Gold Rate on Sep 27th: ಇಂದು ಗ್ರಾಹಕರಿಗೆ ಆಘಾತ, ಚಿನ್ನ-ಬೆಳ್ಳಿ ದರದಲ್ಲಿ ಭರ್ಜರಿ ಏರಿಕೆ, ದರ ವಿವರ
Gold Price: ಬಂಗಾರದ ದರದಲ್ಲಿ ನಿರಂತರವಾಗಿ ಏರಿಳಿಕೆ ಮುಂದುವರಿದಿದೆ. ಎರಡು ದಿನ ಕೊಂಚ ಇಳಿಕೆ ಆಗಿದ್ದ ಚಿನ್ನದ ಬೆಲೆಯು ಮತ್ತೆ ಹೆಚ್ಚಾಗಿದೆ. ಗರಿಷ್ಠ ಪ್ರಮಾಣದಲ್ಲಿ ದರ ಏರಿಕೆ ಕಂಡಿದೆ. ಕಳೆದ ಒಂದು ತಿಂಗಳಲ್ಲಿ ಇಳಿಕೆ ಆಗಿದ್ದು, ತೀರಾ ಕಡಿಮೆ, ಬಹುತೇಕ ದಿನಗಳಲ್ಲಿ ಏರುಗತಿಯಲ್ಲೇ ಸಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟ ಹಾಗೂ ಇತರ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರಪಟ್ಟಿ ವಿವರ ಇಲ್ಲಿದೆ.
ಇಂದು ಸೆಪ್ಟಂಬರ್ 27ರಂದು ಕೇವಲ ಚಿನ್ನ ಬೆಲೆ ಮಾತ್ರವಲ್ಲದೇ ಬೆಳ್ಳಿಯ ಬೆಲೆಯಲ್ಲೂ ಭರ್ಜರಿ ಇಳಿಕೆ ಆಗಿದೆ. ಇಂದು ಕರ್ನಾಟಕದಲ್ಲಿ ಬೆಳ್ಳಿ ದರ 10 ಗ್ರಾಂಗೆ 1,495 ರೂಪಾಯಿಗೆ ಹೆಚ್ಚಾಗಿದ್ದು, 69 ರೂಪಾಯಿ ಏರಿಕೆ ಆಗಿದೆ. 100 ಗ್ರಾಮ ಬೆಳ್ಳಿ ದರ 14,950 ರೂಪಾಯಿಯಿದ್ದು 690 ರೂಪಾಯಿ ಏರಿಕೆ ಆಗಿದೆ. ಒಂದು ಕೆಜಿ (1000 ಗ್ರಾಂ) ಬೆಳ್ಳಿಗೆ 1,49,500 ರೂಪಾಯಿ ಇದೆ. ಅಂದರೆ ಒಂದೇ ದಿನ ಬರೋಬ್ಬರಿ 6,900 ಹೆಚ್ಚಾಗಿದೆ.

ಚಿನ್ನದ ಬೆಲೆಯಲ್ಲಿ ಮಾತ್ರವಲ್ಲದೇ ಬೇಡಿಕೆ ಹೆಚ್ಚಿಸಿಕೊಳ್ಳುವಲ್ಲಿಯುವ ಮುಂದಿದೆ. ದರ ಎಷ್ಟೇ ಹೆಚ್ಚಾದರೂ ಸಹಿತ ಬಂಗಾರ ಕೊಳ್ಳುವವರ ಸಂಖ್ಯೆ ಇಳಿಕೆ ಆಗಿಲ್ಲ. ಸಾಲು ಸಾಲು ಹಬ್ಬಗಳು ಎದುರಾದ ಹೊತ್ತಿನಲ್ಲಿ ಚಿನ್ನ ಖರೀದಿ ಪ್ರಮಾಣ ಸಾಮಾನ್ಯವಾಗಿದೆ. ದಸರಾ ಪ್ರಯುಕ್ತ ಚಿನ್ನ ಖರೀದಿಯಲ್ಲಿ ಒಂದಷ್ಟು ಗ್ರಾಹಕರ ತೊಡಗಿದ್ದಾರೆ.
ಇಂದು ಕರ್ನಾಟಕದಲ್ಲಿ 22 ಕ್ಯಾರಟ್ ಚಿನ್ನ 10 ಗ್ರಾಂ ದರಕ್ಕೆ 550 ರೂಪಾಯಿ ಹೆಚ್ಚಾಗಿದ್ದು, ಸದ್ಯ ಅದು1,05,850 ರೂಪಾಯಿ ಮಾರಾಟವಾಗಿದೆ. ಇದೇ ಚಿನ್ನ 100 ಗ್ರಾಂಗೆ 10,58,500 ರೂಪಾಯಿಗೆ ಏರಿಕೆ ಆಗಿದ್ದು, ಒಟ್ಟು ಒಂದೇ ದಿನಕ್ಕೆ 5,500 ರೂಪಾಯಿ ಹೆಚ್ಚಾದಂತಾಗಿದೆ. 24 ಕ್ಯಾರಟ್ ಚಿನ್ನ 10 ಗ್ರಾಂ ದರಕ್ಕೆ 1,15,480 ರೂಪಾಯಿ ಇದ್ದು, 600 ರೂಪಾಯಿ ಏರಿಕೆ ಆಗಿದೆ. 100 ಗ್ರಾಂ 24 ಕ್ಯಾರಟ್ ಚಿನ್ನದ ದರವು 11,54,800 ರೂಪಾಯಿ ಇದೆ.
ಬೆಂಗಳೂರು ಚಿನ್ನ ಬೆಲೆ
22ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 1,05,850 ರೂಪಾಯಿ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 1,15,480 ರೂಪಾಯಿ
18 ಕ್ಯಾರಟ್ 10 ಗ್ರಾಂ ಚಿನ್ನ ದರ: 86,610 ರೂಪಾಯಿ
ಬೆಳ್ಳಿ ದರ 10 ಗ್ರಾಂ: 1,495 ರೂಪಾಯಿ
ಪ್ರಮುಖ ನಗರಗಳ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ
ದೆಹಲಿ : 1,06,000 ರೂಪಾಯಿ
ಜೈಪುರ : 1,06,000
ಅಹಮದಾಬಾದ್: 1,15,530 ರೂಪಾಯಿ
ಪುಣೆ : 1,05,850 ರೂಪಾಯಿ
ಮುಂಬೈ :1,05,850 ರೂಪಾಯಿ
ಹೈದರಾಬಾದ್ : 1,05,850 ರೂಪಾಯಿ
ಚೆನ್ನೈ : 1,05,850 ರೂಪಾಯಿ
ಬೆಂಗಳೂರು: 1,05,850 ರೂಪಾಯಿ
ಕೋಲ್ಕತ್ತಾ :1,05,850 ರೂಪಾಯಿ
24 ಕ್ಯಾರಟ್ 10 ಗ್ರಾಂ ಚಿನ್ನದ ದರಪಟ್ಟಿ
ದೆಹಲಿ : 1,15,630 ರೂಪಾಯಿ
ಜೈಪುರ : 1,15,630 ರೂಪಾಯಿ
ಅಹಮದಾಬಾದ್ : 1,15,530 ರೂಪಾಯಿ
ಪುಣೆ : 1,15,480 ರೂಪಾಯಿ
ಮುಂಬೈ: 1,15,480 ರೂಪಾಯಿ
ಹೈದರಾಬಾದ್: 1,15,480 ರೂಪಾಯಿ
ಚೆನ್ನೈ : 1,15,480 ರೂಪಾಯಿ
ಬೆಂಗಳೂರು: ರೂ1,15,480 ರೂಪಾಯಿ
ಕೋಲ್ಕತ್ತಾ: 1,15,480 ರೂಪಾಯಿ












Click it and Unblock the Notifications