Gold Price: ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ, 2 ದಿನದಲ್ಲಿ 8,200 ರೂಪಾಯಿ ಇಳಿಕೆ...
ಚಿನ್ನದ ಬೆಲೆ ಕೈಗೆ ಸಿಗುತ್ತಿಲ್ಲ... ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗುತ್ತಿದೆ... ಚಿನ್ನ ಮತ್ತೆ ಇನ್ನೆಷ್ಟು ಸಾವಿರ ಹೆಚ್ಚಾಗುತ್ತೋ... ಹೀಗೆ ಚಿನ್ನ ಖರೀದಿಗೆ ಕಾಯುತ್ತಿದ್ದ ಜನರಿಗೆ ಭಾರಿ ದೊಡ್ಡ ತಲೆನೋವು ಕಾಡುತ್ತಿತ್ತು. ಯಾಕಂದ್ರೆ ಚಿನ್ನದ ಬೆಲೆಯಲ್ಲಿ ಭಾರಿ ಭರ್ಜರಿ ಏರಿಕೆ ಕಂಡುಬಂದ ಕಾರಣಕ್ಕೆ ಆಭರಣ ಪ್ರಿಯರು ಚಿಂತೆ ಮಾಡುವಂತೆ ಅಗಿತ್ತು. ಇಂತಹ ಸಮಯದಲ್ಲೇ ಕಳೆದ 2 ದಿನದಲ್ಲಿ ಭರ್ಜರಿ ಸುದ್ದಿ ಸಿಗುತ್ತಿದ್ದು, ಚಿನ್ನ ಇನ್ನಷ್ಟು ಕುಸಿಯುವ ನಿರೀಕ್ಷೆ ಮೂಡಿದೆ.
ಅಂದಹಾಗೆ, ಚಿನ್ನದ ಬೆಲೆ ಹಲವು ಕಾರಣಗಳಿಗೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಈ ಮೂಲಕ ಆಭರಣ ಪ್ರಿಯರು ತಲೆ ಮೇಲೆ ಕೈಹೊತ್ತು ಕೂರುವಂತೆ ಆಗಿದೆ. ಅದರಲ್ಲೂ ಇನ್ನೇನು ಶುಭ ಕಾರ್ಯಗಳು ಶುರುವಾಗುವ ಸಮಯದಲ್ಲೇ ಈ ರೀತಿ ಆಭರಣ ಬೆಲೆ ಭಾರಿ, ಭರ್ಜರಿ ಏರಿಕೆ ಕಾಣುತ್ತಿದೆ ಅನ್ನೋದು ಸಿಕ್ಕಾಪಟ್ಟೆ ಚಿಂತೆ ತರಿಸಿತ್ತು. ಆದರೆ ಇದೀಗ ಚಿನ್ನದ ಬೆಲೆ ಭರ್ಜರಿ ಕುಸಿತವನ್ನ ಕಾಣುತ್ತಿದೆ. ಅದರಲ್ಲೂ, ಚಿನ್ನದ ಬೆಲೆಯಲ್ಲಿ ಕಳೆದ 2 ದಿನಗಳಲ್ಲೇ 8,200 ರೂಪಾಯಿ ಇಳಿಕೆ...

ಚಿನ್ನ 2 ದಿನದಲ್ಲಿ 8,200 ರೂಪಾಯಿ...
ಚಿನ್ನದ ಬೆಲೆ ಗಗನಕ್ಕೆ ಏರಿದ್ದು, ಬಡವರು & ಮಧ್ಯಮ ವರ್ಗದ ಜನರು ಚಿನ್ನ ಖರೀದಿ ಮಾಡಲು ಪರದಾಡುತ್ತಿದ್ದಾರೆ. ಚಿನ್ನ.. ಚಿನ್ನ.. ಅಂತಾ ಆಭರಣ ಪ್ರಿಯ ಮಹಿಳೆಯರು & ಹುಡುಗಿಯರು ಸದಾ ಚಿನ್ನದ ಧ್ಯಾನ ಮಾಡ್ತಾ ಇರುತ್ತಾರೆ. ಹೀಗೆ, ಬಂಗಾರಕ್ಕೆ ಭರ್ಜರಿ ಬೆಲೆ ಬಂದಿರುವ ಹಿನ್ನೆಲೆ ಚಿನ್ನ ಖರೀದಿಗೆ ಸಾಕಷ್ಟು ಜನ ಮುಗಿಬಿದ್ದು ಬರುತ್ತಿದ್ದಾರೆ. ಇಂತಹ ಸಮಯದಲ್ಲಿ ಚಿನ್ನದ ಬೆಲೆ ಕುಸಿತದ ಕಡೆಗೆ ಮುಖ ಮಾಡಿದ್ದು, ಚಿನ್ನದ ಬೆಲೆಯಲ್ಲಿ 2 ದಿನದಲ್ಲಿ 8,200 ರೂಪಾಯಿ ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ಚಿನ್ನ ಇನ್ನಷ್ಟು ಕುಸಿದು ಬೀಳುವ ನಿರೀಕ್ಷೆ ಮೂಡಿದೆ. ಹಾಗಾದ್ರೆ, ಎಷ್ಟು ಸಾವಿರಕ್ಕೆ ಕುಸಿತ ಕಾಣಬಹುದು ಚಿನ್ನ ಅಂದ್ರೆ...
ಚಿನ್ನದ ಬೆಲೆ ಇದೀಗ ಎಷ್ಟಿದೆ?
ಚಿನ್ನದ ಬೆಲೆ ಇದೀಗ ಕುಸಿತದ ಹಾದಿ ಹಿಡಿದಿದ್ದು, 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕಳೆದ 2 ದಿನಗಳಲ್ಲಿ ಪ್ರತಿ 100 ಗ್ರಾಂಗೆ 8,200 ರೂಪಾಯಿ ಕುಸಿತವಾಗಿದೆ. ಈ ಮೂಲಕ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ ಇದೀಗ 8,71,500 ರೂಪಾಯಿ ಆಗಿದ್ದು, 24 ಕ್ಯಾರೆಟ್ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 87,150 ರೂಪಾಯಿ ಆಗಿದೆ. ಹಾಗೇ ಮತ್ತೊಂದು ಕಡೆ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 79,890 ರೂಪಾಯಿ ಆಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಸತತ 2 ದಿನಗಳ ಕಾಲ ಕುಸಿತ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಬೆಲೆಯು ಇನ್ನಷ್ಟು ಕುಸಿತ ಕಾಣುವ ನಿರೀಕ್ಷೆ ದಟ್ಟವಾಗಿದೆ.
ಆಭರಣ ಪ್ರಿಯರಿಗೆ ಆಘಾತ ಎದುರಾಗಿದೆ!
ಚಿನ್ನ ಅಂದ್ರೆ ಆಭರಣ ಪ್ರಿಯ ಮಹಿಳೆಯರಿಗೆ ಮಾತ್ರವಲ್ಲದೆ ಹೂಡಿಕೆ ಮಾಡುವ ಹುಡುಗರು & ಹುಡುಗಿಯರಿಗೆ ಕೂಡ ಸಿಕ್ಕಾಪಟ್ಟೆ ಇಷ್ಟ. ಯಾಕಂದ್ರೆ ಚಿನ್ನ ಖರೀದಿ ಮಾಡಿ ಅಥವಾ ಆ ಚಿನ್ನದ ಮೇಲೆ ಹೂಡಿಕೆ ಮಾಡಿರುವ ಯಾರಿಗೇ ಆಗಿದ್ದರೂ ನಷ್ಟ ಆಗಿಲ್ಲ ಎನ್ನಬಹುದು. ಈ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಲು ಎಲ್ಲರೂ ಇಷ್ಟಪಡುತ್ತಾರೆ. ಹೀಗಿದ್ದಾಗಲೇ ಚಿನ್ನ ಖರೀದಿ ಮಾಡೋಣ, ಈ ಮೂಲಕ 2025 ರಲ್ಲಿ ಯುಗಾದಿಗೆ ಮೊದಲು ಭರ್ಜರಿಯಾಗಿ ಹೊಸ ವರ್ಷಕ್ಕೆ ಎಂಟ್ರಿ ಕೊಡೋಣ ಅಂತಾ ಕಾಯುತ್ತಿದ್ದ ಆಭರಣ ಪ್ರಿಯರಿಗೆ ಆಘಾತ ಎದುರಾಗಿದೆ!












Click it and Unblock the Notifications