ಅ.21ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ?
ನವದೆಹಲಿ, ಅಕ್ಟೋಬರ್ 21: ದೇಶದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 21 ರಂದು ಚಿನ್ನದ ದರ ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46.480 ಇದೆ, 24 ಕ್ಯಾರೆಟ್ ಅಪರಂಜಿ ಚಿನ್ನದ ದರ 47,480 ರೂ. ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 44,550 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 48,600 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 46,610 ರೂ. ಇದೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 50,850 ರೂ. ಆಗಿದೆ.
ಕಷ್ಟಕಾಲದಲ್ಲಿ ನೆರವಾಗುವ ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಪ್ರದಾಯ ಇನ್ನೂ ಕಡಿಮೆಯಾಗಿಲ್ಲ. ಮೈಸೂರು, ವಿಶಾಖಪಟ್ಟಣಂ, ಮಂಗಳೂರು, ವಿಜಯವಾಡ, ಮುಂಬೈ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಹೆಚ್ಚೂ ಕಡಿಮೆ ಇದೇ ಬೆಲೆಯಿದೆ. ಬೇರೆಲ್ಲ ನಗರಗಳಿಗೆ ಹೋಲಿಸಿದರೆ ಚೆನ್ನೈ, ದೆಹಲಿ, ಕೊಲ್ಕತ್ತಾ, ಲಕ್ನೋ, ಕೊಯಮತ್ತೂರು, ಮಧುರೈ, ಜೈಪುರ, ಅಹಮದಾಬಾದ್, ಚಂಡೀಗಢದಲ್ಲಿ ಚಿನ್ನದ ಬೆಲೆ 50,140 ರೂ.ಇದೆ.
ಆಯಾ ರಾಜ್ಯಗಳು ವಿಧಿಸುವ ಸೇವಾ ತೆರಿಗೆಯಿಂದ ಬೇರೆ ಬೇರೆ ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಕಳೆದೆರಡು ತಿಂಗಳಿಂದ ಚಿನ್ನದ ದರ ಹೆಚ್ಚಾಗುತ್ತಲೇ ಇದೆ. ಇಲ್ಲಿ ನಮೂದಿಸಿರುವ ಚಿನ್ನದ ಬೆಲೆಗಳು ಆಭರಣದ ಶೋರೂಂ ಹಾಗೂ ಕೆಲವು ರಾಜ್ಯಗಳಲ್ಲಿ ಕೊಂಚ ಹೆಚ್ಚೂ ಕಡಿಮೆ ಆಗಬಹುದು.
ವಿಶ್ವ ಚಿನ್ನ ಪರಿಷತ್ತು, ಭಾರತೀಯ ಚಿನ್ನ ಮಾರುಕಟ್ಟೆಯ ಆಳ - ವಿಸ್ತೃತ ವಿಶ್ಲೇಷಣೆಯ ಸರಣಿಯ ಮೊದಲ ಕಂತಾದ 'ಭಾರತೀಯ ಚಿನ್ನ ಬೇಡಿಕೆಯ ಚಾಲಕರು' ಎಂಬ ವರದಿಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ. ಎಕನೋಮೆಟ್ರಿಕ್ ಮಾದರಿಯನ್ನು ಬಳಸಿ ತಯಾರಾಗಿರುವ ಈ ವರದಿ, 1990 ರಿಂದ 2020 ರವರೆಗಿನ ಮೂರು ದಶಕಗಳ ವಾರ್ಷಿಕ ದತ್ತಾಂಶಗಳ ಮೇಲೆ ಬೆಳಕು ಚೆಲ್ಲಿದ್ದು, ಭಾರತದ ಚಿನ್ನದ ಬೇಡಿಕೆಯ ಮೇಲಿನ ಕೆಲ ಪ್ರಮುಖ ಪ್ರಭಾವಗಳ ಕುರಿತು ವಿಶ್ಲೇಷಿಸಿದೆ.
ಈ ವರದಿಯು ಪ್ರಮಾಣ ಹಾಗೂ ಗುಣಮಟ್ಟ ಎರಡೂ ದೃಷ್ಟಿಕೋನದಿಂದ ಚಿನ್ನದ ಬೇಡಿಕೆಯನ್ನು ವಿಶ್ಲೇಷಿಸಿದೆ. ಭಾರತದಲ್ಲಿ ದೀರ್ಘಾವಧಿ ಹಾಗೂ ಅಲ್ಪಾವಧಿಯ ಚಿನ್ನದ ಬೇಡಿಕೆಯ ಸಮಗ್ರ ವಿಶ್ಲೇಷಣೆಯ ಜೊತೆಗೆ, ಈ ಬೇಡಿಕೆಯನ್ನು ರೂಪಿಸುವ ಜನಸಂಖ್ಯಾ ಶಾಸ್ತ್ರ, ಸಾಮಾಜಿಕ - ಆರ್ಥಿಕ ಮತ್ತು ಸಂಬಂಧಿಸಿದ ಬೆಳವಣಿಗೆಗಳನ್ನು ಪರಿಶೀಲಿಸುತ್ತದೆ. ಇದು ಭವಿಷ್ಯದ ಬೇಡಿಕೆಯ ಏರುಪೇರಿನ ಮೇಲೆ ಕೂಡ ಬೆಳಕು ಚೆಲ್ಲುತ್ತದೆ.
ವಿಶ್ವ ಚಿನ್ನದ ಪರಿಷತ್ತಿನ ಪ್ರಾದೇಶಿಕ ಸಿಇಒ ಸೋಮಸುಂದರಂ ಪಿ.ಆರ್, 'ನಮ್ಮ ಇತ್ತೀಚಿನ ಸಂಶೋಧನೆ, ಭಾರತದಲ್ಲಿ ಚಿನ್ನದ ಬೇಡಿಕೆಯ ಚಾಲಕರು ಹಲವು ಮತ್ತು ವೈವಿಧ್ಯಮಯವಾಗಿದೆ ಎಂಬ ಅಂಶವನ್ನು ಬಲಪಡಿಸುತ್ತದೆ.

ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ದರ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 21: 44, 550 ರೂ, 48,6000 ರೂ
ಅಕ್ಟೋಬರ್ 20:44, 300 ರೂ, 48,330 ರೂ(-)
ಅಕ್ಟೋಬರ್ 19:44, 300 ರೂ, 48,330 ರೂ
ಅಕ್ಟೋಬರ್ 18:44, 300 ರೂ, 48,330 ರೂ
ಅಕ್ಟೋಬರ್ 17: 44,190ರೂ (10 ರೂ. ಇಳಿಕೆ) , 48,210 ರೂ(10 ರೂಇಳಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 65,900 ರೂಪಾಯಿ

ದೆಹಲಿಯಲ್ಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 21: 46,610 ರೂ, 50,850ರೂ
ಅಕ್ಟೋಬರ್ 20: 46,450( 10ರೂ ಇಳಿಕೆ), 50,670 ರೂ(10ರೂ ಇಳಿಕೆ)
ಅಕ್ಟೋಬರ್ 19:46,460 ರೂ,( 130ರೂ. ಏರಿಕೆ) 50,680 ರೂ( 140 ರೂ. ಏರಿಕೆ)
ಅಕ್ಟೋಬರ್ 18:46,330 ರೂ, 50,540 ರೂ
ಅಕ್ಟೋಬರ್ 17: 46,340ರೂ (10ರೂ ಇಳಿಕೆ) , 50,550 ರೂ (10ರೂ ಇಳಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 65,900 ರೂಪಾಯಿ

ಮುಂಬೈನಲ್ಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 21: 46,480ರೂ, 47,480 ರೂ
ಅಕ್ಟೋಬರ್ 20: 46,500 ರೂ, 47,500 ರೂ
ಅಕ್ಟೋಬರ್ 19: 47,070 ರೂ, 48,070 ರೂ
ಅಕ್ಟೋಬರ್ 18: 47,070 ರೂ, 48,070 ರೂ
ಅಕ್ಟೋಬರ್ 17: 47,070 ರೂ, 48,070 ರೂ
ಬೆಳ್ಳಿ ಬೆಲೆ ಕೆ.ಜಿಗೆ65,900 ರೂಪಾಯಿ

ಹೈದರಾಬಾದ್‌ನಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 21: 44,550 ರೂ, 48,600ರೂ
ಅಕ್ಟೋಬರ್ 20: 44,300 ರೂ, 48330 ರೂ
ಅಕ್ಟೋಬರ್ 19: 44,300 ರೂ, 48330 ರೂ
ಅಕ್ಟೋಬರ್ 18: 44,300 ರೂ, 48330 ರೂ
ಅಕ್ಟೋಬರ್ 17: 44,190 ರೂ, 48,210 ರೂ(10 ರು ಇಳಿಕೆ)
ಬೆಳ್ಳಿ ಬೆಲೆ ಕೆ.ಜಿಗೆ 70,200 ರೂಪಾಯಿ

ಕೋಲ್ಕತ್ತಾದಲ್ಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 21: 46,900 ರೂ, 49,600 ರೂ
ಅಕ್ಟೋಬರ್ 20: 46,840 ರೂ, 48,300 ರೂ
ಅಕ್ಟೋಬರ್ 19: 46,760ರೂ(30ರೂ. ಏರಿಕೆ) , 49,460ರೂ(30ರೂ. ಏರಿಕೆ)
ಅಕ್ಟೋಬರ್ 18: 46,730ರೂ , 49,430ರೂ
ಅಕ್ಟೋಬರ್ 17: 46,740ರೂ , 49,440ರೂ
ಬೆಳ್ಳಿ: 1 ಕೆ.ಜಿಗೆ 65,900 ರೂಪಾಯಿ












Click it and Unblock the Notifications