• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾರ್ಚ್ 29ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ವಿವರ

|

ಬೆಂಗಳೂರು, ಮಾರ್ಚ್ 29: ಭಾರತದ ಆಭರಣ ಮಾರುಕಟ್ಟೆಯಲ್ಲಿ ಭಾನುವಾರ ಇಳಿಕೆ ಕಂಡಿದ್ದ ಚಿನ್ನದ ದರ, ವಾರದ ಆರಂಭದಲ್ಲಿ ಮತ್ತೆ ಏರಿಕೆಯಾಗಿದೆ. ಭಾನುವಾರ ಪ್ರತಿ ನೂರು ಗ್ರಾಂ ಬಂಗಾರದ ದರ 7,600 ರೂಪಾಯಿಯಷ್ಟು ಅಗ್ಗವಾಗಿತ್ತು. ಅದು ಇಂದು 100 ಗ್ರಾಂಗೆ 100 ರೂಪಾಯಿಯಷ್ಟು ಹೆಚ್ಚಳವಾಗಿದೆ. ಪ್ರತಿ ಗ್ರಾಂ ಚಿನ್ನದ ಬೆಲೆ ಸೋಮವಾರ ಬೆಳಗಿನ ವೇಳೆಗೆ 4,298 ರೂಪಾಯಿಯಷ್ಟಿದೆ.

ದೇಶದಲ್ಲಿ 22 ಕ್ಯಾರಟ್‌ನ ಸರಾಸರಿ ಚಿನ್ನದ ದರದಲ್ಲಿ ಪ್ರತಿ 10 ಗ್ರಾಂಗೆ 42,980 ರೂಪಾಯಿಗೆ ಇಳಿದಿದೆ. 24 ಕ್ಯಾರಟ್ ತೂಕದ ಬಂಗಾರದ ದರ 43,980 ರೂಪಾಯಿಗೆ ಇಳಿಕೆಯಾಗಿದೆ. ಈ ನಡುವೆ ಸತತ ಇಳಿಕೆ ಕಂಡಿದ್ದ ಬೆಳ್ಳಿ ದರದಲ್ಲಿ ಸೋಮವಾರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 1000 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಕೆಜಿಗೆ 65,700 ರೂಪಾಯಿ ದರವಿದೆ.

ಗೋಲ್ಡ್ ಗುರು ಮಾತು: ಈ ವಾರದಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆಗೆ 3 ಕಾರಣ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವಹಿವಾಟು ಬದಲಾದಂತೆ ಭಾರತದಲ್ಲಿನ ಚಿನ್ನದ ದರದಲ್ಲಿಯೂ ಬದಲಾವಣೆಗಳಾಗಲಿವೆ. ಹೀಗಾಗಿ ದಿನದ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

ದೆಹಲಿಯಲ್ಲಿ ದರ ಏರಿಕೆ

ದೆಹಲಿಯಲ್ಲಿ ದರ ಏರಿಕೆ

ಬಂಗಾರದ ಬೆಲೆ ದೆಹಲಿಯಲ್ಲಿ ಪ್ರತಿ ಹತ್ತು ಗ್ರಾಂಗೆ 10 ರೂ ಏರಿಕೆಯಾಗಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 44,070 ರೂಪಾಯಿಗೆ ತಲುಪಿದೆ. 24 ಕ್ಯಾರಟ್ ಚಿನ್ನ ಬೆಲೆ ಪ್ರತಿ 10 ಗ್ರಾಂ ಚಿನ್ನದ ದರ 48,070 ರೂಪಾಯಿಗೆ ಹೆಚ್ಚಳ ಕಂಡಿದೆ.

ಬೆಂಗಳೂರಲ್ಲಿ ಚಿನ್ನದ ದರ ಇಳಿಕೆ

ಬೆಂಗಳೂರಲ್ಲಿ ಚಿನ್ನದ ದರ ಇಳಿಕೆ

ಬೆಂಗಳೂರಿನಲ್ಲಿ ಬಂಗಾರದ ಬೆಲೆ ಸೋಮವಾರ 22 ಕ್ಯಾರಟ್ ಚಿನ್ನದ ಪ್ರತಿ ಹತ್ತು ಗ್ರಾಂ 210 ರೂಪಾಯಿಯಷ್ಟು ಇಳಿಕೆಯಾಗಿದೆ. ಪ್ರತಿ ಹತ್ತು ಗ್ರಾಂ ಚಿನ್ನಕ್ಕೆ 41,700 ರೂಪಾಯಿ ಇದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ 230 ರೂಪಾಯಿ ಇಳಿಕೆಯೊಂದಿಗೆ 45,490 ರೂಪಾಯಿಗೆ ಕುಸಿದಿದೆ. ಮೈಸೂರು ಮತ್ತು ಮಂಗಳೂರಿನಲ್ಲಿ ಕೂಡ ಬಂಗಾರದ ಬೆಲೆ ಇದೇ ಮಟ್ಟದಲ್ಲಿದೆ.

ಚಿನ್ನ ಖರೀದಿಸುವ ಕರ್ನಾಟಕದ ಜನರಿಗೆ ರಾಜ್ಯ ಸರ್ಕಾರದ ಬಂಪರ್ ಆಫರ್!

ಚೆನ್ನೈನಲ್ಲಿ ಬೆಲೆ ಏರಿಕೆ

ಚೆನ್ನೈನಲ್ಲಿ ಬೆಲೆ ಏರಿಕೆ

ಚೆನ್ನೈನಲ್ಲಿ ಚಿನ್ನದ ದರದಲ್ಲಿ ಸೋಮವಾರ ಹೆಚ್ಚಳ ಕಂಡಿದೆ. ಪ್ರತಿ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 10 ರೂಪಾಯಿ ಏರಿಕೆಯೊಂದಿಗೆ 42,340 ರೂ.ಗೆ ಮಾರಾಟವಾಗುತ್ತಿದೆ ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 10 ರೂಪಾಯಿ ಏರಿಕೆಯಾಗಿದ್ದು, 46,190 ರೂಪಾಯಿಗೆ ತಲುಪಿದೆ.

'ಚಿನ್ನ' ಖರೀದಿಸುವವರಿಗೆ ಬಂಗಾರದಂಥ ಸುದ್ದಿ ಕೊಟ್ಟ ರಾಜ್ಯ ಬಿಜೆಪಿ ಸರ್ಕಾರ!

ಮುಂಬೈನಲ್ಲಿ ಚಿನ್ನದ ಬೆಲೆ ಕೊಂಚ ಇಳಿಕೆ

ಮುಂಬೈನಲ್ಲಿ ಚಿನ್ನದ ಬೆಲೆ ಕೊಂಚ ಇಳಿಕೆ

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ ಇಳಿಕೆಯಾಗಿದ್ದು, 42,980 ರೂಪಾಯಿಗೆ ತಗ್ಗಿದೆ. 24 ಕ್ಯಾರಟ್ ಚಿನ್ನದ ಬೆಲೆ ಕೂಡ 10 ರೂಪಾಯಿ ಇಳಿಕೆಯೊಂದಿಗೆ 43,980 ರೂ ದರಕ್ಕೆ ಮಾರಾಟವಾಗುತ್ತಿದೆ. ಕೇರಳದಲ್ಲಿ ಚಿನ್ನದ ಬೆಲೆ ಅಗ್ಗವಾಗಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 41,700 ರೂ ಮತ್ತು 24 ಕ್ಯಾರಟ್ ಹಳದಿ ಲೋಹ 45,490 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ.

ದೇಶದಲ್ಲಿ ಬೆಳ್ಳಿ ಬೆಲೆ

ದೇಶದಲ್ಲಿ ಬೆಳ್ಳಿ ಬೆಲೆ

ಬೆಳ್ಳಿ ದರ ಬಹುತೇಕ ನಗರಗಳಲ್ಲಿ ತುಟ್ಟಿಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 300 ರೂ. ಏರಿಕೆಯಾಗಿದ್ದು, 65,700 ರೂಪಾಯಿಯಲ್ಲಿದೆ. ಚೆನ್ನೈನಲ್ಲಿ ಹಿಂದಿನ ದರವನ್ನು ಕಾಯ್ದುಕೊಂಡಿದ್ದು ಒಂದು ಕೆಜಿಗೆ 69,300 ರೂಪಾಯಿ ಇದೆ. ಮುಂಬೈನಲ್ಲಿ ಬೆಳ್ಳಿ ದರ ಏರಿಕೆಯಾಗಿದ್ದು, ಪ್ರತಿ ಕೆಜಿಗೆ 65,700 ರೂಪಾಯಿ ಇದೆ.

* ಚಿನ್ನ ಮತ್ತು ಬೆಳ್ಳಿ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಬದಲಾವಣೆ ಮತ್ತು ಸ್ಥಳೀಯ ತೆರಿಗೆ ನೀತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಈ ಮಾಹಿತಿ ಬೆಳಿಗ್ಗೆ 1೦ ಗಂಟೆಯವರೆಗಿನ ಮಾರುಕಟ್ಟೆ ದರ ಬದಲಾವಣೆಯನ್ನು ಆಧರಿಸಿದೆ.

English summary
Gold and silver rates down on March 29 in some major cities. Here is the price details of major cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X