ಬಂತು ನೋಡಿ ಜಿಎಸ್ ಟಿ ದರ ಕಂಡು ಹಿಡಿಯುವ ಆ್ಯಪ್
ಜಿಎಸ್ ಟಿ ಜಾರಿ ಹಿನ್ನೆಲೆಯಲ್ಲಿ ಸರಕುಗಳ ಬೆಲೆಗಳ ಗೊಂದಲ ಪರಿಹರಿಸಲು ಜಿಎಸ್ ಟಿ ಆ್ಯಪ್ ಬಿಡುಗಡೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಂದ ಬಿಡುಗಡೆಗೊಂಡ ಆ್ಯಪ್. ಮೊದಲಿಗೆ ಆ್ಯಂಡ್ರಾಯ್ಡ್ ವೇದಿಕೆಯಲ್ಲಿ ಲಭ್ಯ.
ನವದೆಹಲಿ, ಜುಲೈ 8: ಇತ್ತೀಚೆಗೆ ಜಾರಿಗೊಂಡಿರುವ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್ ಟಿ) ಪರಿಕರ, ಸಾಮಗ್ರಿಗಳಲ್ಲಿ ಆದ ದರಗಳ ಬದಲಾವಣೆಯಲ್ಲಿನ ಗೊಂದಲಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಹೊಸತೊಂದು ಆ್ಯಪ್ ಬಿಡುಗಡೆ ಮಾಡಿದೆ.
ಕೇಂದ್ರ ಹಣಕಾಸು ಇಲಾಖೆ ಸಚಿವ ಅರುಣ್ ಜೇಟ್ಲಿ ಅವರು, ದೆಹಲಿಯಲ್ಲಿ ಇದನ್ನು ಬಿಡುಗಡೆಗೊಳಿಸಿದರು.

'GST rate finder' ಎಂಬ ಹೆಸರನ್ನೇ ಹೊಂದಿರುವ ಈ ಅಪ್ಲಿಕೇಶನ್ ನಿಂದಾಗಿ ಜನರಿಗೆ ತಾವು ಕೊಳ್ಳಲಿರುವ ಸರಕು ಅಥವಾ ಸಾಮಗ್ರಿಗಳ ಬೆಲೆಯ ಹಿಂದಿನ ಹಾಗೂ ಈಗಿರುವ ಬೆಲೆಯ ವ್ಯತ್ಯಾಸಗಳನ್ನು ತಿಳಿಯಲು ಅನುಕೂಲ ಕಲ್ಪಿಸುತ್ತದೆ ಎಂದು ಹೇಳಲಾಗಿದೆ.
ಸದ್ಯಕ್ಕೆ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇರುವ ಮೊಬೈಲ್ ಗಳಿಗೆ ಈ ಆ್ಯಪ್ ದೊರೆಯುತ್ತಿದ್ದು, ಶೀಘ್ರದಲ್ಲೇ ಐ-ಒಎಸ್ ಗೂ ಈ ಆ್ಯಪ್ ಲಭ್ಯವಾಗಲಿದೆ ಎಂದು ಹೇಳಲಾಗಿದೆ.












Click it and Unblock the Notifications