Gold Price: ಆಭರಣ ಪ್ರಿಯರಿಗೆ ಖುಷಿಯಾದ ಸುದ್ದಿ ನೀಡಿದ ಬಂಗಾರದ ಬೆಲೆ! ಈಗ ಎಷ್ಟಿದೆ ಚಿನ್ನ & ಬೆಳ್ಳಿ ರೇಟ್?

ಚಿನ್ನದ ಬೆಲೆಯಲ್ಲಿ ಮತ್ತೆ ಭರ್ಜರಿಯಾಗಿ ಕುಸಿತ ಕಂಡು ಬಂದಿದೆ. ಅದರಲ್ಲೂ ಬಂಗಾರವು ಕೈಗೆ ಸಿಗದಷ್ಟು ಮೇಲೆ ಹೋಗಿದ್ದು, ಚಿನ್ನ ಖರೀದಿ ಕಷ್ಟವಾಗುತ್ತೆ ಎಂಬ ಚಿಂತೆಯಲ್ಲಿ ಇದ್ದ ಜನರಿಗೆ ಇದೀಗ ಭರ್ಜರಿ ಸುದ್ದಿ ಸಿಕ್ಕಿದೆ. ಗೌರಿ & ಗಣೇಶ ಹಬ್ಬದ ದಿನವೇ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದ್ದು, ಜನರು ಕೂಡ ಫುಲ್ ಖುಷ್ ಆಗಿದ್ದಾರೆ. ಹಾಗಾದ್ರೆ ಇದೀಗ ಚಿನ್ನ & ಬೆಳ್ಳಿ ರೇಟ್ ಎಷ್ಟಿದೆ? ಬಂಗಾರದ ಬೆಲೆ ಕುಸಿತದ ನಂತರ ಎಷ್ಟಕ್ಕೆ ಸಿಗುತ್ತಿದೆ? ಎಲ್ಲಾ ಮಾಹಿತಿ ತಿಳಿಯೋಣ ಬನ್ನಿ.

ಚಿನ್ನದ ಬೆಲೆ ಮತ್ತೆ ಭಾರಿ ಕುಸಿತ ಕಂಡು, ಈ ಮೂಲಕ ಚಿನ್ನ ಕೊಳ್ಳಲು ಸುವರ್ಣಾವಕಾಶ ಒದಗಿ ಬಂದಿದೆ. ಚಿನ್ನದ ಬೆಲೆ ಕಳೆದ ಕೆಲ ದಿನಗಳಿಂದ ಪಾತಾಳ ಸೇರುತ್ತಿದೆ. ಹೀಗಿದ್ದಾಗಲೇ ಈಗ ಕೂಡ ಚಿನ್ನದ ಬೆಲೆ ದಿಢೀರ್ ಕುಸಿತ ಕಂಡಿದೆ. ಕಳೆದ 10 ವರ್ಷದಲ್ಲಿ ಚಿನ್ನ ಬೆಲೆ ಸಾಕಷ್ಟು ಬದಲಾವಣೆ ಕಂಡಿದೆ. ಮುಂದಿನ ದಿನದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಬರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಈ ವಿಶ್ವಾಸದ ನಂತರವೂ ಚಿನ್ನದ ಬೆಲೆ ಇದೀಗ ಕುಸಿತದ ಕಡೆಗೆ ಮುಖ ಮಾಡುತ್ತಿರುವುದು ಹೂಡಿಕೆ ಮಾಡುವವರಿಗೆ ಟೆನ್ಷನ್ ಕೊಡುತ್ತಿದೆ. ಆದರೂ ಆಭರಣವನ್ನ ಖರೀದಿ ಮಾಡಲು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಚಿನ್ನದ ಬೆಲೆ ಕುಸಿತ ಖುಷಿ ನೀಡಿದ್ದು, ಈಗ ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ? ತಿಳಿಯೋಣ ಬನ್ನಿ.

Gold And Silver Price On 08 September Of 2024

ಬಂಗಾರದ ಬೆಲೆ 66,800 ರೂಪಾಯಿ!

ಜಾಗತಿಕ ಮಟ್ಟದಲ್ಲಿ ಚಿನ್ನ & ಬೆಳ್ಳಿ ಬೆಲೆಯಲ್ಲಿ ದೊಡ್ಡ ಮಟ್ಟದ ಏರಿಳಿತ ಕಂಡುಬರುತ್ತಿದೆ. ಚಿನ್ನದ ಬೆಲೆಯಲ್ಲಿ ಮತ್ತೆ ದೊಡ್ಡ ಮಟ್ಟದಲ್ಲೇ ಕುಸಿತ ಆಗಿದೆ. ಈ ಮೂಲಕ ಗೌರಿ & ಗಣೇಶ ಹಬ್ಬದ ಖುಷಿಯಲ್ಲಿದ್ದ ಆಭರಣ ಪ್ರಿಯರಿಗೆ ಸಿಹಿ ಸುದ್ದಿ ಈಗ ಸಿಕ್ಕಂತೆ ಆಗಿದ್ದು, ಕರ್ನಾಟಕ & ಬೆಂಗಳೂರಿನಲ್ಲಿ 22 ಕ್ಯಾರಟ್‌ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 66,800 ರೂಪಾಯಿ ತಲುಪಿದೆ.

ಚಿನ್ನ ನಿನ್ನೆ ಒಂದೇ ದಿನ 400 ರೂಪಾಯಿ ಕುಸಿತ ಕಂಡಿದೆ. ಹಾಗೇ 22 ಕ್ಯಾರಟ್‌ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 4000 ರೂಪಾಯಿ ಕುಸಿತ ಕಂಡಿದ್ದು, 6,68,000 ಪ್ರತಿ 100 ಗ್ರಾಂಗೆ ಮಾರಾಟ ಆಗುತ್ತಿದೆ. ಮತ್ತೊಂದು ಕಡೆ 24 ಕ್ಯಾರಟ್‌ ಅಪರಂಜಿ ಚಿನ್ನದ ಬೆಲೆ 72,870 ರೂಪಾಯಿ ಆಗಿದೆ. ಈ ಮೂಲಕ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ.

ಬೆಳ್ಳಿ ಬೆಲೆ ಎಷ್ಟಿದೆ ತಿಳಿಯಿರಿ

ಚಿನ್ನದ ರೀತಿ ಬೆಳ್ಳಿಗೆ ಕೂಡ ಜಾಗತಿಕ ಮಟ್ಟದಲ್ಲಿ ಮೊದಲಿನಿಂದ ಕೂಡ ಭಾರಿ ಡಿಮ್ಯಾಂಡ್ ಇದೆ. ಒಂದು ಕಡೆ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದರೆ, ಮತ್ತೊಂದು ಕಡೆ ಬೆಳ್ಳಿಯ ಬೆಲೆ ಮಾತ್ರ 1000 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಪ್ರತಿ ಒಂದು ಕೆಜಿ ಬೆಳ್ಳಿ ಬೆಲೆ ಈಗ 84,000 ರೂಪಾಯಿ ಆಗಿದೆ. ಇದೇ ಕಾರಣಕ್ಕೆ, ಆಭರಣ ಪ್ರಿಯರಿಗೆ ಒಂದು ಕಡೆ ಖುಷಿ ಆಗಿದ್ದರೂ ಮತ್ತೊಂದು ಕಡೆ ಬೆಳ್ಳಿ ಬೆಲೆ ಏರಿಕೆ ತುಸು ಬೇಸರ ತರಿಸಿದೆ. ಹಾಗೇ ಇದೇ ರೀತಿ ಮುಂದಿನ ದಿನಗಳಲ್ಲಿ ಕೂಡ ಚಿನ್ನ & ಬೆಳ್ಳಿ ಬೆಲೆಯಲ್ಲಿ ಏರಿಳಿತ ಕಾಣುವ ನಿರೀಕ್ಷೆಯು ಇದೆ. ಚಿನ್ನ ಖರೀದಿ ಮಾಡುವವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+