ಆಷಾಢ ಮುಗಿಯುತ್ತಿದ್ದಂತೆ ಗಗನಕ್ಕೇರಿದ ಬಂಗಾರದ ಬೆಲೆ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ಪಟ್ಟಿ ಇಲ್ಲಿದೆ

ಬೆಂಗಳೂರು: ಆಷಾಢ ಕಳೆದು ಶ್ರಾವಣ ಬರಲು ಇನ್ನೇನು ನಾಲ್ಕೈದು ದಿನ ಅಷ್ಟೇ ಬಾಕಿ ಇರುವುದು. ಇನ್ನೂ ಸಾಲು ಸಾಲು ಮದುವೆ ಹಾಗೂ ಇತರೆ ಶುಭಸಮಾರಂಭಗಳು ಶುರುವಾಗುತ್ತವೆ. ಈ ಸಂದರ್ಭದಲ್ಲಿ ಇಳಿಮುಖವಾಗಿದ್ದ ಚಿನ್ನದ ದರ ಮತ್ತೆ ಗಗನಕ್ಕೇರಿದೆ. ಅಂತಾರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳು ಹಾಗೂ ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ನಿರಂತರ ಏರಿಳಿತಗಳು ಕಂಡುಬರುತ್ತಿವೆ.

ಶನಿವಾರ (ಆಗಸ್ಟ್ 08, 2026) ಬಂಗಾರದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದರೆ, ಬೆಳ್ಳಿಯ ದರದಲ್ಲಿ ಸಣ್ಣ ಪ್ರಮಾಣದ ಇಳಿಕೆ ಕಂಡುಬಂದಿದೆ. ಹಬ್ಬಗಳ ಸೀಸನ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಆಭರಣ ಪ್ರಿಯರು ಹಾಗೂ ಹೂಡಿಕೆದಾರರ ಗಮನ ಚಿನ್ನ-ಬೆಳ್ಳಿ ದರದ ಮೇಲೆ ಇರುತ್ತದೆ.

Gold

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಏರಿಳಿತ

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಇಂದು ಗ್ರಾಹಕರ ಗಮನ ಸೆಳೆಯುತ್ತಿದೆ ನೋಡಿ . ಇಂದಿನ ಮಾರುಕಟ್ಟೆ ದರದಂತೆ ಬೆಂಗಳೂರಿನಲ್ಲಿ 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15,235 ರೂಪಾಯಿ ಆಗಿದ್ದು, 10 ಗ್ರಾಂಗೆ 1,52,350 ರೂಪಾಯಿ ತಲುಪಿದೆ. ಆಭರಣ ತಯಾರಿಕೆಗೆ ಬಳಸುವ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 13,965 ರೂಪಾಯಿ ಹಾಗೂ 10 ಗ್ರಾಂಗೆ 1,39,650 ರೂಪಾಯಿ ಇದೆ. 18 ಕ್ಯಾರಟ್ ಚಿನ್ನದ ದರವು ಪ್ರತಿ ಗ್ರಾಂಗೆ 11,426 ರೂಪಾಯಿ ಆಗಿದೆ.

ಇನ್ನೊಂದೆಡೆ, ಬೆಳ್ಳಿಯ ದರವು ಪ್ರತಿ ಕಿಲೋಗ್ರಾಂಗೆ 2,39,900 ರೂಪಾಯಿ (ಗ್ರಾಂಗೆ 239.90 ರೂಪಾಯಿ) ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.

ನಿನ್ನೆ ಮಾರುಕಟ್ಟೆ ದರಕ್ಕೆ ಹೋಲಿಸಿದರೆ, ಇಂದು ಚಿನ್ನದ ಬೆಲೆಯಲ್ಲಿ ಗ್ರಾಂಗೆ 100ರಿಂದ 109 ರೂಪಾಯಿಯಷ್ಟು ಏರಿಕೆ ದಾಖಲಾಗಿದೆ. ನಿನ್ನೆ (ಆಗಸ್ಟ್ 07) ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 13,865 ರೂಪಾಯಿ ಇತ್ತು; ಇಂದು ಅದು 100 ರೂಪಾಯಿ ಏರಿಕೆಯಾಗಿ 13,965 ರೂಪಾಯಿಗೆ ತಲುಪಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ಬೆಲೆ ನಿನ್ನೆ ಗ್ರಾಂಗೆ 15,126 ರೂಪಾಯಿ ಇತ್ತು, ಇಂದು 109 ರೂಪಾಯಿ ಹೆಚ್ಚಾಗಿ 15,235 ರೂಪಾಯಿಗೆ ಏರಿಕೆಯಾಗಿದೆ.

ಬೆಳ್ಳಿಯ ಬೆಲೆಯನ್ನು ಗಮನಿಸುವುದಾದರೆ, ನಿನ್ನೆ ಪ್ರತಿ ಕಿಲೋಗ್ರಾಂಗೆ 2,40,000 ರೂಪಾಯಿ ಇದ್ದ ದರವು ಇಂದು 100 ರೂಪಾಯಿಗಳಷ್ಟು ಅಲ್ಪ ಇಳಿಕೆ ಕಂಡು 2,39,900 ರೂಪಾಯಿಗೆ ಸ್ಥಿರಗೊಂಡಿದೆ.

ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪಟ್ಟಿ

ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಸ್ಥಳೀಯ ತೆರಿಗೆಗಳು ಹಾಗೂ ಸಾಗಾಟ ವೆಚ್ಚಗಳ ಆಧಾರದ ಮೇಲೆ ಚಿನ್ನದ ದರದಲ್ಲಿ ಸಣ್ಣ ಪ್ರಮಾಣದ ವ್ಯತ್ಯಾಸಗಳಿರುತ್ತವೆ.

ಇಂದಿನ ನಗರವಾರು 22 ಕ್ಯಾರಟ್ 1 ಗ್ರಾಂ ಚಿನ್ನದ ನಿಖರ ಬೆಲೆ ಪಟ್ಟಿ ಈ ಕೆಳಗಿನಂತಿದೆ:

ಬೆಂಗಳೂರು - 13,965 ರೂಪಾಯಿ

ದೆಹಲಿ - 13,985 ರೂಪಾಯಿ

ಚೆನ್ನೈ - 13,900 ರೂಪಾಯಿ

ಮುಂಬೈ - 13,965 ರೂಪಾಯಿ

ಹೈದರಾಬಾದ್ - 13,965 ರೂಪಾಯಿ

ಅಹಮದಾಬಾದ್ - 13,975 ರೂಪಾಯಿ

ಪುಣೆ - 13,965 ರೂಪಾಯಿ

ಕೋಲ್ಕತ್ತಾ - 13,965 ರೂಪಾಯಿ

ಆಗಸ್ಟ್ 08ರ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ನಿನ್ನೆಗಿಂತ ಕೊಂಚ ಏರಿಕೆ ಕಂಡು ಖರೀದಿದಾರರಿಗೆ ಸ್ಪಲ್ಪ ಹೊರೆಯಾಗಿದೆ; ಆದರೆ ಬೆಳ್ಳಿ ದರದಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗದೆ ಸ್ಥಿರತೆ ಕಾಯ್ದುಕೊಂಡಿದೆ.

ಗಮನಿಸಿ: ಗ್ರಾಹಕರು ಚಿನ್ನದ ಆಭರಣಗಳನ್ನು ಖರೀದಿಸುವಾಗ ಬಿಐಎಸ್ ಹಾಲ್‌ಮಾರ್ಕ್ ಶುದ್ಧತೆಯನ್ನು ಕಡ್ಡಾಯವಾಗಿ ಪರಿಶೀಲಿಸುವುದು ಸೂಕ್ತ. ಮೇಲೆ ತಿಳಿಸಲಾದ ಬೆಲೆಗಳು ಜಿಎಸ್‌ಟಿ ಮತ್ತು ಆಭರಣಗಳ ಮೇಲಿನ ಮೇಕಿಂಗ್ ಚಾರ್ಜ್‌ಗಳನ್ನು ಹೊರತುಪಡಿಸಿದ ಮಾರುಕಟ್ಟೆ ದರಗಳಾಗಿದ್ದು, ಮಳಿಗೆಗಳಲ್ಲಿ ಅಂತಿಮ ಖರೀದಿಯ ದರ ಕೊಂಚ ಬದಲಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+