ್ಯಕ್ಷ ಒಲಿವರ್ ಬರ್ನೆಹಿಮ್ ಮಾಸ್ಟ್ರೊ ಸಂ್ರಹವನ್ನು ಬಿಡುಗಡೆಗೊಳಿಸಿದರು.

ಸ್ವಿಸ್ ಬ್ರ್ಯಾಂಡ್ ಆಗಿ ರೇಮಂಡ್ ವೇಲ್ : ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಮೊದಲ ಸ್ವಿಸ್ ಬ್ರ್ಯಾಂಡ್ ಆಗಿ ರೇಮಂಡ್ ವೇಲ್ ಭಾರತೀಯ ಗ್ರಾಹಕರನ್ನು ತಲುಪಲಿದೆ.

Helios partners with Raymond Weil to offer Swiss watches in India

ಹೆಲಿಯೋಸ್ 48 ಮಳಿಗೆಗಳ ತನ್ನ ಬೃಹತ್ ರಾಷ್ಟ್ರೀಯ ನೆಟ್‍ವರ್ಕ್ ನೊಂದಿಗೆ ಅತ್ಯುತ್ತಮ ಬ್ರ್ಯಾಂಡ್ ಗಳನ್ನು ಕೈಗೆಟಕುವ ದರದಲ್ಲಿ ಐಷಾರಾಮಿ ವಲಯದಲ್ಲಿ ನೀಡುತ್ತಿದೆ. ರೇಮಂಡ್ ವೇಲ್ ತನ್ನ ಬದ್ಧತೆಗೆ ಅನುಗುಣವಾಗಿರುವ ಪಾಲುದಾರನನ್ನು ಪಡೆದಿದೆ. ರೇಮಂಡ್ ವೇಲ್ ಬ್ರ್ಯಾಂಡ್ ಮ್ಯೂಸಿಕ್ ಮತ್ತು ಮೇಸ್ಟ್ರೋಗಳೊಂದಿಗೆ ಪ್ರಬಲ ಸಂಬಂಧ ಹೊಂದಿದ್ದು, ಟೈಟಾನ್ ಕೂಡ ಮ್ಯೂಸಿಕನ್ನು ತನ್ನ ಭಾಗವಾಗಿಸಿಕೊಂಡಿದೆ.

ಪಾಲುದಾರಿಕೆ ಕುರಿತು ಪ್ರತಿಕ್ರಿಯಿಸಿದ ಟೈಟಾನ್ ಕಂಪನಿ ಲಿಮಿಟೆಡ್ ನ ವಾಚ್ ಮತ್ತು ಸಂಬಂಧಿ ಉತ್ಪನ್ನ ವಿಭಾಗದ ಸಿಇಒ ಎಸ್.ರವಿಕಾಂತ್, ಹೆಲಿಯೋಸ್ ಭಾರತೀಯ ಗ್ರಾಹಕರಿಗೆ ಐಷಾರಾಮಿ ಬ್ರ್ಯಾಂಡ್ ಗಳನ್ನು ಕೈಗೆಟಕುವ ದರದಲ್ಲಿ ನೀಡಲು ಬದ್ಧವಾಗಿದೆ. ರೇಮಂಡ್ ವೇಲ್ ಜೊತೆಗಿನ ಪಾಲುದಾರಿಕೆ ನಮ್ಮ ಬದ್ಧತೆ ಬಲಗೊಳಸುವ ಮತ್ತೊಂದು ಹೆಜ್ಜೆ. ಹೆಲಿಯೋಸ್ ನಲ್ಲಿ ನಾವು ನಮ್ಮ ಕಸೂತಿ ಆಸಕ್ತಿಯನ್ನು ನೀಗಿಸುವ ಬ್ರ್ಯಾಂಡ್ ಗಳೊಂದಿಗೆ ಪಾಲುದಾರಿಕೆ ಎದುರು ನೋಡುತ್ತೇವೆ ಮತ್ತು ರೇಮಂಡ್ ವೇಲ್ಸ್ ನ್ನು ಈ ಉದ್ದೇಶದಿಂದಲೇ ಆಯ್ದುಕೊಂಡಿದ್ದು ಎಂದರು.

Helios partners with Raymond Weil to offer Swiss watches in India

ಹೆಲಿಯೋಸ್ ಪುರುಷ ಹಾಗೂ ಮಹಿಳೆಯರಿಗಾಗಿ ಆಕರ್ಷಕ ಐಷಾರಾಮಿ ಕೈಗಡಿಯಾರಗಳನ್ನು ಹೊಂದಿದ್ದು, 25ಕ್ಕೂ ಅಧಿಕ ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳನ್ನು ಹೊಂದಿದೆ. ಮಾರಾಟ ನಂತರದ ಸೇವೆಯನ್ನು ದೇಶದಲ್ಲಿನ ತನ್ನೆಲ್ಲ ಮಳಿಗೆಯಲ್ಲಿ ನೀಡಲಿದ್ದು, ಹೈಎಂಡ್ ಕೈಗಡಿಯಾರಗಳ ಮೇಲೆ ಇಎಂಐ ಸೌಲಭ್ಯವನ್ನು ನೀಡುತ್ತಿದೆ.

ಹೆಲಿಯೋಸ್ ಕುರಿತು: ಹೆಲಿಯೋಸ್, ಟೈಟಾನ್ ಕಂಪನಿ ಲಿಮಿಟೆಡ್‍ನ ಭಾರತದ ಬೃಹತ್ ಉತ್ಕøಷ್ಟ ಕೈಗಡಿಯಾರ ರೀಟೆಲರ್. ಉತ್ಕೃಷ್ಟ ಐಷಾರಾಮಿ ಬ್ರ್ಯಾಂಡ್ ಗಳನ್ನು ನೀಡುತ್ತಿದೆ. ವೇಲ್, ಟ್ಯಾಗ್ ಹ್ಯುವರ್, ಮೊವಡೊ, ಫ್ರೆಡ್ರಿಕ್ಯು ಕಂಸ್ಟಂಟ್, ಜಿಸಿ, ವಿಟ್ರೊನಿಕ್ಸ್, ಗೆಸ್ ಸೇರಿದಂತೆ 25ಕ್ಕೂ ಅಧಿಕ ಅಂತಾರಾಷ್ಟ್ರೀಯ ಬ್್ಯಾಂಡ್ ಗಳನ್ನು 25 ನಗರಗಳ 48 ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದೆ.

ಎಡದಿಂದ ಬಲಕ್ಕೆ S. Ravi Kant, CEO, Titan Watches & Accessories and Olivier Burnheim, President, Raymond Weil

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India’s largest multi-brand premium watch retailer from Titan Company limited announced its partnership with renowned Swiss watchmaker, Raymond Weil. Raymond Weil will be exclusively retailed in India through Helios and Ethos.
Please Wait while comments are loading...