ಏ. 7ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರದ ವಿವರ

ಬೆಂಗಳೂರು, ಏಪ್ರಿಲ್ 7: ತಿಂಗಳ ಆರಂಭದಿಂದ ಏರಿಕೆಯತ್ತ ಸಾಗಿದ್ದ ಚಿನ್ನದ ದರ ಬುಧವಾರ ದೇಶದ ಬಹುತೇಕ ನಗರಗಳಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 4,420 ರೂಪಾಯಿ ಇದ್ದರೆ, 24 ಕ್ಯಾರಟ್‌ನ ಪ್ರತಿ ಒಂದು ಗ್ರಾಂ ಚಿನ್ನದ ದರ 4,520 ರೂಪಾಯಿ ಇದೆ.

ಎಂಸಿಎಕ್ಸ್‌ನಲ್ಲಿ ಗೋಲ್ಡ್ ಫ್ಯೂಚರ್ ಶೇ 0.31ರ ಕುಸಿತದೊಂದಿಗೆ ಪ್ರತಿ ಹತ್ತು ಗ್ರಾಂಗೆ 144 ರೂಪಾಯಿ ಇಳಿಕೆಯಾಗಿದ್ದು, ಒಟ್ಟು ದರ 45,775 ರೂಪಾಯಿಗೆ ತಲುಪಿದೆ. ಹಾಗೆಯೇ ಬೆಳ್ಳಿ ದರ ಶೇ 0.23ರ ಇಳಿಕೆಯೊಂದಿಗೆ ಪ್ರತಿ ಒಂದು ಕೆಜಿಗೆ 154 ರೂಪಾಯಿ ಅಗ್ಗವಾಗಿದ್ದು, 65,743 ರೂ.ಗೆ ಮುಟ್ಟಿದೆ. ಹಳದಿ ಲೋಹದ ಸರಾಸರಿ ಬೆಲೆ 22 ಕ್ಯಾರಟ್‌ನ 10 ಗ್ರಾಂಗೆ 44,200 ರೂಪಾಯಿ ಇದೆ. 24 ಕ್ಯಾರಟ್ ಚಿನ್ನಕ್ಕೆ 45,200 ರೂಪಾಯಿ ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವಹಿವಾಟು ಬದಲಾದಂತೆ ಭಾರತದಲ್ಲಿನ ಚಿನ್ನದ ದರದಲ್ಲಿಯೂ ಬದಲಾವಣೆಗಳಾಗಲಿವೆ. ಹೀಗಾಗಿ ದಿನದ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

ದೆಹಲಿಯಲ್ಲಿ ಬೆಲೆ ಸ್ಥಿರ

ದೆಹಲಿಯಲ್ಲಿ ಬೆಲೆ ಸ್ಥಿರ

ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆಯಲ್ಲಿ ಬುಧವಾರ ಬೆಳಿಗ್ಗೆ ಸ್ಥಿರತೆ ಕಾಯ್ದುಕೊಂಡಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 44,550 ರೂಪಾಯಿ ಇದೆ. 24 ಕ್ಯಾರಟ್ ಚಿನ್ನ ಬೆಲೆ ಪ್ರತಿ 10 ಗ್ರಾಂ ಚಿನ್ನದ ದರ 48,460 ರೂಪಾಯಿಯನ್ನು ಕಾಯ್ದುಕೊಂಡಿದೆ.

ಬೆಂಗಳೂರಲ್ಲಿ ಚಿನ್ನದ ಬೆಲೆ

ಬೆಂಗಳೂರಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಕೂಡ ಚಿನ್ನದ ದರದಲ್ಲಿ ಮತ್ತೆ 10 ರೂಪಾಯಿ ಏರಿಕೆಯಾಗಿದೆ. 22 ಕ್ಯಾರಟ್ ಚಿನ್ನದ ಪ್ರತಿ ಹತ್ತು ಗ್ರಾಂ ಚಿನ್ನದ ದರ 42,410 ರೂಪಾಯಿ ಇದೆ. 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ 10 ರೂ ಏರಿಕೆಯೊಂದಿಗೆ 46,260 ರೂಪಾಯಿಗೆ ತಲುಪಿದೆ.

ಚೆನ್ನೈನಲ್ಲಿ ದರ ಇಳಿಕೆ

ಚೆನ್ನೈನಲ್ಲಿ ದರ ಇಳಿಕೆ

ಚೆನ್ನೈ ನಗರದಲ್ಲಿ ಬಂಗಾರದ ಬೆಲೆ ಹಿಂದಿನ ದರವನ್ನು ಉಳಿಸಿಕೊಂಡಿದೆ. 22 ಕ್ಯಾರಟ್‌ನ ಪ್ರತಿ 10 ಗ್ರಾಂಗೆ 42,570 ರೂ.ಗೆ ತಲುಪಿದೆ. ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ 46,450 ರೂಪಾಯಿಗೆ ಮಾರಾಟವಾಗುತ್ತಿದೆ.

ಮುಂಬೈನಲ್ಲಿ ಚಿನ್ನದ ಬೆಲೆ ಹೆಚ್ಚಳ

ಮುಂಬೈನಲ್ಲಿ ಚಿನ್ನದ ಬೆಲೆ ಹೆಚ್ಚಳ

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 44,200 ರೂಪಾಯಿಯಲ್ಲಿ ಸ್ಥಿರವಾಗಿದೆ. 24 ಕ್ಯಾರಟ್ ಚಿನ್ನ 45,200 ರೂ. ದರಕ್ಕೆ ಮಾರಾಟವಾಗುತ್ತಿದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 42,410 ರೂ ಮತ್ತು 24 ಕ್ಯಾರಟ್ ಹಳದಿ ಲೋಹ 46,2600 ರೂಪಾಯಿಗೆ ಮಾರಾಟವಾಗುತ್ತಿದೆ. ಕೋಲ್ಕತಾದಲ್ಲಿ 22 ಕ್ಯಾರಟ್ ಚಿನ್ನಕ್ಕೆ 44,630 ಮತ್ತು 24 ಕ್ಯಾರಟ್ ಚಿನ್ನಕ್ಕೆ 47,320 ರೂ ದರವಿದೆ.

ದೇಶದಲ್ಲಿ ಬೆಳ್ಳಿ ಬೆಲೆ

ದೇಶದಲ್ಲಿ ಬೆಳ್ಳಿ ಬೆಲೆ

ದೇಶದಲ್ಲಿ ಬೆಳ್ಳಿ ದರ ಬಹುತೇಕ ನಗರಗಳಲ್ಲಿ ಏರಿಕೆಯಾಗಿದೆ. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 900 ರೂಪಾಯಿ ಏರಿಕೆಯೊಂದಿಗೆ 65,900 ರೂಪಾಯಿಗೆ ತಲುಪಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯಲ್ಲಿ ಪ್ರತಿ ಕೆಜಿಗೆ 900 ರೂಪಾಯಿ ತುಟ್ಟಿಯಾಗಿದ್ದು, 65,900 ರೂಪಾಯಿಗೆ ಹೆಚ್ಚಳವಾಗಿದೆ. ಚೆನ್ನೈನಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 69,300 ರೂಪಾಯಿಯಲ್ಲಿ ಸ್ಥಿರವಾಗಿದೆ. ಮುಂಬೈನಲ್ಲಿ ಬೆಳ್ಳಿ ದರ ಪ್ರತಿ ಕೆಜಿಗೆ 65,900 ರೂಪಾಯಿ ಇದೆ.

* ಚಿನ್ನ ಮತ್ತು ಬೆಳ್ಳಿ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಬದಲಾವಣೆ ಮತ್ತು ಸ್ಥಳೀಯ ತೆರಿಗೆ ನೀತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಈ ಮಾಹಿತಿ ಬೆಳಿಗ್ಗೆ 9 ಗಂಟೆಯವರೆಗಿನ ಮಾರುಕಟ್ಟೆ ದರ ಬದಲಾವಣೆಯನ್ನು ಆಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+