Gold Silver Price: ಶ್ರಾವಣಕ್ಕೂ ಮುನ್ನ ಚಿನ್ನ ಖರೀದಿಸುವವರಿಗೆ ಸಿಹಿಸುದ್ದಿ: ಬಂಗಾರದ ದರ ಇಳಿಕೆ

ಬೆಂಗಳೂರು: ಇನ್ನೇನು ಆಷಾಢ ಮಾಸ ಮುಗಿದು ಶ್ರಾವಣ ಆರಂಭವಾಗಲು ನಾಲ್ಕೈದು ದಿನಗಳಷ್ಟೇ ಬಾಕಿ ಉಳಿದಿವೆ. ಶ್ರಾವಣ ಮಾಸದೊಂದಿಗೆ ಸಾಲು ಸಾಲು ಮದುವೆಗಳು ಹಾಗೂ ವಿವಿಧ ಶುಭಸಮಾರಂಭಗಳು ಆರಂಭವಾಗಲಿವೆ. ಈ ಸಂದರ್ಭದಲ್ಲೇ ಇತ್ತೀಚೆಗೆ ಭರ್ಜರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿರುವುದು ಆಭರಣ ಖರೀದಿಗೆ ಮುಂದಾಗಿರುವ ಗ್ರಾಹಕರಿಗೆ ಕೊಂಚ ನೆಮ್ಮದಿ ನೀಡಿದೆ.

ಭಾನುವಾರ (ಆಗಸ್ಟ್ 9, 2026) ಚಿನ್ನದ ದರದಲ್ಲಿ ಅಲ್ಪ ಪ್ರಮಾಣದ ಏರಿಕೆ ದಾಖಲಾಗಿತ್ತು. ಇದೇ ವೇಳೆ ಬೆಳ್ಳಿ ಬೆಲೆಯಲ್ಲೂ ಕೊಂಚ ಇಳಿಕೆ ಕಂಡುಬಂದಿತ್ತು. ಆದರೆ ಇದೀಗ ಹೊಸ ವಾರದ ಆರಂಭದಲ್ಲೇ ಬಂಗಾರದ ಬೆಲೆ ಇಳಿಕೆಯಾಗಿರುವುದು, ಹಬ್ಬ ಹಾಗೂ ಶುಭಸಮಾರಂಭಗಳ ಸೀಸನ್‌ ಆರಂಭದ ಹೊತ್ತಿನಲ್ಲಿ ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ಸಂತಸದ ಸುದ್ದಿಯಾಗಿದೆ.

Gold And Silver Price Today Check Latest Gold Rate On August 10th 2026

ಕಳೆದ ವಾರ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡುಬಂದಿದ್ದರೂ, ಸೋಮವಾರ (ಆಗಸ್ಟ್ 10) ಬಂಗಾರದ ದರದಲ್ಲಿ ಕೊಂಚ ಇಳಿಕೆ ದಾಖಲಾಗಿದೆ. ಇಂದು 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 35ರಷ್ಟು ಕಡಿಮೆಯಾಗಿದೆ. ಮತ್ತೊಂದೆಡೆ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,39,300 ಇದ್ದರೆ, 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 1,51,970 ಇದೆ. ಕಳೆದ ವಾರ ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ ₹765ರಷ್ಟು ಭರ್ಜರಿ ಏರಿಕೆಯಾಗಿತ್ತು.

ಆಗಸ್ಟ್ 10ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ದರ

* 24 ಕ್ಯಾರಟ್ ಚಿನ್ನ: 15,197 ಪ್ರತಿ ಗ್ರಾಂ

* 22 ಕ್ಯಾರಟ್ ಚಿನ್ನ: 13,930 ಪ್ರತಿ ಗ್ರಾಂ

* 18 ಕ್ಯಾರಟ್ ಚಿನ್ನ: 11,398 ಪ್ರತಿ ಗ್ರಾಂ

* ಬೆಳ್ಳಿ: 245 ಪ್ರತಿ ಗ್ರಾಂ

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ

* 24 ಕ್ಯಾರಟ್ ಚಿನ್ನ: 15,197 ಪ್ರತಿ ಗ್ರಾಂ

* 22 ಕ್ಯಾರಟ್ ಚಿನ್ನ: 13,930 ಪ್ರತಿ ಗ್ರಾಂ

* ಬೆಳ್ಳಿ: 245 ಪ್ರತಿ ಗ್ರಾಂ

ಅಂದರೆ, ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ ₹1,39,300 ಹಾಗೂ 10 ಗ್ರಾಂ 24 ಕ್ಯಾರಟ್ ಚಿನ್ನಕ್ಕೆ 1,51,970 ಪಾವತಿಸಬೇಕಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ

* ಬೆಂಗಳೂರು: 13,930

* ಚೆನ್ನೈ: 13,930

* ಮುಂಬೈ: 13,930

* ದೆಹಲಿ: 13,945

* ಕೋಲ್ಕತಾ: 13,930

* ಕೇರಳ: 13,930

* ಅಹ್ಮದಾಬಾದ್:13,935

* ಜೈಪುರ: 13,945

* ಲಕ್ನೋ: 13,945

* ಭುವನೇಶ್ವರ: 13,930

ಪ್ರಮುಖ ನಗರಗಳಲ್ಲಿ ಬೆಳ್ಳಿ ದರ

* ಬೆಂಗಳೂರು: 245 ಪ್ರತಿ ಗ್ರಾಂ

* ಚೆನ್ನೈ: 250 ಪ್ರತಿ ಗ್ರಾಂ

* ಮುಂಬೈ: 245 ಪ್ರತಿ ಗ್ರಾಂ

* ದೆಹಲಿ: 245 ಪ್ರತಿ ಗ್ರಾಂ

* ಕೋಲ್ಕತಾ: 245 ಪ್ರತಿ ಗ್ರಾಂ

* ಕೇರಳ: 250 ಪ್ರತಿ ಗ್ರಾಂ

* ಅಹ್ಮದಾಬಾದ್: 245 ಪ್ರತಿ ಗ್ರಾಂ

* ಜೈಪುರ: 245 ಪ್ರತಿ ಗ್ರಾಂ

* ಲಕ್ನೋ: 245 ಪ್ರತಿ ಗ್ರಾಂ

* ಭುವನೇಶ್ವರ: 250 ಪ್ರತಿ ಗ್ರಾಂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+