Gold Rate: ಚಿನ್ನದ ಬೆಲೆ ದಿಢೀರ್ 60,000 ಸಾವಿರಕ್ಕೆ ಇಳಿಕೆ ಸಾಧ್ಯತೆ: ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ?
Gold Rate: ಚಿನ್ನದ ಬೆಲೆಯು ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇಳಿಕೆಯಾಗಿದೆ. ಅಲ್ಲದೇ ದೇಶದಾದ್ಯಂತವೂ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲೂ ಚಿನ್ನದ ಬೆಲೆಯು ಭಾರೀ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ. ಚಿನ್ನದ ಬೆಲೆಯು ಬರೋಬ್ಬರಿ 60,000 ರಿಂದ 70,000 ಸಾವಿರಕ್ಕೆ ಇಳಿಕೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಆರ್‌ಬಿಐ ತೆಗೆದುಕೊಂಡ ಆ ಒಂದು ಪ್ರಮುಖ ನಿರ್ಧಾರದಿಂದ ಚಿನ್ನದ ಬೆಲೆ ಇಳಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಜುಲೈ 07 ರಂದು ಸಹ ಚಿನ್ನದ ಬೆಲೆಯು ಇಳಿಕೆಯಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.
ಚಿನ್ನದ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿತ್ತು. ಇನ್ನೇನು 1 ಲಕ್ಷ ರೂಪಾಯಿ ಗಡಿದಾಟಲಿದೆ ಎಂದು ಅಂದಾಜಿಸುತ್ತಿರುವಾಗಲೇ ಚಿನ್ನದ ಬೆಲೆಯು ಭರ್ಜರಿ ಕಡಿಮೆ ಆಗುತ್ತಿದೆ. ಚಿನ್ನದ ಖರೀದಿ ಪ್ರಮಾಣವನ್ನು ಆರ್‌ಬಿಐ ಕಡಿಮೆ ಮಾಡುತ್ತಿದ್ದು ಇದು ಚಿನ್ನದ ಬೆಲೆ ಇಳಿಕೆಯ ಮುನ್ಸೂಚನೆ ಅಂತಲೇ ಹೇಳಲಾಗುತ್ತಿದೆ. ವಿವಿಧ ದೇಶಗಳು ಚಿನ್ನ ಖರೀದಿ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿರುವಾಗ ಭಾರತದಲ್ಲಿ ಇಳಿಕೆಯಾಗಿದೆ. ವಿವಿಧ ಕಾರಣಕ್ಕೆ ಚಿನ್ನದ ಬೆಲೆಯು ನಿರಂತರವಾಗಿ ಏರಿಕೆ ಆಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯು ಭಾರೀ ಇಳಿಕೆಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿದೆ.

ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯು ಇಳಿಕೆಯಾಗಿದೆ. 18, 22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯು ಭಾರೀ ಇಳಿಕೆ ಕಂಡಿದೆ. ಕಳೆದ ಒಂದು ವಾರದಿಂದಲೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಳಿತ ಕಂಡು ಬಂದಿತ್ತು. ಈ ವಾರ ಮತ್ತೆ ಚಿನ್ನದ ಕಡಿಮೆಯಾಗುತ್ತಿದೆ.
18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 7,412 ರೂಪಾಯಿ ಆಗಿದೆ. ಪ್ರತಿ 10 ಗ್ರಾಂ ಚಿನ್ನದ ಬೆಲೆಯು 74,120 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 10 ರೂಪಾಯಿ ಕಡಿಮೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 1 ಗ್ರಾಂಗೆ 9,059 ರೂಪಾಯಿ ಆಗಿದೆ. 10 ಗ್ರಾಂಗೆ 90,590 ರೂಪಾಯಿ ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ: ಜುಲೈ 07 ರಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಸಹ ಇಳಿಕೆ ಕಂಡು ಬಂದಿದೆ. ಪ್ರತಿ 1 ಗ್ರಾಂ ಬಂಗಾರದ ಬೆಲೆಯು 9,882 ರೂಪಾಯಿ ಆಗಿದೆ. ಪ್ರತಿ 10 ಗ್ರಾಂಗೆ 98,820 ರೂಪಾಯಿ ಆಗಿದೆ.
ಇಂದಿನ ಬೆಳ್ಳಿ ಬೆಲೆ ಎಷ್ಟಿದೆ: ಇಂದಿನ ಬೆಳ್ಳಿ ಬೆಲೆಯು ಯಥಾಸ್ಥಿತಿ ಮುಂದುವರಿದಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 110 ರೂಪಾಯಿ ಹಾಗೂ ಪ್ರತಿ ಕೆಜಿಗೆ 1,10,000 ಸಾವಿರ ರೂಪಾಯಿ ಆಗಿದೆ. ಉಳಿದಂತೆ ಬೆಳ್ಳಿಯ ಬೆಲೆಯಲ್ಲಿ ಮಹತ್ವದ ಬದಲಾವಣೆ ಆಗಿಲ್ಲ.












Click it and Unblock the Notifications