Gold Price: ಚಿನ್ನದ ಬೆಲೆ 80,000 ರೂಪಾಯಿಗೆ ಮಹಾ ಕುಸಿತ ಕಾಣುವ ಸಾಧ್ಯತೆ...
ಚಿನ್ನದ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡು ತಲ್ಲಣ ಸೃಷ್ಟಿಯಾಗಿದೆ. ನೋಡ ನೋಡುತ್ತ ಚಿನ್ನದ ಬೆಲೆ ಬರೋಬ್ಬರಿ 1,00,000 ರುಪಾಯಿ ಮೀರಿ ಹೋಗಿದೆ. ಹೀಗಾಗಿ ಚಿನ್ನ ಖರೀದಿ ಮಾಡಲು ಮಿಡಲ್ ಕ್ಲಾಸ್ ಮತ್ತು ಬಡ ವರ್ಗದ ಜನರು ಚಿಂತೆ ಮಾಡುವ ವಾತಾವರಣ ಇದೆ. ಹೀಗಾಗಿ ಚಿನ್ನ ಬೆಲೆ ಯಾವಾಗ ಕುಸಿತ ಕಾಣುತ್ತೆ? ನಾವು ಮತ್ತೆ ಚಿನ್ನ ಯಾವಾಗ ಖರೀದಿ ಮಾಡಬಹುದು? ಅಂತಾ ಕೂಡ ಜನರು ಚಿಂತೆ ಮಾಡುತ್ತಿದ್ದರು. ಹೀಗಿದ್ದಾಗಲೇ, ಚಿನ್ನದ ಬೆಲೆ 80,000 ರೂಪಾಯಿಗೆ ಮಹಾ ಕುಸಿತ ಕಾಣುವ ಸಾಧ್ಯತೆ...
ಚಿನ್ನ ಬೇಕು ಚಿನ್ನ... ಬಂಗಾರ ಯಾವಾಗ ಖರೀದಿ ಮಾಡೋದು? ಚಿನ್ನದ ಬೆಲೆ ದಿಢೀರ್ ಯಾಕೆ ಇಷ್ಟು ಜಾಸ್ತಿ ಆಯ್ತು? ಹೀಗೆ ಆಭರಣ ಪ್ರಿಯ ಮಹಿಳೆಯರು & ಚಿನ್ನದ ಮೇಲೆ ಹೂಡಿಕೆ ಮಾಡಲು ಕಾಯುತ್ತಿದ್ದ ಗಂಡಸರು ಸಾಲು ಸಾಲು ಪ್ರಶ್ನೆ ಹಾಕಿಕೊಳ್ಳುತ್ತಿದ್ದರು. ಅದರಲ್ಲೂ ಚಿನ್ನದ ಬೆಲೆ ಇಳಿಕೆ ಕಾಣಲಿದೆ ಅಂತಾ ಕೋಟಿ ಕೋಟಿ ಜನರು ಕಾಯ್ತಾ ಇದ್ದಾರೆ. ಯಾಕಂದ್ರೆ ಈಗಾಗಲೇ ಚಿನ್ನದ ಬೆಲೆ ಆಕಾಶ ಮುಟ್ಟಿದ್ದು, ಈ ಸಮಯದಲ್ಲಿ ಚಿನ್ನ ಖರೀದಿ ಅಸಾಧ್ಯ ಅನ್ನೋ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಮಯದಲ್ಲೇ ಚಿನ್ನದ ಬೆಲೆ 80,000 ರೂಪಾಯಿಗೆ ಮಹಾ ಕುಸಿತ ಕಾಣುವ ಸಾಧ್ಯತೆ...

ಚಿನ್ನದ ಬೆಲೆ 80,000 ರೂಪಾಯಿಗೆ...
ಚಿನ್ನ ಅಂದ್ರೆ ಮಹಿಳೆಯರಿಗೆ ಸಿಕ್ಕಾಪಟ್ಟೆ ಇಷ್ಟವಾಗುವ ವಸ್ತು, ಹಾಗೇ ಗಂಡಸರಿಗೆ ಕೂಡ ಚಿನ್ನ ಭಾರಿ ಇಷ್ಟ. ಚಿನ್ನ ಬೆಲೆ ವಿಪರೀತ ಏರಿಕೆ ಕಂಡಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ಮ್ಯಾಟರ್. ಆದರೆ ಚಿನ್ನ ಮಾರುಕಟ್ಟೆ ತಜ್ಞರು ಹೇಳುವಂತೆ ಬಂಗಾರ ಬೆಲೆ ಅಗತ್ಯಕ್ಕಿಂತ ಜಾಸ್ತಿ ಆಗಿದೆ ಅಂದ್ರೆ ಮೇಲೆ ಹೋಗಿದೆ. ಈ ಹಿನ್ನೆಲೆ ಚಿನ್ನದ ಬೆಲೆ ಮತ್ತೆ ದೊಡ್ಡ ಪ್ರಮಾಣದಲ್ಲಿ ಕುಸಿಯಬೇಕು ಮತ್ತು ಚಿನ್ನ ಬೆಲೆ ಕುಸಿತ ಕಾಣುವುದು ಅನಿವಾರ್ಯ ಕೂಡ ಎನ್ನಲಾಗುತ್ತಿದೆ. ಮುಂದಿನ ಕೆಲವೇ ತಿಂಗಳಲ್ಲಿ ಚಿನ್ನದ ಬೆಲೆ ದಿಢೀರ್ ಅಂತಾ, 80,000 ರೂಪಾಯಿಗೆ ಮಹಾ ಕುಸಿತ ಕಾಣುವ ಸಾಧ್ಯತೆ ಇದೆ ಅನ್ನೋ ಚರ್ಚೆಗಳು ಕೂಡ ಈಗ ಶುರು ಆಗಿದೆ. ಹೀಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡಲು ಕಾಯುತ್ತಿದ್ದವರಿಗೆ ಸಖತ್ ಖುಷಿಯಾದ ಸುದ್ದಿ ಈ ಮೂಲಕ ಸಿಕ್ಕಂತೆ ಆಗಿದೆ. ಹಾಗಾದ್ರೆ ಇಂದು ಎಷ್ಟಿದೆ ಚಿನ್ನದ ಬೆಲೆ?
ಇಂದು ಎಷ್ಟಿದೆ ಚಿನ್ನದ ಬೆಲೆ?
ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆ 10 ಗ್ರಾಂ ಆಭರಣ ಚಿನ್ನದ ಬೆಲೆ ಅಂದ್ರೆ 22 ಕ್ಯಾರೆಟ್ ಬಂಗಾರ ದರ 1,11,850 ರೂಪಾಯಿ ಆಗಿದೆ. ಇಂದು ಒಂದೇ ದಿನದಲ್ಲಿ ಚಿನ್ನದ ಬೆಲೆ ಬರೋಬ್ಬರಿ 1,150 ರೂಪಾಯಿ ಏರಿಕೆ ಕಂಡಿದೆ. ಇನ್ನೊಂದು ಕಡೆ ಶುದ್ಧ ಚಿನ್ನ ಎಂದು ಕರೆಯುವ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ಇಂದು ಒಂದೇ ದಿನ 1,250 ರೂಪಾಯಿ ಏರಿಕೆಯ ಕಂಡು 1,22,020 ರೂಪಾಯಿಗೆ ತಲುಪಿದೆ. ಒಟ್ನಲ್ಲಿ ಈ ಮೂಲಕ ಚಿನ್ನದ ಬೆಲೆಯು ಕೈಗೆ ಸಿಗದ ವಸ್ತು ಆಗಿ ಏರಿಕೆ ಕಾಣುತ್ತಿದೆ. ಆದರೆ ಚಿನ್ನ ಮಾರುಕಟ್ಟೆ ತಜ್ಞರು ಈ ಬಗ್ಗೆ ಒಂದಷ್ಟು ಅಭಿಪ್ರಾಯ ತಿಳಿಸಿದ್ದು, ಚಿನ್ನ ಬೆಲೆ ಕೆಲವು ತಿಂಗಳಲ್ಲಿ ಕುಸಿಯುವ ಭರವಸೆ ವ್ಯಕ್ತಪಡಿಸಿದ್ದಾರೆ...
ಬಂಗಾರ ಜಗತ್ತಿನಲ್ಲೇ ಅಮೂಲ್ಯ ವಸ್ತು!
ಸಾವಿರಾರು ವರ್ಷಗಳಿಂದ ಚಿನ್ನ ಒಂದು ಅಮೂಲ್ಯ ವಸ್ತು, ವಾತಾವರಣದಲ್ಲಿ ಅತಿ ಬೇಗ ಬೇರೆ ವಸ್ತುಗಳ ಜೊತೆ ಬೆರೆಯದ ಕಾರಣ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಇದೆ. ಈ ಕಾರಣಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಶುರುವಾದರೆ ಚಿನ್ನಕ್ಕೆ ಬೇಡಿಕೆಯೂ ಹೆಚ್ಚಾಗುತ್ತದೆ. ಈಗ ಅಂತಹದ್ದೇ ಸ್ಥಿತಿ ನಿರ್ಮಾಣವಾಗಿದ್ದು ಜಾಗತಿಕವಾಗಿ ಭೀಕರ ಯುದ್ಧಗಳು ಜೋರಾಗುತ್ತಿವೆ. ಮತ್ತೊಂದು ಕಡೆ, ತೆರಿಗೆ ಯುದ್ಧ ಕೂಡ ಶುರು ಆಗಿದೆ. ಹೀಗಾಗಿ ಚಿನ್ನಕ್ಕೆ ಡಿಮ್ಯಾಂಡ್ ಡಬಲ್ ಆಗುತ್ತಿದ್ದು, ಚಿನ್ನ ಖರೀದಿ ಮಾಡಲು ದೊಡ್ಡ ದೊಡ್ಡ ದೇಶಗಳು ಕೂಡ ಮುಂದೆ ಬರುತ್ತಿವೆ. ಇಷ್ಟೆಲ್ಲಾ ಬೆಳವಣಿಗೆ ಪರಿಣಾಮ ಚಿನ್ನದ ಬೆಲೆ ಇನ್ನೇನು ಭಾರಿ ದೊಡ್ಡ ಹಂತಕ್ಕೆ ಹೋಗುವ ನಿರೀಕ್ಷೆ ಇರುವಾಗಲೇ, ಕುಸಿತ ಕಾಣುವ ನಿರೀಕ್ಷೆ ಕೂಡ ಮೂಡಿದೆ.












Click it and Unblock the Notifications