Today Gold Price: ಆಷಾಢ ಮಾಸದ ಕೊನೆಯ ವಾರದಲ್ಲಿ ಹೀಗಿದೆ ನೋಡಿ ಚಿನ್ನ, ಬೆಳ್ಳಿ ದರ
ಬೆಂಗಳೂರು: ಆಫಾಡ ಮಾಸ ಇನ್ನೇನು ಮುಗಿಯುತ್ತಾ ಬಂದಿದೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳು ಇನ್ನೇನು ಸಾಲು ಸಾಲಾಗಿ ಬರುತ್ತವೆ. ಈ ಸಂಧರ್ಭದಲ್ಲಿ ದೇಶೀಯ ಹಾಗೂ ಅಂತರರಾಷ್ಟ್ರೀಯ ಆಭರಣ ಮಾರುಕಟ್ಟೆಯಲ್ಲಿ ಹಳದಿ ಲೋಹ ಮತ್ತು ಬೆಳ್ಳಿಯ ದರಗಳಲ್ಲಿ ನಿರಂತರ ಬದಲಾವಣೆಗಳು ಕಂಡುಬರುತ್ತಿದೆ. ಜಾಗತಿಕ ಆರ್ಥಿಕ ಬೆಳವಣಿಗೆಗಳು ಹಾಗೂ ಹೂಡಿಕೆದಾರರ ಬೇಡಿಕೆಯ ಹಿನ್ನೆಲೆಯಲ್ಲಿ ಬಂಗಾರ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಇಂದು (ಆಗಸ್ಟ್ 07) ಬೆಲೆಗಳಲ್ಲಿ ಸಣ್ಣ ಪ್ರಮಾಣದ ಏರಿಳಿತ ದಾಖಲಾಗಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು ಬದಲಾವಣೆಯಾಗಿದೆ ಎನ್ನುವುದರ ಮೇಲೆ ಗ್ರಾಹಕರು ಯಾವಾಗಲೂ ಕಣ್ಣಿಟ್ಟಿರುತ್ತಾರೆ.ನಿನ್ನೆ ಆಗಸ್ಟ್ 06ಕ್ಕೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆಯಾಗಿದ್ದರೆ, ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.

ನಿನ್ನೆ ಮಾರುಕಟ್ಟೆಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,725 ರೂಪಾಯಿ ಇತ್ತು. ಇಂದು ಪ್ರತಿ ಗ್ರಾಂಗೆ 1 ರೂಪಾಯಿ ಹೆಚ್ಚಳವಾಗಿದ್ದು, 13,726 ರೂಪಾಯಿಗೆ ತಲುಪಿದೆ. ಅಂದರೆ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾಗಿ 1,37,260 ರೂಪಾಯಿ ದಾಖಲಾಗಿದೆ. ಅದೇ ರೀತಿ, 24 ಕ್ಯಾರಟ್ ಶುದ್ಧ ಚಿನ್ನದ ಬೆಲೆಯಲ್ಲೂ ಪ್ರತಿ ಗ್ರಾಂಗೆ 1 ರೂಪಾಯಿ ಏರಿಕೆ ಕಂಡುಬಂದು, ನಿನ್ನೆಯ 14,973 ರೂಪಾಯಿಯಿಂದ ಇಂದು 14,974 ರೂಪಾಯಿಗೆ ತಲುಪಿದೆ.
ಆದರೆ ಬೆಳ್ಳಿ ದರದಲ್ಲಿ ಕೊಂಚ ಇಳಿಕೆಯಾಗಿದ್ದು, ನಿನ್ನೆ 1 ಕಿಲೋಗ್ರಾಂ ಬೆಳ್ಳಿಗೆ 2,40,000 ರೂಪಾಯಿ ಇದ್ದ ದರವು ಇಂದು 100 ರೂಪಾಯಿ ಇಳಿಕೆ ಕಂಡು 2,39,900 ರೂಪಾಯಿಗೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಆಭರಣ ಚಿನ್ನದ 1 ಗ್ರಾಂ ಬೆಲೆ 13,726 ರೂಪಾಯಿ ಹಾಗೂ 24 ಕ್ಯಾರಟ್ ಶುದ್ಧ ಚಿನ್ನದ 1 ಗ್ರಾಂ ಬೆಲೆ 14,974 ರೂಪಾಯಿ ಇದೆ. ಇನ್ನು 18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 11,231 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 239.90 ರೂಪಾಯಿ ಹಾಗೂ 1 ಕಿಲೋಗ್ರಾಂಗೆ 2,39,900 ರೂಪಾಯಿ ಇದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ
ದೇಶದ ವಿವಿಧ ನಗರಗಳಲ್ಲಿ ಸ್ಥಳೀಯ ತೆರಿಗೆಗಳು, ಸಾರಿಗೆ ವೆಚ್ಚ ಹಾಗೂ ಆಭರಣ ಮಾರುಕಟ್ಟೆಯ ಬೇಡಿಕೆಯ ಆಧಾರದ ಮೇಲೆ ಚಿನ್ನದ ದರದಲ್ಲಿ ಕೊಂಚ ವ್ಯತ್ಯಾಸವಿರುತ್ತದೆ.
ಇಂದಿನ ಪ್ರಮುಖ ನಗರಗಳ 22 ಕ್ಯಾರಟ್ 1 ಗ್ರಾಂ ಆಭರಣ ಚಿನ್ನದ ದರ ಪಟ್ಟಿ ಹೀಗಿದೆ:
ಬೆಂಗಳೂರು - 13,726 ರೂಪಾಯಿ
ದೆಹಲಿ - 13,741 ರೂಪಾಯಿ
ಚೆನ್ನೈ - 13,751 ರೂಪಾಯಿ
ಮುಂಬೈ - 13,726 ರೂಪಾಯಿ
ಹೈದರಾಬಾದ್ - 13,726 ರೂಪಾಯಿ
ಅಹಮದಾಬಾದ್ - 13,731 ರೂಪಾಯಿ
ಪುಣೆ - 13,726 ರೂಪಾಯಿ
ಕೋಲ್ಕತ್ತಾ - 13,726 ರೂಪಾಯಿ
ಒಟ್ಟಿನಲ್ಲಿ ಆಗಸ್ಟ್ 07ರಂದು ಬಂಗಾರದ ಮಾರುಕಟ್ಟೆಯಲ್ಲಿ ಗಣನೀಯ ಬದಲಾವಣೆಯಾಗದೆ ಬೆಲೆಗಳು ಸ್ಥಿರತೆಯತ್ತ ಮುಖ ಮಾಡಿವೆ. ನಿನ್ನೆಗೆ ಹೋಲಿಸಿದರೆ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ಕೇವಲ 1 ರೂಪಾಯಿ ಏರಿಕೆಯಾಗಿ, ಬೆಂಗಳೂರು ಹಾಗೂ ಮುಂಬೈನಲ್ಲಿ 13,726 ರೂಪಾಯಿಗೆ ಮಾರಾಟವಾಗುತ್ತಿದೆ. 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14,974 ರೂಪಾಯಿ ದಾಖಲಾಗಿದೆ. ಮತ್ತೊಂದೆಡೆ ಬೆಳ್ಳಿ ಬೆಲೆಯು ಕೆಜಿಗೆ 100 ರೂಪಾಯಿ ಇಳಿಕೆ ಕಂಡು 2,39,900 ರೂಪಾಯಿಗೆ ತಲುಪಿದ್ದು, ಗ್ರಾಹಕರಿಗೆ ಸಣ್ಣ ಮಟ್ಟದ ರಿಲೀಫ್ ನೀಡಿದೆ.
ಸಲಹೆ: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಪ್ರತಿದಿನವೂ ಬದಲಾಗುತ್ತಿರುವುದರಿಂದ, ಆಭರಣ ಖರೀದಿಸಲು ಇಚ್ಛಿಸುವ ಗ್ರಾಹಕರು ಬಿಐಎಸ್ ಹಾಲ್‌ಮಾರ್ಕ್ ಇರುವ ಶುದ್ಧ ಚಿನ್ನವನ್ನು ಮಾತ್ರ ಖರೀದಿಸುವುದು ಸುರಕ್ಷಿತ. ಜೊತೆಗೆ ಆಭರಣ ಮಳಿಗೆಗಳಲ್ಲಿ ಮೇಕಿಂಗ್ ಚಾರ್ಜ್ ಹಾಗೂ ಜಿಎಸ್‌ಟಿ ದರಗಳನ್ನು ಪರಿಶೀಲಿಸಿ ಖರೀದಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ .


Click it and Unblock the Notifications
