Gold Price Drop: ಭಾರತ - ಅಮೆರಿಕ ಭಾಯಿ ಭಾಯಿ: ಷೇರುಮಾರುಕಟ್ಟೆಯಲ್ಲಿ ಹೊಸ ಹುಮ್ಮಸ್ಸು , ಚಿನ್ನದ ಬೆಲೆ ಇಳಿಕೆ!
Gold Price Drop: ಭಾರತ ಹಾಗೂ ಅಮೆರಿಕದ ನಡುವೆ ಆರ್ಥಿಕ ಸಂಬಂಧ ಸುಧಾರಿಸುತ್ತಿರುವ ಬೆನ್ನಲ್ಲೇ ಭಾರತದ ಷೇರುಮಾರುಕಟ್ಟೆ ಚೇತರಿಸಿಕೊಂಡಿದೆ. ಭಾರತದ ಮೇಲೆ ವಿಧಿಸಲಾಗಿದ್ದ ಆಮದು ಸುಂಕದ ಪ್ರಮಾಣವನ್ನು ಶೇ25 ರಿಂದ ಶೇ18 ಇಳಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಚಿನ್ನದ ಬೆಲೆ ಇಳಿಕೆಯಾಗಿದೆ ಹಾಗೂ ಷೇರುಮಾರುಕಟ್ಟೆ ಚೇತರಿಸಿಕೊಂಡಿದೆ.
ಭಾರತ - ಅಮೆರಿಕ ವ್ಯಾಪಾರ ಒಪ್ಪಂದದ ನಂತರ ಷೇರುಮಾರುಕಟ್ಟೆ ಭಾರೀ ಚೇತರಿಸಿಕೊಂಡಿದೆ. ಕೇಂದ್ರ ಬಜೆಟ್ ಮಂಡನೆಯಾದ ಫೆಬ್ರವರಿ 1ರಂದು ಷೇರುಮಾರುಕಟ್ಟೆಯು ಭಾರೀ ಕುಸಿತ ಕಂಡಿತ್ತು. ಇದಾದ ಬೆನ್ನಲ್ಲೇ ಫೆಬ್ರವರಿ ಎರಡರಂದು ನಡೆದಿರುವ ಬೆಳವಣಿಗೆಯು ಆರ್ಥಿಕ ಚೇತರಿಕೆಗೆ ಹಾದಿಯಾಗಿದೆ. ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ವಿರೋಧಿಸಿ, ಭಾರತದ ಮೇಲೆ ಅಮೆರಿಕ ಭಾರೀ ಸುಂಕವನ್ನು ವಿಧಿಸಿತ್ತು. ಭಾರತವು ಐರೋಪ್ಯ ಒಕ್ಕೂಟದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಂತೆಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೋದಿಗೆ ಕರೆ ಮಾಡಿ, ಸುಂಕ ಇಳಿಸುವ ವಿಷಯವನ್ನು ಖಚಿತಪಡಿಸಿದ್ದಾರೆ.

ಮಂಗಳವಾರ - ಫೆಬ್ರವರಿ 3ರಂದು ಭಾರತೀಯ ಷೇರುಮಾರುಕಟ್ಟೆ ಚೇತರಿಸಿಕೊಂಡಿದ್ದು ಶುಭಾರಂಭ ಮಾಡಿದೆ. ಇದರಿಂದ ಚಿನ್ನದ ಬೆಲೆಯಲ್ಲೂ ಇಳಿಕೆಯಾಗುತ್ತಿದೆ. ಬಿಎಸ್‌ಇ ದಿನದ ವಹಿವಾಟು ಪಾಸಿಟಿವ್‌ನಿಂದ ಕೂಡಿದೆ. ಭಾರತೀಯ ಷೇರು ಮಾರುಕಟ್ಟೆ ಚೇತರಿಕೆ ಹಾದಿಯಲ್ಲಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಭಾರತ ಮತ್ತು ಅಮೆರಿಕದ ನಡುವೆ ನಡೆದಿರುವ ಮಾತುಕತೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತದ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದುಬಾರಿ ಸುಂಕವನ್ನು ವಿಧಿಸಿದ್ದರು. ಈಚೆಗೆ ಭಾರತವು ಇನ್ಮುಂದೆ ಇರಾನ್ ಬದಲು ವೆನೆಜುವೆಲಾದಿಂದ ಕಚ್ಚಾ ತೈಲ ಖರೀದಿ ಮಾಡಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದರು.
ಭಾರತೀಯ ಷೇರುಮಾರುಕಟ್ಟೆ ಚೇತರಿಕೆ
ಭಾರತ ಮತ್ತು ಅಮೆರಿಕದ ನಡುವೆ ಉತ್ತಮ ಮಾತುಕತೆ ನಡೆಯುತ್ತಿರುವುದು ಭಾರತೀಯ ಷೇರುಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿದೆ. ಸೆನ್ಸೆಕ್ಸ್ ಪ್ರಿ ಓಪನ್‌ನಲ್ಲಿ 3,600 ಪಾಯಿಂಟ್ಸ್ ಹೆಚ್ಚಾದ್ದು, ನಿಫ್ಟಿ 50 ಸೂಚ್ಯಂಕವು 1200ಕ್ಕೂ ಹೆಚ್ಚು ಪಾಯಿಂಟ್ಸ್‌ಗಳ ಏರಿಕೆ ಕಂಡಿದೆ. ಇದು ಹೂಡಿಕೆದಾರರಲ್ಲಿ ಮುಖದಲ್ಲಿ ನಗು ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಷೇರುಮಾರುಕಟ್ಟೆಯು ಭಾರೀ ಏರಿಳಿತ ಕಂಡಿತ್ತು. ಅಲ್ಲದೇ ಚಿನ್ನ ಮತ್ತು ಬೆಳ್ಳಿ ಬೆಲೆಯು ಏಕಾಏಕಿ ಭಾರೀ ಹೆಚ್ಚಳವಾಗುವುದು ಹಾಗೂ ಒಂದೇ ದಿನದಲ್ಲಿ ಭಾರೀ ಕುಸಿತವನ್ನೂ ಕಂಡಿತ್ತು.
ಷೇರುಮಾರುಕಟ್ಟೆ ಪ್ರಾರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 3,648 ಪಾಯಿಂಟ್ಸ್ ಏರಿಕೆ ಆಗಿದ್ದು. ಇದು ಶೇ.4.47ರಷ್ಟು ಏರಿಕೆ ಆಗಿದೆ. 85,314 ಮಾರ್ಕ್ ತಲುಪಿದ್ದು, ನಿಫ್ಟಿ50 ಸೂಚ್ಯಂಕವು 1,220 ಪಾಯಿಂಟ್ಸ್ ಏರಿಕೆ ಕಂಡಿದೆ. ಇದು ಶೇ. 4.86ರಷ್ಟು ಜಿಗಿತ ಆಗಿರುವುದು ವಿಶೇಷವಾಗಿದೆ. ಇನ್ನು ನಿಫ್ಟಿಯು ಬರೋಬ್ಬರಿ 26,038 ಮಾರ್ಕ್ ಮುಟ್ಟಿದೆ.












Click it and Unblock the Notifications