ಚಿನ್ನದ ಬೆಲೆ ಏರಿಕೆ; ಪ್ರಮುಖ ನಗರಗಳಲ್ಲಿ ಜನವರಿ 24ರ ಬೆಲೆ ಎಷ್ಟು?
ಭಾರತೀಯ ಮಾರುಕಟ್ಟೆಯಲ್ಲಿ ಏರುತ್ತಲೇ ಸಾಗುತ್ತಿದ್ದ ಹಳದಿ ಲೋಹದ ಬೆಲೆ ಸತತವಾಗಿ ಎರಡು ದಿನ ಕುಸಿತ ಕಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,090ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 52,460 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಒಂದು ಕೆಜಿಗೆ 100 ರು ಇಳಿಕೆ ಕಂಡು 66,700 ರೂಪಾಯಿ ದಾಖಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಸ್ವಲ್ಪ ಇಳಿಕೆ ಕಂಡು ಪ್ರತಿ ಔನ್ಸ್‌ಗೆ 1,857 ಯುಎಸ್ ಡಾಲರ್ ನಷ್ಟಿದೆ.
ಅಮೆರಿಕದಲ್ಲಿ ಹೊಸ ಅಧ್ಯಕ್ಷ ಜೋ ಬೈಡನ್ ಜಾರಿಗೆ ತರುತ್ತಿರುವ ಹೊಸ ನೀತಿ ನಿಯಮ ಆರ್ಥಿಕ ಪ್ಯಾಕೇಜ್, ಭಾರತದಲ್ಲಿನ ಕೊರೊನಾ ಲಸಿಕೆ ಅಭಿಯಾನ ಹಾಗೂ ವಿಶ್ವದ ಇತರೆ ದೇಶಗಳಿಗೆ ವಿತರಣೆ ಎಲ್ಲವೂ ಹಳದಿ ಲೋಹದ ಮೇಲೆ ಪರಿಣಾಮ ಬೀರಿವೆ.
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಜನವರಿ 24: 45,940 (10 ರು ಇಳಿಕೆ) 50,120 (10 ರು ಇಳಿಕೆ)
ಜನವರಿ 23: 45,950 (-150)50,130 (-170)
ಜನವರಿ 22: 46,100 (-150)50,300 (-150)
ಜನವರಿ 21: 46,250 (+450)50,450 (+490)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಜನವರಿ 24: 48,090 (10 ರು ಇಳಿಕೆ) 52,800 (10 ರು ಇಳಿಕೆ)
ಜನವರಿ 23: 48,100 (-150)52,470(-160)
ಜನವರಿ 22: 48,250 (-150)52,630 (-170)
ಜನವರಿ 21: 48,400(+490)52,800 (+540)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಜನವರಿ 24: 46,540 (10 ರು ಇಳಿಕೆ) 50,790 (10 ರು ಇಳಿಕೆ) ಜನವರಿ 23: 46,550(-90) 50,800 (-80)
ಜನವರಿ 22: 46,640 (-270)50,880 (-300)
ಜನವರಿ 21: 46,910 (+400) 51, 180 (+450)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಜನವರಿ 24: 48,330 (10 ರು ಇಳಿಕೆ) 49, 330(10 ರು ಇಳಿಕೆ) ಜನವರಿ 23: 48,340(-210)49,340 (-210)
ಜನವರಿ 22: 48,550(-50)49,550 (-50)
ಜನವರಿ 21: 48,600(+500)49, 600 (+500)

ಹೈದರಾಬಾದ್ ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಜನವರಿ 24: 45,940 (10 ರು ಇಳಿಕೆ) 50, 120 (10 ರು ಇಳಿಕೆ) ಜನವರಿ 23: 45, 950 (-150)50, 130 (-330)
ಜನವರಿ 22: 46,100 (-150)50, 460 (+10)
ಜನವರಿ 21: 46,250 (+450)50, 450 (+450)

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications