Gold Rate: 2700 ರೂಪಾಯಿ ಕುಸಿದ ಚಿನ್ನದ ಬೆಲೆ; ಶನಿವಾರ ಮತ್ತಷ್ಟು ಕುಸಿತ?
ಎರಡು ದಿನ ಅಲ್ಪ ಏರಿಕೆ ಕಂಡಿದ್ದ ಚಿನ್ನದ ಬೆಲೆ ಶುಕ್ರವಾರ ಮತ್ತೆ ಇಳಿಕೆಯಾಗಿದೆ. ಶುಕ್ರವಾರ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 270 ರೂಪಾಯಿ ಕಡಿಮೆಯಾಗಿದ್ದು, ಶನಿವಾರ ಕೂಡ ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.
ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ (ಆಭರಣ) ಚಿನ್ನದ ಬೆಲೆ 100 ಗ್ರಾಂಗೆ 2500 ರೂಪಾಯಿ ಇಳಿಕೆಯಾಗಿದೆ. ಗುರುವಾರ 6,61,500 ರೂಪಾಯಿ ಇದ್ದ 100 ಗ್ರಾಂ ಚಿನ್ನದ ಬೆಲೆ ಶುಕ್ರವಾರ 6,59,000 ರೂಪಾಯಿಗೆ ಇಳಿಕೆಯಾಗಿದೆ.

ಗುರುವಾರ 7,21,600 ರೂಪಾಯಿ ಇದ್ದ 100 ಗ್ರಾಂ ಚಿನ್ನದ ಬೆಲೆ ಶುಕ್ರವಾರ 7,18,900 ರೂಪಾಯಿಗೆ ಇಳಿಕೆಯಾಗಿದೆ. ಅಂದರೆ 100 ಗ್ರಾಂಗೆ 2700 ರೂಪಾಯಿ ಕಡಿಮೆಯಾಗಿದೆ.
ಶನಿವಾರ ಮತ್ತಷ್ಟು ಕುಸಿತ?
ಚಿನ್ನದ ಬೆಲೆ ಶನಿವಾರ ಕೂಡ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಡಾಲರ್ ಮೌಲ್ಯ ಹೆಚ್ಚಾಗುತ್ತಿದ್ದು, ಷೇರು ಪೇಟೆ ಕೂಡ ಚೇತರಿಸಿಕೊಂಡಿರುವುದರಿಂದ ಚಿನ್ನದ ಬೆಲೆ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
ಬೆಳ್ಳಿ ಬೆಲೆ ಕೂಡ ಕುಸಿತ
ಶುಕ್ರವಾರ ಬೆಳ್ಳಿ ಬೆಲೆ ಕೂಡ ಅಲ್ಪ ಕುಸಿತ ಕಂಡಿದೆ. ಶುಕ್ರವಾರ ಒಂದು ಕೆಜಿ ಚಿನ್ನದ ಬೆಲೆ 100 ರೂಪಾಯಿ ಕುಸಿದಿದೆ. ಗುರುವಾರ 90,500 ರೂಪಾಯಿ ಇದ್ದ ಒಂದು ಕೆಜಿ ಬೆಳ್ಳಿ ಬೆಲೆ ಶುಕ್ರವಾರ 90,400 ರೂಪಾಯಿಗೆ ಕುಸಿತ ಕಂಡಿದೆ.
ಕಳೆದ ವಾರ 1 ಲಕ್ಷ ರೂಪಾಯಿ ಸನಿಹಕ್ಕೆ ತಲುಪಿದ್ದ ಬೆಳ್ಳಿ ಬೆಲೆ ಸದ್ಯ 90 ಸಾವಿ ರೂಪಾಯಿ ಆಸು ಪಾಸಿಗೆ ಬಂದು ನಿಂತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications