Gold Price: ಚಿನ್ನದ ಬೆಲೆ 1,50,000 ರೂಪಾಯಿಗೆ ಕುಸಿತ, ಇನ್ನು ಎಷ್ಟು ಕಡಿಮೆ ಆಗಬಹುದು ಬಂಗಾರ?
ಚಿನ್ನದ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ, ಚಿನ್ನದ ಬೆಲೆಯಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಕುಸಿತ ಆಗುತ್ತಿರುವ ಹಿನ್ನೆಲೆ ಆಭರಣ ಪ್ರಿಯರು ಕೂಡ ಖುಷಿಯಾಗಿದ್ದಾರೆ. ಅಲ್ಲದೆ, ಚಿನ್ನ ಖರೀದಿಗೆ ಪ್ಲಾನ್ ಕೂಡ ಮಾಡುತ್ತಿದ್ದಾರೆ. ಚಿನ್ನದ ರೀತಿಯಲ್ಲೇ ಬೆಳ್ಳಿ ಬೆಲೆ ಕೂಡ ಇದೀಗ ಭಾರಿ ದೊಡ್ಡ ಮಟ್ಟದಲ್ಲಿ ಕುಸಿದು ಬೀಳುತ್ತಿದೆ. ಮದುವೆ ಸೇರಿದಂತೆ ಹಲವು ಶುಭಕಾರ್ಯ ಬರುವ ಸಮಯದಲ್ಲೇ ಚಿನ್ನದ ಬೆಲೆ ಕುಸಿತ ಭಾರಿ ಸಂತಸ ತಂದಿದೆ.
ನೋಡ ನೋಡುತ್ತಲೇ 1,80,000 ರೂಪಾಯಿಗೆ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ 1,50,000 ರೂಪಾಯಿಗೆ ಇಳಿಕೆ ಕಂಡಿದೆ. ಈ ಮೂಲಕ ಚಿನ್ನದ ಬೆಲೆ ಇಳಿಯಲಿ & ಆ ನಂತರ ಚಿನ್ನ ಖರೀದಿ ಮಾಡೋಣ ಎಂದು ಕಾಯುತ್ತಿದ್ದವರಿಗೆ ಭಾರಿ ಭರ್ಜರಿ ಸುದ್ದಿ ಸಿಕ್ಕಿದೆ. ಹಾಗಾದರೆ ಇನ್ನು ಎಷ್ಟು ಕಡಿಮೆ ಆಗಬಹುದು ಬಂಗಾರ ಬೆಲೆ? ಚಿನ್ನದ ಬೆಲೆ ಕುಸಿತಕ್ಕೆ ಕಾರಣ ಏನು? ಬನ್ನಿ ಚಿನ್ನ ಬೆಲೆ ಭವಿಷ್ಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

ಚಿನ್ನದ ಬೆಲೆ 1,50,000 ರೂಪಾಯಿಗೆ...
ಚಿನ್ನ ಇಂದು ಅಥವಾ ನಿನ್ನೆಯಿಂದ ಅಲ್ಲ, ಸಾವಿರಾರು ವರ್ಷಗಳಿಂದ ಕೂಡ ಅಮೂಲ್ಯ ವಸ್ತು ಎಂಬ ಹೆಮ್ಮೆ ಪಡೆದಿದೆ. ಅದರಲ್ಲೂ ಚಿನ್ನ ಮತ್ತು ಬೆಳ್ಳಿಯನ್ನು ಅಮೂಲ್ಯ ವಸ್ತುಗಳು ಎಂದೇ ಬಳಕೆ ಮಾಡುತ್ತಾ ಬಂದಿದ್ದಾರೆ ನಮ್ಮ ಹಿರಿಯರು. ಹೀಗಿದ್ದಾಗ ಆಧುನಿಕ ಕಾಲದಲ್ಲೂ ಚಿನ್ನ & ಬೆಳ್ಳಿಗೆ ಇರುವ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಅದರಲ್ಲೂ ಕಳೆದು ಎರಡು ವರ್ಷದಲ್ಲಿ ಚಿನ್ನ ಬೆಲೆ ಆಕಾಶ ಮುಟ್ಟುವಷ್ಟು ಎತ್ತರಕ್ಕೆ ಹೋಗುತ್ತಿದೆ. ಇಂತಹ ಸಮಯದಲ್ಲೇ ಕಳೆದ ಮೂರು ದಿನಗಳ ನಿರಂತರ ಕುಸಿತದ ಪರಿಣಾಮ ಚಿನ್ನದ ಬೆಲೆ ಇದೀಗ 1,50,000 ರೂಪಾಯಿಗೆ ಇಳಿಕೆ ಕಂಡಿದೆ.
ಇನ್ನಷ್ಟು ಕುಸಿಯುತ್ತೆ ಚಿನ್ನದ ಬೆಲೆ!
ಹೌದು, ಇದೀಗ ಚಿನ್ನ ಹಾಗೂ ಬೆಳ್ಳಿ ಮಾರುಕಟ್ಟೆ ತಜ್ಞರ ಮಾಹಿತಿ ಪ್ರಕಾರ ಬೆಲೆ ಮತ್ತಷ್ಟು ಕುಸಿತ ಗ್ಯಾರಂಟಿ. ಚಿನ್ನ ಹಾಗೂ ಬೆಳ್ಳಿಗೆ ಡಿಮ್ಯಾಂಡ್ ಇದ್ದರೂ, ಮಾರುಕಟ್ಟೆಯ ಏರುಪೇರು ಕಾರಣಕ್ಕೆ ಚಿನ್ನದ ಬೆಲೆ ಹಾಗೂ ಬೆಳ್ಳಿಯ ಬೆಲೆ ಮತ್ತಷ್ಟು ಇಳಿಕೆ ಆಗುವುದು ಗ್ಯಾರಂಟಿ ಎನ್ನಲಾಗಿದೆ. ಇದೇ ಸಮಯದಲ್ಲಿ ಹಲವು ಅಮೂಲ್ಯ ಲೋಹಗಳ ಬೆಲೆ ಕೂಡ ಕುಸಿದು ಬೀಳುವ ನಿರೀಕ್ಷೆ ಇದೆಯಂತೆ. ಹೀಗಿದ್ದಾಗ ಚಿನ್ನ ಖರೀದಿ ಮಾಡಲು ಕಾಯುತ್ತಿದ್ದವರು ಕುಣಿದಾಡಿದ್ದರೆ, ಮದುವೆ ಆಗಲು ಚಿನ್ನ ಬೇಕು ಅಂತಾ ಚಿಂತೆ ಮಾಡುತ್ತಿದ್ದವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಚಿನ್ನದ ಬೆಲೆ ಭರ್ಜರಿ ಇಳಿಕೆ!
ಬಂಗಾರದ ಬೆಲೆ ಇಳಿಕೆ ಹಿನ್ನೆಲೆಯಲ್ಲಿ ಖರೀದಿ ಭರಾಟೆ ಮುಂದುವರಿದ ಸಮಯದಲ್ಲೇ, ಇರಾನ್ ಮತ್ತು ಅಮೆರಿಕ ಯುದ್ಧದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ಈ ಎರಡೂ ದೇಶಗಳು ಈಗ ಶಾಂತವಾಗಿ ಮಾತುಕತೆ ಮೂಲಕ ಎಲ್ಲವನ್ನೂ ಬಗೆಹರಿಸಿಕೊಂಡರೆ ಅದು ಅತ್ಯುತ್ತಮ ಹಾದಿಯೇ ಆಗಲಿದೆ. ಆಗ ಚಿನ್ನ ಮತ್ತು ಬೆಳ್ಳಿ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಾಣುವ ಸಾಧ್ಯತೆ ಬಗ್ಗೆ ಕೂಡ ಚರ್ಚೆ ಶುರುವಾಗಿದೆ. ಇದಕ್ಕೆ ಪ್ರಬಲ ಕಾರಣ ಕೂಡ ಇದ್ದು, ಪರಮಾಣು ಯುದ್ಧ ಭಯ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಯುದ್ಧಗಳು ಅದರಲ್ಲೂ ಜಗತ್ತಿಗೆ ಕಂಟಕ ತರುವ ರೀತಿ ದೊಡ್ಡ, ದೊಡ್ಡ ಯುದ್ಧಗಳು ಶುರುವಾಗುವ ಸಮಯದಲ್ಲಿ ಚಿನ್ನ & ಬೆಳ್ಳಿ ಬೆಲೆಯು ಭಾರಿ ಏರಿಕೆ ಆಗುತ್ತದೆ. ಈ ಪೈಕಿ ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ನಡೆದರೆ ಮುಂದೆ ಅದು ಪರಮಾಣು ಯುದ್ಧವಾಗಿ ಬದಲಾಗುವ ಭಯ ಕೂಡ ಇದೆ ಈಗ. ಹೀಗಾಗಿಯೇ ಈ ತಿಕ್ಕಾಟವನ್ನು ಶಾಂತಿಯುತವಾಗಿ ಮುಗಿಸಿಕೊಂಡರೆ ಚಿನ್ನದ ಬೆಲೆ ಇನ್ನಷ್ಟು ಕುಸಿಯುವ ನಿರೀಕ್ಷೆ ಇದೆ. ಈಗಾಗಲೇ ಅಮೆರಿಕ ಮತ್ತು ಇರಾನ್ ಯುದ್ಧದ ಬದಲು ಮಾತುಕತೆ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳಲು ಚಿಂತನೆ ನಡೆಸಿವೆ. ಹೀಗಾಗಿ ಆಭರಣ ಪ್ರಿಯರಿಗೆ ಇನ್ನು ಒಂದು ವಾರ ಭರ್ಜರಿ ಸುದ್ದಿ ಸಿಗುವ ನಿರೀಕ್ಷೆ ಇದೆ.












Click it and Unblock the Notifications