ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗಳ ಜೇಬಿಗೆ ಬಿತ್ತುರಿ, ಜಿಎಸ್ ಟಿ ಕತ್ತರಿ!!

ಜುಲೈ 1ರಿಂದ ಜಾರಿಗೊಳ್ಳಲಿರುವ ಜಿಎಸ್ ಟಿ, ಕೈಗಾರಿಕೆ, ವ್ಯಾಪಾರ, ವ್ಯವಹಾರ, ತೆರಿಗೆದಾರರು ಮುಂತಾದವರ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ, ಇದು ಪ್ರೇಮಿಗಳ ಮೇಲೂ ಪರಿಣಾಮ ಬೀರಬಹುದು. ಅವರಿಗೆ ಯಾವ ರೀತಿ ಬಿಸಿ ತಟ್ಟಬಹುದೆಂದು ಯೋಚಿಸಿ, ಆ ಐದು ವ

|
Google Oneindia Kannada News

''ಪ್ರೀತಿ ಮಾಡೋ ಹುಡುಗರಿಗೆಲ್ಲಾ ತೊಂದರೆಯೋ ಬಲು ತೊಂದರೆಯೋ'' ಅನ್ನೋ ಒಂದು ಹಾಡು ಕೆಲ ವರ್ಷಗಳ ಹಿಂದೆ ಭಾರೀ ಜನಪ್ರಿಯತೆ ಗಳಿಸಿತ್ತು. ಆ ಹಾಡಿನಲ್ಲಿ ಪ್ರೀತಿ ಮಾಡೋ ಹುಡುಗರು ಯಾವ್ಯಾವ ರೀತಿಯ ತೊಂದರೆಗಳು ಕಾಡುತ್ತವೆ ಎಂಬಿತ್ಯಾದಿ ಮಾಹಿತಿಗಳನ್ನು ತಮಾಷೆಯಾಗಿ ಅಳವಡಿಸಲಾಗಿತ್ತು ಆ ಹಾಡಿನಲ್ಲಿ.

ಇದೀಗ, ಜುಲೈ 1ರಿಂದ ಆರಂಭಗೊಳ್ಳಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಪ್ರೇಮಿಗಳಿಗೆ ದೊಡ್ಡ ಮಟ್ಟದ ತೊಂದರೆ, ಕಿರಿಕಿರಿ ಕೊಡುವುದರಲ್ಲಿ ಎರಡನೇ ಮಾತೇ ಇಲ್ಲ. ಅಕಸ್ಮಾತ್ ಆ ಹಾಡನ್ನು ರಿವೈಸ್ ಮಾಡಿ ಬರೆಯುವುದಾದರೆ ಅದರಲ್ಲ ಜಿಎಸ್ ಟಿ ವಿಚಾರವೂ ಸೇರಿಸಲೇಬೇಕು.

ಬೆಂಗಳೂರಿನಂಥ ಊರುಗಳಲ್ಲಿ ಶಾಲೆ, ಕಾಲೇಜುಗಳ ತರಗತಿಗಳನ್ನು ಬಂಕ್ ಮಾಡಿ, ತಮ್ಮದೇ ಆದ 'ಬಂಕಾ'ಪುರಗಳ ಅಡ್ಡಾಗಳಿಗೆ ಹೋಗಿ, ಅಲ್ಲೆಲ್ಲೋ ಆಜು ಬಾಜು ಕೂತು, ತಿಂಡಿ ಸೇವಿಸುತ್ತಾ, ಕಾಫಿ ಡೇನಲ್ಲಿ ಒಂದು ಕಪ್ ಕಾಫಿ ಕುಡಿದೇ ಅರ್ಧ ದಿನ ಕಳೆಯುತ್ತಾ ಕೂರುತ್ತಿದ್ದ ಆ ಪ್ರೇಮಿಗಳು ಅಥವಾ ಸ್ತ್ರೀ ಲೋಲ ಹುಡುಗರ ಜೇಬಿಗಂತೂ ಬಿತ್ತು ಕತ್ತರಿ ಎಂದರ್ಥ.

ಏಕೆಂದರೆ, ಈ ಹುಡುಗೀರನ್ನ 'ಏನ್ ತಿಂತೀಯಾ?' ಅಂತ ಕೇಳಿದ್ರೆ ಸಾಕು ಅವರ ಬಾಯಿಂದ ಬರೋದೇ ಚಾಕ್ಲೇಟ್, ಐಸ್ ಕ್ರೀಂ, ಪಿಜ್ಜಾ, ಬರ್ಗರ್, ಸ್ಯಾಂಡ್ ವಿಚ್, ನಾನ್ವೆಜ್ ಎಂಬಿತ್ಯಾದಿ ತಿನಿಸುಗಳು. ಇನ್ನು, ರೆಸ್ಟೋರೆಂಟ್ ಗಳ ಬಗ್ಗೆ ಕೇಳಿದರೆ ಸಾಕು ಅವರ ಬಾಯಿಂದ ಬರೋದು ಡೋಮಿನೋಸ್, ಪಿಜ್ಜಾ ಹಟ್, ಕಾಫಿ ಡೇ, ಮೆಕ್ ಡೊನಾಲ್ಡ್, ಕೆಎಫ್ ಸಿ ಮುಂತಾದವೇ.. ಎಲ್ಲಾ ಬ್ರಾಂಡೆಡ್ಡೇ! ಪಾಪ ಹುಡುಗಿಯರ ಈ ಬ್ರಾಂಡೆಡ್ ಮೋಹ, ಹುಡುಗರ ರೊಕ್ಕ ಸ್ವಾಹ ಮಾಡುತ್ತದೆ ಎಂಬುದಂತೂ ಕಹಿ ಸತ್ಯ.

ಜಿಎಸ್ ಟಿ ದೃಷ್ಟಿಯಲ್ಲಿ ನೋಡೋದಾದರೆ ಅವೆಲ್ಲವಕ್ಕೂ ತೆರಿಗೆ ಹೆಚ್ಚಾಗಲಿದೆ.

ಈ ಪ್ರೇಮಿಗಳು ದಿನ ಅಡ್ಡಾಡುವ ಸಾಮಾನ್ಯ ಅಡ್ಡೆಗಳಲ್ಲಿ ಅವರ ದುಡ್ಡು ಹೇಗೆ ಕಂಡವರ ಬಾಯಿಗೆ ಹೋಗುತ್ತೆ ಎಂಬುದರ ಒಂದು ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಸಿನಿಮಾ ಗಿನಿಮಾ ನೋಡೋ ಹಾಗಿಲ್ಲ?

ಸಿನಿಮಾ ಗಿನಿಮಾ ನೋಡೋ ಹಾಗಿಲ್ಲ?

ಕ್ಲಾಸ್ ಬಂಕ್ ಮಾಡಿ ಬರೋ ಹುಡುಗ- ಹುಡುಗಿಯರಯಲ್ಲಿ ಬಹುತೇಕರು ನೇರವಾಗಿ ನುಗ್ಗುವುದೇ ಮಾಲ್ ಗಳಿಗೆ. ಆದರೆ, ಜುಲೈ 1ರಿಂದ ಅಲ್ಲಿ ಮೊದಲಿನಂತಿರುವುದಿಲ್ಲ. ಮಾಲ್ ಗಳಲ್ಲಿ ದಿನವಿಡೀ ಸುತ್ತಾಡಿ ತಿಂಡಿ, ತಿನಿಸು ಅಂತೆಲ್ಲಾ ಖರ್ಚು ಮಾಡಲು ಮೊದಲೆಲ್ಲಾ ದಿನವೊಂದಕ್ಕೆ 1000 ರು. ಸಾಕಾಗುತ್ತಿತ್ತು ಎಂದುಕೊಂಡರೆ, ಇನ್ನು ಮುಂದೆ ಇಷ್ಟೇ ತಿಂಡಿ, ತಿನಿಸು ಅಥವಾ ಇಷ್ಟೇ ಮನರಂಜನೆಗೆ 1500 ರು.ರಿಂದ 1700 ರು.ವರೆಗೆ ಏರಬಹುದು. ದಿನವೊಂದಕ್ಕೆ ಹೆಚ್ಚುವರಿಯಾಗಿ ಹೀಗೆ, 500 ರು., 700 ರು. ಖರ್ಚಾಗುತ್ತಿದ್ದರೆ ವಾರಕ್ಕೆಷ್ಟಾಯ್ತು? ತಿಂಗಳಿಗೆಷ್ಟಾಯ್ತು? ಅಪ್ಪ-ಅಮ್ಮ ಕೊಡುವ ಪಾಕೆಟ್ ಮನಿಯಲ್ಲಿ ಎಷ್ಟು ಉಳಿಸಬೇಕು? ಕಾಲೇಜು ಫೀಸ್, ಅದು ಇದು ಅಂತ ಮನೆಯಲ್ಲಿ ಸುಳ್ಳು ಲೆಕ್ಕ ಹೇಳಿ ಎಷ್ಟು ಎತ್ತಬೇಕು?

ಚಾಕ್ಲೇಟ್ , ಐಸ್ ಕ್ರೀಂ ವರ್ಜ್ಯ ಮಾಡಬೇಕು!

ಚಾಕ್ಲೇಟ್ , ಐಸ್ ಕ್ರೀಂ ವರ್ಜ್ಯ ಮಾಡಬೇಕು!

ಮೊದಲೇ ಹೇಳಿದ ಹಾಗೆ, ಹುಡುಗಿಯರು ಚಾಕ್ಲೇಟ್, ಬರ್ಗರ್, ಸ್ಯಾಂಡ್ ವಿಜ್ ಗಳಂಥ ತಿಂಡಿಗಳನ್ನೇ ಹೆಚ್ಚಾಗಿ ಅಪೇಕ್ಷಿಸುತ್ತಾರೆ. ಇಂಥವರು ನೇರವಾಗಿ ಹೋಗೋದೇ ಡಾಮಿನೋಸ್, ಪಿಜ್ಜಾ ಹಟ್, ಕಾಫಿ ಡೇ, ಮೆಕ್ ಡೊನಾಲ್ಡ್ಸ್, ಕೆಎಫ್ ಸಿ ಗಳಿಗೆ. ಇನ್ನು ಜಿಎಸ್ ಟಿ ಜಾರಿಯಾದ ಮೇಲೆ ರೆಸ್ಟೋರೆಂಟ್ ಗಳ ಬಿಲ್ಲೂ ಜಾಸ್ತಿಯಾಗುತ್ತದೆ. ಹೀಗೆ, ಹುಡುಗಿಯನ್ನು ಕರೆದುಕೊಂಡು ಹೋಗೋ ಹುಡುಗರಲ್ಲಿ ಶೇ. 95ರಷ್ಟು ಹುಡುಗರೇ ಬಿಲ್ಲು ಪಾವತಿಸಬೇಕಿರುವುದರಿಂದ ಅವರಿಗೆ ಇದು ಖಂಡಿತವಾಗಿಯೂ ಹೊರೆಯಾಗುತ್ತದೆ. ಪಾನಿ ಪುರಿ ಹೆಚ್ಚಿನವರ ಫೇವರಿಟ್. ಹಾಗಾಗಿ, ಅದಕ್ಕೆ ಮೊರೆಹೋಗಬಹುದು. ಆದರೆ, ದಿನಾ ದಿನಾ ಅದನ್ನೇ ತಿನ್ನೋಕಾಗುತ್ತಾ?

ಸಿದ್ಧ ಉಡುಪುಗಳ ಖರೀದಿ ದುಬಾರಿಯಾಗಬಹುದು!

ಸಿದ್ಧ ಉಡುಪುಗಳ ಖರೀದಿ ದುಬಾರಿಯಾಗಬಹುದು!

ಬಟ್ಟೆ ಕೊಳ್ಳುವುದೆಂದರೆ ಹುಡುಗಿಯರ ಅಚ್ಚು ಮೆಚ್ಚಿನ ಹವ್ಯಾಸಗಳಲ್ಲೊಂದು. ಅವರ ಹತ್ರ ಎಷ್ಟೇ ಒಳ್ಳೊಳ್ಳೆ ಡ್ರೆಸ್ ಗಳಿರಲಿ ಹೊಸತಾದ ಬಟ್ಟೆಗಳು ಮಾರುಕಟ್ಟೆಯಲ್ಲಿ ಅವರ ಕಣ್ಣಿಗೆ ಬಿದ್ದವೆಂದರೆ, ಅವರ ಮನಸ್ಸು ಹಪಹಪಿಸದೇ ಇರದು. ಹುಡುಗಿಯರನ್ನು ಸುತ್ತಾಡಿಸಲು ಹೊರಡುವ ಹುಡುಗರಿಗೆ ಇದೊಂದು ದಿಗಿಲು ಪಡುವಂಥ ವಿಚಾರ. ಅದರಲ್ಲೂ ತನ್ನ ಪ್ರೇಯಿಸಿಯ ಬರ್ತಡೇಗೆ ಹೊಸ ಬಟ್ಟೆ ಕೊಡಿಸಬೇಕು ಎಂದು ಅಂದುಕೊಂಡರೆ ಅದೊಂದು ಕಾಷ್ಲಿ ಐಡಿಯಾ ಎನಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

ಮೇಕಪ್ ಇಲ್ದೇ ಹೊರಗೆ ಬರೋದೇ ಕಷ್ಟ

ಮೇಕಪ್ ಇಲ್ದೇ ಹೊರಗೆ ಬರೋದೇ ಕಷ್ಟ

ಮೇಕಪ್ ಹಾಗೂ ಹುಡುಗಿಯರಿಗೆ ಅವಿನಾಭಾವ ಸಂಬಂಧ. ಆ ಅದ್ಭುತವಾದ ಮೇಕಪ್ ನಿಂದಲೇ ತಾನೇ ಸಾಧಾರಣ ಚೆಲುವೆಯೆಂಬಂಥಾ ಹುಡುಗಿ ಆ ಕಾಲೇಜಿನ ಬ್ಯೂಟಿ ಕ್ವೀನ್ ಆಗಿ ಮೋಡಿ ಮೋಡೋದು? ಆದರೆ, ಮೇಕಪ್ ಸಾಮಗ್ರಿಗಳ ಬೆಲೆ ಜಿಎಸ್ ಟಿ ಅಡಿಯಲ್ಲಿ ಗಣನೀಯವಾಗಿ (ಶೇ. 28ರಷ್ಟು) ಹೆಚ್ಚಾಗಲಿದೆ. ಮೇಕಪ್ ಕಿಟ್ ಗಳನ್ನು ಹುಡುಗರಿಂದಲೇ ಕೊಡಿಸಿಕೊಳ್ಳೋ ಹುಡುಗಿಯರೇನೂ ಕಮ್ಮಿಯಿಲ್ಲ. ಲ್ಯಾಕ್ಮೆ ಮುಂತಾದ ಬ್ರಾಂಡೆಡ್ ಸಾಧನಗಳ ಮೊರೆ ಹೋದರೆ ಹುಡುಗರ ಜೇಬಿಗೆ ಕೊಂಚ ದೊಡ್ಡ ಕತ್ತರಿಯೇ ಬೀಳುತ್ತೆ.

ದುಬಾರಿ ಉಡುಗೊರೆ ನೀಡೋರಿಗೆ ತೊಂದರೆ

ದುಬಾರಿ ಉಡುಗೊರೆ ನೀಡೋರಿಗೆ ತೊಂದರೆ

ಇನ್ನು, ಹುಡುಗಿಯರಿಗೆ ಚಿನ್ನ, ಮೊಬೈಲು, ಕ್ಯಾಮೆರಾ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಕೊಡುವ ಮನಸ್ಸಿರುವ ಹುಡುಗರು ಕೊಂಚ ಯೋಚನೆ ಮಾಡೋದೊಳಿತು. ಇದರಲ್ಲಿ ಮೊಬೈಲ್ ಬೆಲೆಗಳು ಅಷ್ಟೇನೂ ದುಬಾರಿ ಎನಿಸದು, ಆದರೆ ಚಿನ್ನ, ಕ್ಯಾಮೆರಾ ಅಂತೆಲ್ಲಾ ಹೋದರೆ ಖಂಡಿತ ತೊಂದರೆ.

English summary
As GST impact on people from all walks of life, youths also suffer from the effect of GST. Generally speaking, Lovers who all wander in Malls, shopping streets defenitely face heat of GST.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X