Gold Rate: ಚಿನ್ನದ ಬೆಲೆ ನಿರಂತರ ಇಳಿಕೆ: ಇಂದಿನ ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ ?
Gold Rate August 13: ಚಿನ್ನ ಪ್ರಿಯರಿಗೆ ಸತತ ಮೂರನೇ ದಿನವೂ ಸಂತೋಷವನ್ನುಂಟು ಮಾಡಿದೆ. ಸತತ ಮೂರನೇ ದಿನವೂ ಚಿನ್ನದ ಬೆಲೆ ಇಳಿಕೆ ಆಗಿದೆ. ಸಾಲು ಸಾಲು ಹಬ್ಬಗಳು ಇರುವ ಸಮಯದಲ್ಲೇ ಚಿನ್ನದ ಬೆಲೆ ಇಳಿಕೆ ಆಗುತ್ತಿರುವುದು ಚಿನ್ನ ಪ್ರಿಯರಲ್ಲಿ ಖುಷಿ ಮೂಡಿಸಿದೆ. ಆಗಸ್ಟ್ 13ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಚಿನ್ನದ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿದ್ದು ಸತತ ಮೂರನೇ ದಿನವೂ ಚಿನ್ನದ ಬೆಲೆ ಕಡಿಮೆಯಾಗಿದೆ. ಬುಧವಾರ 18 ಕ್ಯಾರೆಟ್, 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಎನ್ನುವುದು ಅಪರೂಪವಾಗಿತ್ತು. ಆದರೆ, ಅಚ್ಚರಿಯ ಬೆಳವಣಿಗೆ ಎನ್ನುವಂತೆ ಕಳೆದ ಮೂರು ದಿನಗಳಿಂದಲೂ ಚಿನ್ನದ ಬೆಲೆ ಇಳಿಕೆಯಾಗುತ್ತಲ್ಲೇ ಇದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಕಡಿಮೆ ಆಗಬಹುದೇ ಎನ್ನುವ ಆಸೆ ಚಿನ್ನ ಪ್ರಿಯರಲ್ಲಿ ಮೂಡಿದೆ. ಆದರೆ, ಚಿನ್ನದ ಬೆಲೆ ಒಟ್ಟಾರೆ 10 ಗ್ರಾಂಗೆ ಒಂದು ಲಕ್ಷ ರೂಪಾಯಿಯ ಆಸುಪಾಸಿನಲ್ಲೇ ಇದೆ. ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ವಿವರ ಇಲ್ಲಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂ 7,601 ರೂಪಾಯಿ ಹಾಗೂ 10 ಗ್ರಾಂಗೆ 76,010 ರೂಪಾಯಿ ಆಗಿದೆ. ಪ್ರತಿ ಗ್ರಾಂಗೆ 4 ರೂಪಾಯಿ ಹಾಗೂ 10 ಗ್ರಾಂಗೆ 40 ರೂಪಾಯಿ ಕಡಿಮೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆಯಾಗಿದೆ. ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 9,290 ರೂಪಾಯಿ ಹಾಗೂ 10 ಗ್ರಾಂಗೆ 92,900 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ, ಪ್ರತಿ ಗ್ರಾಂ ಚಿನ್ನದ ಬೆಲೆ 5 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 50 ರೂಪಾಯಿ ಕಡಿಮೆಯಾಗಿದೆ. ನೆನ್ನೆಯೂ ಚಿನ್ನದ ಬೆಲೆಗಳಲ್ಲಿ ಭರ್ಜರಿ ಇಳಿಕೆ ಆಗಿತ್ತು.
24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಸತತ ಮೂರನೇ ದಿನವೂ ಇಳಿಕೆ ಆಗಿದೆ. ಒಂದು ಗ್ರಾಂ ಚಿನ್ನದ ಬೆಲೆ 10,135 ರೂಪಾಯಿ ಹಾಗೂ 10 ಗ್ರಾಂಗೆ 1,01,350 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಪ್ರತಿ ಗ್ರಾಂಗೆ 5 ರೂಪಾಯಿ ಹಾಗೂ 10 ಗ್ರಾಂಗೆ 50 ರೂಪಾಯಿ ಕಡಿಮೆಯಾಗಿದೆ.
ಬೆಳ್ಳಿ ಬೆಲೆ ಎಷ್ಟಿದೆ: ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 115 ರೂಪಾಯಿ ಹಾಗೂ 1 ಕೆ.ಜಿಗೆ 1,15,000 ರೂಪಾಯಿ ಇದೆ.












Click it and Unblock the Notifications