ಬ್ಯಾಂಕ್ ಗಳ ಒಟ್ಟಾರೆ NPA (ಅನುತ್ಪಾದಕ ಆಸ್ತಿ) 7.90 ಲಕ್ಷ ಕೋಟಿಗೆ ಇಳಿಕೆ
ನವದೆಹಲಿ, ಆಗಸ್ಟ್ 30: ರಾಷ್ಟ್ರೀಕೃತ ಬ್ಯಾಂಕ್ ಗಳ ವಿಲೀನದ ಬಗ್ಗೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಘೋಷಣೆ ಮಾಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಒಟ್ಟಾರೆ NPA (Non Performing Assets ಅಥವಾ ಅನುತ್ಪಾದಕ ಆಸ್ತಿ) 7.90 ಲಕ್ಷ ಕೋಟಿಗೆ ಇಳಿಕೆ ಆಗಿದೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.
ಸಾಲ ವಸೂಲಾತಿ ಪ್ರಮಾಣವು ದಾಖಲೆ ಮಟ್ಟವನ್ನು ಮುಟ್ಟಿದೆ. 8.65 ಲಕ್ಷ ಕೋಟಿಯಷ್ಟು ಇದ್ದ ಬ್ಯಾಂಕ್ ಗಳ ಒಟ್ಟು ಅನುತ್ಪಾದಕ ಆಸ್ತಿಯ ಪ್ರಮಾಣ 7.90 ಲಕ್ಷ ಕೋಟಿಗೆ ಇಳಿದಿದೆ. ಬ್ಯಾಂಕ್ ಗಳಿಗೆ ಬರಬೇಕಾದ ಅಸಲಿನ ಮೊತ್ತ, ಬಡ್ಡಿ ಎಲ್ಲವೂ ಬರುವುದು ನಿಂತುಹೋಗಿದೆ ಎಂದರೆ ಅವುಗಳನ್ನು ಅನುತ್ಪಾದಕ ಆಸ್ತಿ ಎಂದು ಕರೆಯಲಾಗುತ್ತದೆ.
Recommended Video
ವಂಚನೆ, ಬ್ಯಾಡ್ ಲೋನ್ (ಹಿಂತಿರುಗದ ಸಾಲಗಳು) ಕಡಿಮೆ ಮಾಡಲು ಹಲವು ಹೊಸ ಪ್ರಕ್ರಿಯೆಯಗಳನ್ನು ಜಾರಿಗೆ ತರಲಾಗಿದೆ. ಈ ದಿನ ಘೋಷಣೆ ಮಾಡಿರುವ ವಿಲೀನ ಪ್ರಕ್ರಿಯೆಗಳು ಮಾರುಕಟ್ಟೆಯಲ್ಲಿ ಸಾಲ ದೊರೆಯುವ ಪ್ರಮಾಣ ಹೆಚ್ಚಿಸುವ ಗುರಿ ಹೊಂದಿವೆ. ಸಾಲ ನೀಡಿಕೆ ಹೆಚ್ಚಾಗಬೇಕು ಎಂಬುದೇ ಇಂದು ಘೋಷಣೆ ಮಾಡಿರುವ ಕ್ರಮಗಳ ಉದ್ದೇಶ ಎಂದಿದ್ದಾರೆ ನಿರ್ಮಲಾ ಸೀತಾರಾಮನ್.
In place of fragmented lending capacity with 27 PSBs in 2017, now 12 #PSBs post consolidation. बड़े बैंक अब अपना लक्ष्य रखेंगे global मार्केट पर, मँझले बैंक बनेंगे राष्ट्रीय स्तर के और कुछ बैंक स्थानीय नेतृत्व करेंगे। @PMOIndia @FinMinIndia @PIB_India #PSBsFor5TrillionEconomy pic.twitter.com/Z4dcyZOG5f
— Rajeev kumar (@rajeevkumr) August 30, 2019

ಬ್ಯಾಂಕ್ ಗಳಲ್ಲಿ ಉತ್ತಮ ಆಡಳಿತ ಮಾದರಿ ನೀಡಬೇಕು ಎಂಬ ಬಗ್ಗೆ ಕೂಡ ಸರಕಾರ ಗಮನ ಕೇಂದ್ರೀಕರಿಸಲಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎದುರಾಗಿರುವ 'ಹಿಂತಿರುಗದ ಸಾಲ (ಬ್ಯಾಡ್ ಲೋನ್)'ದ ಬಗ್ಗೆ ಹೆಚ್ಚಿನ ಪ್ರಸ್ತಾವವನ್ನು ಸಚಿವೆ ಮಾಡಿದ್ದಾರೆ.












Click it and Unblock the Notifications