Gold-Silver Price Today: ಚಿನ್ನದ ದರದಲ್ಲಿ ಮತ್ತೆ ಹೆಚ್ಚಳ, ಬೆಳ್ಳಿ ಬೆಲೆ ಕುಸಿತ! ಇಂದಿನ ದರಪಟ್ಟಿ
Gold Price Today: ನಿರಂತರವಾಗಿ ಇಳಿಕೆ ಆಗುತ್ತಿದ್ದ ಚಿನ್ನದ ಬೆಲೆಯು ಮತ್ತೆ ಏರುವಿಕೆಯ ಹಾದಿ ಹಿಡಿದೆ. ದಿನೇ ದಿನೆ ಸ್ವಲ್ಪ ಸ್ವಲ್ಪವೇ ಏರಿಕೆ ಆಗುತ್ತಿದೆ. ಒಂದು ವಾರದಿಂದ ನಿರಂತರವಾಗಿ ಸ್ಥಿರವಾಗಿ ಚಿನ್ನ ದರದಲ್ಲಿ ಏರಿಕೆ ಆಗುತ್ತಿದೆ. ಇಂದು ಆಗಸ್ಟ್ 29ರಂದು ಬೆಳ್ಳಿ ಬೆಲೆ ಮತ್ತೆ ಇಳಿಕೆಯಾಗಿದೆ. ಅಮೆರಿಕ ಅಧ್ಯಕ್ಷರ ಸುಂಕ ನೀತಿಯಿಂದಾಗಿ ಭಾರತದಲ್ಲಿ ಅಷ್ಟೇ ಅಲ್ಲದೇ ಇತರ ದೇಶಗಳಲ್ಲಿ ಚಿನ್ನ ಬೆಲೆಯಲ್ಲಿ ಬದಲಾವಣೆ ಕಂಡು ಬಂದಿದೆ.
ಅಂತಾರಾಷ್ಟ್ರೀಯ ಸುಂಕ ನೀತಿ ಕಾರಣಗಳಿಂದಾಗಿ ದಿಢೀರ್ ಬೆಲೆ ಏರಿಕೆ ಮತ್ತು ಇಳಿಕೆಯಂತಹ ಬದಲಾವಣೆಗಳಿಂದ ಗ್ರಾಹಕರಲ್ಲಿ ಗೊಂದಲ ಉಂಟಾಗಿದೆ. ಅಲ್ಲದೇ ಹಬ್ಬದ ದಿನಗಳಲ್ಲಿ, ವಿವಾಹ, ಇನ್ನಿತರ ಕಾರ್ಯಕ್ರಮಗಳಿಗೆ ಚಿನ್ನ ಕೊಳ್ಳಲು ಬಯಸಿದವರಿಗೆ ಸದ್ಯಕ್ಕೆ ಖರೀದಿಸಬೇಕಾ? ಅಥವಾ ಕಾಯಬೇಕಾ? ಪ್ರಶ್ನೆ ಎದುರಾಗಿದೆ.

ಸದಾ ಬೇಡಿಕೆ ಹೆಚ್ಚಿಸಿಕೊಳ್ಳುವ ಚಿನ್ನದ ಬೆಲೆ ಇಂದು ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನ 10 ಗ್ರಾಂ ದರವು 94,060 ರೂಪಾಯಿ ಇದೆ. 24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 1,02,610 ರೂಪಾಯಿಗೆ ಹೆಚ್ಚಾಗಿದೆ. ಕ್ರಮವಾಗಿ ಎರಡು ವಿಧದ ಬಂಗಾರದಲ್ಲಿ ಬೆಲೆಯಲ್ಲಿ ತಲಾ 10 ರೂಪಾಯಿ ಹೆಚ್ಚಾಗಿದೆ. ಇನ್ನು ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದ್ದು, 100 ಗ್ರಾಂ ಚಿನ್ನದ ಬೆಲೆಯು 12,000 ರೂಪಾಯಿಯಿಂದ 11,990 ರೂ.ಗೆ ಕುಸಿತ ಕಂಡಿದೆ. ಬೆಳ್ಳಿಯ ದರ ಇತ್ತೀಚೆಗೆ ನಿರಂತರವಾಗಿ ಇಳಿಕೆ ಕಾಣುತ್ತಲೇ ಇದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಆಗಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಇಂದಿನ ನಗರವಾರು ಚಿನ್ನ-ಬೆಳ್ಳಿ ಬೆಲಯ ಮಾಹಿತಿ ಇಲ್ಲಿದೆ.
ಆಗಸ್ಟ್ 29ರ ನಗರವಾರು ಚಿನ್ನದ ಬೆಲೆ, ಪಟ್ಟಿ
* ಬೆಂಗಳೂರು: 94,060 ರೂಪಾಯಿ
* ಮುಂಬೈ: 94,060 ರೂಪಾಯಿ
* ದೆಹಲಿ: 94,233 ರೂಪಾಯಿ
* ಚೆನ್ನೈ: 94,060 ರೂಪಾಯಿ
* ಕೋಲ್ಕತ್ತಾ: 94,060 ರೂಪಾಯಿ
* ಹೈದರಾಬಾದ್: 94,060 ರೂಪಾಯಿ
* ಪುಣೆ: 94,060 ರೂಪಾಯಿ
ನಗರವಾರು 24K ಬಂಗಾರದ ಬೆಲೆ, ಪಟ್ಟಿ
* ಬೆಂಗಳೂರು: 1,02,610 ರೂಪಾಯಿ
* ದೆಹಲಿ: 1,02,783 ರೂಪಾಯಿ
* ಮುಂಬೈ: 1,02,637 ರೂಪಾಯಿ
* ಚೆನ್ನೈ: 1,02,631 ರೂಪಾಯಿ
* ಕೋಲ್ಕತ್ತಾ: 1,02,635 ರೂಪಾಯಿ
* ಹೈದರಾಬಾದ್: 1,02,610 ರೂಪಾಯಿ
* ಪುಣೆ: 1,02,643 ರೂಪಾಯಿ
* ಅಹಮದಾಬಾದ್: 1,02,650 ರೂಪಾಯಿ
* ಜೈಪುರ: 1,02,750 ರೂಪಾಯಿ












Click it and Unblock the Notifications