Gold Rate Today : ಚಿನ್ನಾಭರಣ ಪ್ರಿಯರಿಗೆ ಅತಿ ದೊಡ್ಡ ಶಾಕ್: ಇಲ್ಲಿದೆ ಇಂದಿನ ದರಪಟ್ಟಿ
ಬೆಂಗಳೂರು, ಮಾರ್ಚ್ 19: ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಯುಗಾದಿ ಹಬ್ಬ ಬಂತು. ಮದುವೆ ಸೀಸನ್ ಬೇರೆ. ಈ ಟೈಂನಲ್ಲಿ ಒಂದಷ್ಟು ಚಿನ್ನ ಖರೀದಿ ಮಾಡೋಣ ಅಂತ ಅಂದುಕೊಳ್ತಿದ್ದ ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಭಾರತದ ಇತಿಹಾಸದಲ್ಲೇ ಚಿನ್ನದ ದರ ದಾಖಲೆ ಮಟ್ಟದಲ್ಲಿ ಏರಿಕೆ ಕಾಣುತ್ತಿದೆ. ಕಳೆದ ಎರಡು ದಿನಗಳ ಹಿಂದೆ ತುಸು ಇಳಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಿನ್ನ, ಬೆಳ್ಳಿ ಬೆಲೆ ಇಂದು ಬುಧವಾರ ಹೊಸ ದಾಖಲೆ ಮಟ್ಟಕ್ಕೆ ಹೋಗಿವೆ.
ನಿನ್ನೆ ಹಾಗೂ ಇಂದು (ಮಾರ್ಚ್ 19) ಚಿನ್ನ ಮತ್ತು ಬೆಳ್ಳಿ ಬೆಲೆಗಳ ಭರ್ಜರಿ ಏರಿಕೆ ಮುಂದುವರಿದಿದೆ. ಬಹುತೇಕ ಎಲ್ಲಾ ದೇಶಗಳಲ್ಲೂ ಚಿನ್ನದ ಬೆಲೆ ಗಣನೀಯವಾಗಿ ಹೆಚ್ಚುತ್ತಿದ್ದು, ಆಭರಣ ಚಿನ್ನದ ಬೆಲೆ ಭಾರತದಲ್ಲಿ ಮೊದಲ ಬಾರಿಗೆ 8,300 ರೂ ಗಡಿ ದಾಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 82,900 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 90,440 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,500 ರುಪಾಯಿ ಇದೆ. ಹಾಗಾದರೇ ವಿವಿಧ ನಗರದಲ್ಲಿ ಮಾರ್ಚ್ 19 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮಾರ್ಚ್ 19 ರಂದು ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,900 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,440 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,830 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,050 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 82,900 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,440 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,050 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 82,900 ರೂ
ಚೆನ್ನೈ: 82,900 ರೂ
ಮುಂಬೈ: 82,900 ರೂ
ದೆಹಲಿ: 83,050 ರೂ
ಕೋಲ್ಕತಾ: 82,900 ರೂ
ಕೇರಳ: 82,900 ರೂ
ಅಹ್ಮದಾಬಾದ್: 82,950 ರೂ
ಜೈಪುರ್: 83,050 ರೂ
ಲಕ್ನೋ: 83,050 ರೂ
ಭುವನೇಶ್ವರ್: 82,900 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 4,240 ರಿಂಗಿಟ್ (82,900 ರುಪಾಯಿ)
ದುಬೈ: 3,382.50 ಡಿರಾಮ್ (79,790 ರುಪಾಯಿ)
ಅಮೆರಿಕ: 920 ಡಾಲರ್ (79,700 ರುಪಾಯಿ)
ಸಿಂಗಾಪುರ: 1,258 ಸಿಂಗಾಪುರ್ ಡಾಲರ್ (81,850 ರುಪಾಯಿ)
ಕತಾರ್: 3,415 ಕತಾರಿ ರಿಯಾಲ್ (81,160 ರೂ)
ಸೌದಿ ಅರೇಬಿಯಾ: 3,460 ಸೌದಿ ರಿಯಾಲ್ (79,920 ರುಪಾಯಿ)
ಓಮನ್: 359.50 ಒಮಾನಿ ರಿಯಾಲ್ (80,900 ರುಪಾಯಿ)
ಕುವೇತ್: 278.30 ಕುವೇತಿ ದಿನಾರ್ (78,300 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 10,500 ರೂ
ಚೆನ್ನೈ: 11,400 ರೂ
ಮುಂಬೈ: 10,500 ರೂ
ದೆಹಲಿ: 10,500 ರೂ
ಕೋಲ್ಕತಾ: 10,500 ರೂ
ಕೇರಳ: 11,400 ರೂ
ಅಹ್ಮದಾಬಾದ್: 10,500 ರೂ
ಜೈಪುರ್: 10,500 ರೂ
ಲಕ್ನೋ: 10,500 ರೂ
ಭುವನೇಶ್ವರ್: 11,400 ರೂ












Click it and Unblock the Notifications