Gold Hallmark: ಹಾಲ್ಮಾರ್ಕ್ ಇರುವ ಚಿನ್ನವೆಲ್ಲ ಒರಿಜಿನಲ್ ಅಲ್ಲ, ಪತ್ತೆ ಮಾಡುವುದು ಹೇಗೆ ?

ಚಿನ್ನದ ಬೆಲೆ ನಿರಂತರವಾಗಿ ಜಾಸ್ತಿ ಆಗ್ತಿದೆ. ಜನ ಕೂಡಿಟ್ಟ ಅಲ್ಪ ಸ್ವಲ್ಪ ಹಣದಲ್ಲಿ ಚಿನ್ನ ಖರೀದಿ ಮಾಡುತ್ತಿದ್ದಾರೆ. ಚಿನ್ನ ಖರೀದಿ ಮಾಡುವಾಗ ಹಲವು ಬಾರಿ ಚಿನ್ನವನ್ನು ಪರೀಕ್ಷಿಸಿದರೂ ಮೋಸ ಹೋಗುವ ಸಾಧ್ಯತೆ ಇದೆ. ಕೆಲವೊಮ್ಮೆ ಹಾಲ್ಮಾರ್ಕ್ ಸಹ ಕೈಕೊಡುವ ಸಾಧ್ಯತೆ ಇದೆ. ಹೌದು ಚಿನ್ನ ಅಸಲಿಯೋ ಇಲ್ಲ ನಕಲಿಯೋ ಎಂದು ತಿಳಿದುಕೊಳ್ಳುವುದಕ್ಕೆ ಹಾಲ್‌ಮಾರ್ಕ್‌ ಅವಲಂಬಿಸಲಗುತ್ತದೆ. ಆದರೆ ಹಾಲ್ಮಾರ್ಕ್ನಲ್ಲೂ ಮೋಸ ಮಾಡಿದರೆ ಹೇಗೆ. ಹೌದು ಚಿನ್ನ ಅಸಲಿಯೋ ಇಲ್ಲ ನಕಲಿಯೋ ಎಂದು ನೋಡುವುದೇ ಚಿನ್ನದ ಹಾಲ್‌ ಮಾರ್ಕ್‌ನಿಂದ. ಆದರೆ, ಹಾಲ್‌ ಮಾರ್ಕ್‌ನಲ್ಲೂ ಮೋಸ ಮಾಡುವುದು ನಡೆಯುತ್ತಿದೆ. ಹೀಗಾಗಿ, ಇನ್ಮುಂದೆ ನೀವು ಹಾಲ್‌ ಮಾರ್ಕ್‌ ಇದ್ದರೂ ಚಿನ್ನವನ್ನು ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ ಹೌದು ಇತ್ತೀಚಿನ ದಿನಗಳಲ್ಲಿ ನಕಲಿ ಚಿನ್ನದ ಹಾವಳಿ ಜಾಸ್ತಿ ಆಗಿದೆ. ಅದನ್ನು ತಡೆಯುವುದು ಹೇಗೆ ಅಥವಾ ಕಂಡುಹಿಡಿಯೋದು ಹೇಗೆ ಅನ್ನೋ ಸಿಂಪಲ್‌ ಟಿಪ್ಸ್‌ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ನಕಲಿ ಚಿನ್ನ ಮಾರಾಟ ಮಾರುಕಟ್ಟೆಯಲ್ಲಿ ಜೋರಾಗಿದೆ. ಇದು ಸಹ ಪೆಟ್ರೋಲ್‌ ಹಾಗೂ ಡೀಸೆಲ್‌ನಲ್ಲಿ ಕೆಲವರು ಮೋಸ ಮಾಡುವ ರೀತಿಯಲ್ಲಿ ಬದಲಾಗಿದೆ. ಚಿನ್ನದ ಬೆಲೆ 24 ಕ್ಯಾರೆಟ್‌ ಪ್ರತಿ 10 ಗ್ರಾಂಗೆ 77 ಸಾವಿರ ರೂಪಾಯಿ ಆಗಿದೆ. ಕಳೆದ ಎರಡು ಮೂರು ವರ್ಷಗಳಿಂದ ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿದೆ. ಆದರೆ, ಇದರ ನಡುವೆ ಚಿನ್ನದ ನಕಲಿ ಮಾರಾಟವೂ ಹೆಚ್ಚಳವಾಗಿದ್ದು, ಚಿನ್ನ ಪ್ರಿಯರಿಗೆ ಶಾಕ್‌ ಆಗಿದೆ.

Gold News Not all hallmarked gold is original how to Check

ಜನ ಚಿನ್ನ ಖರೀದಿ ಮಾಡೋದೇ ಹೂಡಿಕೆಯ ದೃಷ್ಟಿಯಿಂದ. ಚಿನ್ನ ಖರೀದಿ ಮಾಡಿ ಇಟ್ಟರೆ ನಾಳೆದಿನ ಕಷ್ಟದ ಸಮಯದಲ್ಲಿ ಇಲ್ಲ, ಚಿನ್ನದ ಬೆಲೆ ಜಾಸ್ತಿಯಾದಾಗ ಹೂಡಿಕೆ ಮಾಡಬಹುದು ಅಂತ. ಆದರೆ, ಈ ಲೆಕ್ಕಾಚಾರವೇ ತೆಲೆಕೆಳಗಾದರೆ ಸಾವಿರಾರು ರೂಪಾಯಿ ಲಾಸ್‌ ಆಗುವುದು ಪಕ್ಕಾ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರವು ಚಿನ್ನದ ನಕಲಿ ಮಾರಾಟವನ್ನು ತಡೆಯಲು ಮುಂದಾಗಿದೆ.

ಕೇಂದ್ರ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್. ನ್ಯಾಷನಲ್ ಸ್ಟ್ಯಾಂಡರ್ಡ್ಸ್ ಬಾಡಿ ಆಫ್ ಇಂಡಿಯಾ ಗ್ರಾಹಕ ವ್ಯವಹಾರಗಳ ಸಚಿವಾಲಯವು ಚಿನ್ನದ ಹಾಲ್‌ ಮಾರ್ಕ್‌ ನಕಲಿಯೋ ಅಥವಾ ಅಸಲಿಯೋ ಎಂದು ಪತ್ತೆ ಮಾಡುವುದಕ್ಕೆ ಬಿಎಸ್‌ಐ ಕೇರ್‌ ಆ್ಯಪ್ ಪರಿಚಯಿಸಿದೆ. ಈ ಆ್ಯಪ್‌ನ ಮೂಲಕ ನೀವು ಅತ್ಯಂತ ಸುಲಭವಾಗಿ ಚಿನ್ನದ ಗುಣಮಟ್ಟವನ್ನು ನೋಡಬಹುದಾಗಿದೆ.

ಬಿಎಸ್‌ಐ ಕೇರ್‌ ಆ್ಯಪ್ ಎಂದರೇನು ?

ಕೇಂದ್ರ ಸರ್ಕಾರವೇ ನಕಲಿ ಚಿನ್ನದ ಮಾರಾಟವನ್ನು ತಡೆಯುವ ಉದ್ದೇಶದಿಂದ ಈ ಬಿಎಸ್‌ಐ ಕೇರ್‌ ಆ್ಯಪ್ ಅನ್ನು ಪರಿಚಯಿಸಿದೆ. ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ಮೊದಲು ಇದನ್ನು ನೀವು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಈ ಆ್ಯಪ್‌ನಲ್ಲಿ ನಿಮ್ಮ ಚಿನ್ನದ ಹಾಲ್‌ ಮಾರ್ಕ್‌ನ ಮೇಲೆ ಇರುವ 10 ಸಂಖ್ಯೆಗಳನ್ನು ಹಾಕಿ ಸರ್ಚ್‌ ಅಂತ ಕೊಡಬೇಕು.

ಈ ರೀತಿ ಸರ್ಚ್‌ ಎಂದು ನಮೂದಿಸಿ ಒಕೆ ಕೊಟ್ಟ ಮೇಲೆ ಚಿನ್ನದ ರಿಜಿಸ್ಟ್ರೇಷನ್ ಯಾವಾಗ ಮಾಡಲಾಗಿದೆ. ಚಿನ್ನದ ಗುಣಮಟ್ಟ ರಿಜಿಸ್ಟ್ರೇಷನ್‌ ಸೇರಿದಂತೆ ಸಂಪೂರ್ಣ ಮಾಹಿತಿ ಸಿಗಲಿದೆ. ನಿಮ್ಮ ಚಿನ್ನದ ಹಾಲ್‌ಮಾರ್ಕ್‌ ಸಂಖ್ಯೆ ಹಾಕಿದ ಮೇಲೂ ಯಾವುದೇ ವಿವರ ಬರದೆ ಇದ್ದರೆ, ಸರ್ಚ್‌ ಹಾಲ್‌ ಮಾರ್ಕ್‌ ಡೇಟ್‌ Error ಅಥವಾ ನೋ ರಿಸಲ್ಟ್‌ ಅಂತ ತೋರಿಸುತ್ತಿದ್ದರೆ, ಅದು ಪಕ್ಕಾ ನಕಲಿ ಚಿನ್ನ ಅಂತ. ನೀವು ಇದೇ ಆ್ಯಪ್ ಬಳಸಿ ನಕಲಿ ಚಿನ್ನಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಬಹುದಾಗಿದೆ. ಈ ಆ್ಯಪ್‌ನಲ್ಲಿ ದೂರು ಕೊಡುವುದಕ್ಕೂ ಆಪ್ಷನ್‌ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+