Gold Price: ಚಿನ್ನ ಬೆಲೆ ಕುಸಿದು 80,000 ರೂಪಾಯಿಗೆ ಇಳಿಕೆ ಆಗುವ ಸಾಧ್ಯತೆ...
ಚಿನ್ನ.. ಚಿನ್ನ.. ಚಿನ್ನ... ಹೀಗೆ ಚಿನ್ನದ ಬೆಲೆ ಹೆಚ್ಚಾಯ್ತು ಅಂತಾ ಚಿನ್ನದ ಧ್ಯಾನ ಮಾಡ್ತಾ ಇದ್ದ ಆಭರಣ ಪ್ರಿಯರಿಗೆ ಈಗ ಭರ್ಜರಿ ಸುದ್ದಿ ಸಿಗುತ್ತಿದೆ. ಇನ್ನೇನು ಚಿನ್ನದ ಬೆಲೆಯು ದಿಢೀರ್ 2,00,000 ರೂಪಾಯಿ ಆಗುತ್ತದೆ ಅನ್ನೋ ಸುದ್ದಿ ಓಡಾಡಿದ್ದ ಹಿನ್ನೆಲೆ ಭಯ ಶುರುವಾಗಿತ್ತು. ಈ ರೀತಿ ಚಿನ್ನದ ಬೆಲೆ ದಿಢೀರ್ 2 ಲಕ್ಷ ರೂಪಾಯಿ ತಲುಪಿದರೆ ಮುಂದೇನಪ್ಪಾ ಪರಿಸ್ಥಿತಿ? ಅಂತಾ ಜನ ಕೂಡ ಚಿಂತೆ ಮಾಡುತ್ತಿದ್ದರು. ಅದರಲ್ಲೂ ಆಭರಣ ಪ್ರಿಯರಿಗೆ ಚಿನ್ನದ ಬೆಲೆ ಏರಿಕೆ ಹಿನ್ನೆಲೆ ನಿದ್ದೆಯೇ ಹಾರಿ ಹೋಗಿತ್ತು. ಹೀಗಿದ್ದಾಗಲೇ, ಚಿನ್ನ ಬೆಲೆ ಕುಸಿದು 80,000 ರೂಪಾಯಿಗೆ ಇಳಿಕೆ ಆಗುವ ಸಾಧ್ಯತೆ...
ಚಿನ್ನ ಬೆಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಲು ಕಾರಣ ಹಲವಾರು, ಅದರಲ್ಲೂ ಈ ಹಳದಿ ಲೋಹ ಅಂದರೆ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಸೃಷ್ಟಿ ಆಗಿದ್ದ ಕಾರಣಕ್ಕೆ ಬೆಲೆಯಲ್ಲಿ ಕೂಡ ಭಾರಿ ಏರಿಕೆ ಆಗಿತ್ತು. ಮತ್ತೊಂದು ಕಡೆ ಜಗತ್ತಿನ ಹಲವು ದೇಶಗಳ ನಡುವೆ ಯುದ್ಧ ಘೋಷಣೆ ಆಗಿದ್ದ ಕಾರಣಕ್ಕೂ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗಿತ್ತು. ಆದರೆ ಈಗ ಭಾರತದಲ್ಲಿ ಸಾಲು ಸಾಲು ಹಬ್ಬಗಳು ಮುಕ್ತಾಯ ಆಗಿದ್ದು, ಚಿನ್ನಕ್ಕೆ ಇರುವ ಡಿಮ್ಯಾಂಡ್ ಕೂಡ ಒಂದಷ್ಟು ಕಡಿಮೆ ಆಗಿದೆ. ಹೀಗಾಗಿ ಚಿನ್ನದ ಬೆಲೆ ಕೂಡ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ...

ಚಿನ್ನ ಬೆಲೆ ಕುಸಿದು 80,000 ರೂಪಾಯಿಗೆ ಇಳಿಕೆ...
ಚಿನ್ನ ಅಂದರೆ ಏನೋ ಹರುಷವು... ಹೀಗೆ, ಆಭರಣ ಪ್ರಿಯರು ಚಿನ್ನದ ವಿಷಯ ಕೇಳಿದರೆ ಸಾಕು, ನಸುನಗೆ ಬೀರುತ್ತಾರೆ. ಆದರೆ ಕಳೆದ ಕೆಲವು ತಿಂಗಳಿಂದ ಚಿನ್ನ ಪ್ರಿಯರಿಗೆ ಆಘಾತವೇ ಎದುರಾಗಿದ್ದು ಭಾರಿ ಪ್ರಮಾಣದಲ್ಲಿ ಚಿನ್ನದ ಬೆಲೆ ಏರಿಕೆ ಆಗಿದೆ ಅಂತಾ ಚಿಂತೆ ಮಾಡುತ್ತಿದ್ದರು. ಚಿನ್ನದ ಬೆಲೆಯು ಇಷ್ಟು ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಇದೀಗ ಸ್ವತಃ ಮಾರುಕಟ್ಟೆ ತಜ್ಞರಿಗೆ ಕೂಡ ಆಘಾತ ನೀಡಿದೆ. ಹೀಗಿದ್ದಾಗ ಚಿನ್ನದ ಬೆಲೆ ಇಳಿಕೆ ಯಾವಾಗ?? ಅಂತಾ ಚಿಂತೆಯನ್ನೂ ಮಾಡುತ್ತಿದ್ದಾರೆ ಜನ. ಇದೇ ಸಮಯದಲ್ಲಿ ದಿಢೀರ್ ಚಿನ್ನ ಬೆಲೆ ಕುಸಿದು 80,000 ರೂಪಾಯಿಗೆ ಇಳಿಕೆ ಆಗುವ ಸಾಧ್ಯತೆ...
80,000 ರೂಪಾಯಿಗೆ ಚಿನ್ನದ ಬೆಲೆ...
ಹೌದು, ಇದೀಗ ಚಿನ್ನಕ್ಕೆ ಇರುವ ಡಿಮ್ಯಾಂಡ್ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿದೆ. ಹೀಗಾಗಿಯೇ ಇದೀಗ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬರುತ್ತಿದೆ. ವಾತಾವರಣ ಹೀಗೆ ಇದ್ದರೆ ಚಿನ್ನದ ಬೆಲೆ ಮತ್ತಷ್ಟು ಕುಸಿತ ಕಾಣುತ್ತದೆ ಎಂದು ಚಿನ್ನ ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಇದರ ಜೊತೆಗೆ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳು ನಿಂತರೆ ಚಿನ್ನ & ಬೆಳ್ಳಿ ಬೆಲೆ ಭಾರಿ ದೊಡ್ಡ ಪ್ರಮಾಣದ ಕುಸಿತ ಕಾಣಲಿದೆಯಂತೆ. ಪ್ರಮುಖವಾಗಿ ರಷ್ಯಾ & ಉಕ್ರೇನ್ ಯುದ್ಧ ನಿಂತುಬಿಟ್ಟರೆ ಚಿನ್ನದ ಬೆಲೆ ಪಾತಾಳಕ್ಕೆ ಕುಸಿಯಲಿದೆ ಅನ್ನೋದು ಮಾರುಕಟ್ಟೆ ತಜ್ಞರ ಮಾತು. ಅದರಲ್ಲೂ ಚಿನ್ನ ಬೆಲೆ ಕುಸಿದು 80,000 ರೂಪಾಯಿಗೆ ಇಳಿಕೆ ಆಗುವ ಸಾಧ್ಯತೆ ಕೂಡ ಇದೆ ಅಂತಾ ಮಾತುಕತೆ ತಜ್ಞರು ಹೇಳುತ್ತಾ ಇದ್ದಾರೆ. ಇಂದು ಚಿನ್ನದ ಬೆಲೆಯು 24 ಕ್ಯಾರೆಟ್ ಅಪರಂಜಿ ಚಿನ್ನ ಪ್ರತಿ 10 ಗ್ರಾಂಗೆ 1,23,170 ರೂಪಾಯಿ ಇದ್ದರೆ, 22 ಕ್ಯಾರೆಟ್ ಆಭರಣ ಚಿನ್ನ ಪ್ರತಿ 10 ಗ್ರಾಂಗೆ 1,12,900 ರೂಪಾಯಿ ಇದೆ.












Click it and Unblock the Notifications