Gold Price 1L: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ₹1L..
Gold Price: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇತ್ತು. ಆದರೆ ಇಂದು (ಏಪ್ರಿಲ್ 21) ದೇಶದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಹಾಗಾದ್ರೆ ಎಷ್ಟು ಏರಿಕೆಯಾಗಿದೆ ಎಂದು ಅಂಕಿಅಂಶಗಳ ಸಹಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇಂದು (ಏಪ್ರಿಲ್ 21) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. 10 ಗ್ರಾಂ (24 ಕ್ಯಾರಟ್) ಬಂಗಾರ ದರ ₹99,845 ರೂಪಾಯಿ ಆಗಿದೆ. ಅಂದರೆ ₹1,00,000 ಸಮೀಪ ಬಂದು ನಿಂತಿದೆ. ನಾಳೆ ಇಲ್ಲ ನಾಡಿದ್ದು ಇಷ್ಟಾದರೂ ಆಶ್ಚರ್ಯ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.

ಸೋಮವಾರ ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ ₹1,00,000 ಸಮೀಪ ತಲುಪಿದೆ. ಅಂದರೆ, 10 ಗ್ರಾಂ (24 ಕ್ಯಾರಟ್) ಬಂಗಾರ ದರ ₹99,845 ರೂಪಾಯಿ ಆಗಿದೆ. ಹೀಗೆ ದೇಶದಲ್ಲಿ ಬಂಗಾರ ದರ ಏರಿಕೆಯತ್ತ ಸಾಗುತ್ತಲೇ ಇದೆ. ಕಡಿಮೆಯಾದ್ರೆ, ಅದು 10, 20 ರೂಪಾಯಿ ಅಷ್ಟೇ. ಜಾಸ್ತಿಯಾದ್ರೆ, ಅದೇ ಆಡಿದ್ದೇ ಆಟ ಎಂಬಂತೆ 1,000 ರೂಪಾಯಿ ಮೇಲೆ ಆಗುತ್ತದೆ.
ಮೂಲಗಳ ಪ್ರಕಾರ, 10 ಗ್ರಾಂ (24 ಕ್ಯಾರಟ್) ಬಂಗಾರ ದರ 1,650 ರೂಪಾಯಿ ಏರಿಕೆಯಾಗಿದ್ದು, ₹99,845 ರೂಪಾಯಿ ಆಗಿದೆ. ಶುಕ್ರವಾರ 20 ರೂಪಾಯಿ ಇಳಿಕೆಯಾಗಿ 98,150 ರೂಪಾಯಿಗಳಿಗೆ ತಲುಪಿತ್ತು.
ಬೆಳ್ಳಿ ಬೆಲೆಯೂ ಏರಿಕೆ: ಬೆಳ್ಳಿ ಬೆಲೆಯೂ ಸಹ ಪ್ರತಿ ಕೆಜಿಗೆ 500 ರೂಪಾಯಿ ಏರಿಕೆಯಾಗಿದ್ದು, 98,500 ರೂಪಾಯಿಗೆ ತಲುಪಿದೆ. ಶುಕ್ರವಾರ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 98,000 ರೂಪಾಯಿ ಇತ್ತು. ಇನ್ನು ಬಂಗಾರ ಹಾಗೂ ಬೆಳ್ಳಿ ದರ ಏರಿಕೆಯಿಂದ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ.
ತಜ್ಞರ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯೇ ಈ ಏರಿಕೆಗೆ ಪ್ರಮುಖ ಕಾರಣವಾಗಿದೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಬಡ್ಡಿದರ ಕಡಿತದ ಸಾಧ್ಯತೆ, ಡಾಲರ್‌ನಲ್ಲಿನ ದುರ್ಬಲತೆ ಮತ್ತು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತೊಮ್ಮೆ ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಆಕರ್ಷಿಸಿವೆ.
ಇದು ಹೂಡಿಕೆದಾರರಿಗೆ ಲಾಭದಾಯಕ ಆಗಿದ್ದರೂ, ಸಾಮಾನ್ಯ ಗ್ರಾಹಕರಿಗೆ ಚಿನ್ನ ಈಗ ಹೆಚ್ಚು ದುಬಾರಿ ಆದಂತಾಗಿದೆ. ಅದರಲ್ಲೂ ಇದು ಮದುವೆ ಸೀಸನ್ ಆಗಿದ್ದು, ಈ ಹೆಚ್ಚಳದಿಂದ ಮಧ್ಯಮ ವರ್ಗದ ಜನರಿಗೆ ಸಂಕಷ್ಟ ಆದಂತಾಗಿದೆ. ಹೊಸ ಆಭರಣಗಳನ್ನು ತಯಾರಿಸುವ ಬೇಡಿಕೆ ಕಡಿಮೆಯಾಗಿದ್ದು, ಜನರು ತಮ್ಮ ಹಳೆಯ ಚಿನ್ನವನ್ನು ಮಾರಾಟ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಜವೇರಿ ಬಜಾರ್‌ನಲ್ಲಿ ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ಚಿನ್ನದ ವ್ಯಾಪಾರಿಗಳು ಹೇಳುತ್ತಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸ್ಥಿರತೆ ಮುಂದುವರಿದರೆ ಮತ್ತು ಬೇಡಿಕೆ ಹಾಗೆಯೇ ಇದ್ದರೆ, ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ಹೆಚ್ಚಳ ಆಗುವ ಸಾಧ್ಯತೆಯಿದೆ. ಎಂದು ತಜ್ಞರು ಹೇಳುತ್ತಿದ್ದಾರೆ. ಮತ್ತೆ ಕೆಲವರು ಇನ್ನೂ ಕೆಲವೇ ದಿನಗಳಲ್ಲಿ ಇಳಿಕೆಯಾಗಲೂಬಹುದು ಎಂದು ಹೇಳುತ್ತಿದ್ದಾರೆ.












Click it and Unblock the Notifications