ಚಿನ್ನದ ಬೆಲೆ ಮತ್ತಷ್ಟು ಕುಸಿತ: ಆಗಸ್ಟ್ 22ರ ದರ ಹೀಗಿದೆ
ನವದೆಹಲಿ, ಆಗಸ್ಟ್ 22: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿತದತ್ತ ಮುಖಮಾಡಿದೆ. ಶನಿವಾರ 22 ಕ್ಯಾರೆಟ್ ಚಿನ್ನ 10 ಗ್ರಾಂ 300 ರೂಪಾಯಿ ಇಳಿಕೆಗೊಂಡು 51,000 ರೂಪಾಯಿಗೆ ತಲುಪಿದರೆ, ಶುದ್ಧ ಚಿನ್ನ 10 ಗ್ರಾಂ 55,600 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 700 ರೂಪಾಯಿ ಕಡಿಮೆಯಾಗಿ, 67,100 ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಆಗಸ್ಟ್ 22: 49,500-54,000 (100 ರೂಪಾಯಿ ಇಳಿಕೆ)
ಆಗಸ್ಟ್ 21: 49,600-54,100
ಆಗಸ್ಟ್ 20: 49,500-54,000
ಆಗಸ್ಟ್ 19: 50,750-55,360

ದೆಹಲಿಯಲ್ಲಿ ಚಿನ್ನದ ಬೆಲೆ
ಆಗಸ್ಟ್ 22: 51,000-55,600 (300 ರೂಪಾಯಿ ಇಳಿಕೆ)
ಆಗಸ್ಟ್ 21: 51,300-55,950
ಆಗಸ್ಟ್ 20: 51,200-55,850
ಆಗಸ್ಟ್ 19: 51,850-56,560

ಚೆನ್ನೈನಲ್ಲಿ ಚಿನ್ನದ ಬೆಲೆ
ಆಗಸ್ಟ್ 22: 50,480-55,060 (360 ರೂಪಾಯಿ ಇಳಿಕೆ)
ಆಗಸ್ಟ್ 21: 50,840-55,460
ಆಗಸ್ಟ್ 20: 50,840-55,460
ಆಗಸ್ಟ್ 19: 51,560-56,240

ಮುಂಬೈ ಚಿನ್ನದ ಬೆಲೆ
ಆಗಸ್ಟ್ 22: 50,950-51,950 (30 ರೂಪಾಯಿ ಇಳಿಕೆ)
ಆಗಸ್ಟ್ 21: 50,980-51,980
ಆಗಸ್ಟ್ 20: 50,990-51,990
ಆಗಸ್ಟ್ 19: 51,980-52,980

ಜೈಪುರ ಚಿನ್ನದ ಬೆಲೆ
ಆಗಸ್ಟ್ 22: 51,000-55,600 (300 ರೂಪಾಯಿ ಇಳಿಕೆ)
ಆಗಸ್ಟ್ 21: 51,300-55,950
ಆಗಸ್ಟ್ 20: 51,200-55,850
ಆಗಸ್ಟ್ 19: 51,850-56,560

ಚಂಡೀಗಡ ಚಿನ್ನದ ಬೆಲೆ
ಆಗಸ್ಟ್ 22: 50,500-53,240 (ಬದಲಾವಣೆ ಇಲ್ಲ)
ಆಗಸ್ಟ್ 21: 50,500-53,240
ಆಗಸ್ಟ್ 20: 51,100-53,840
ಆಗಸ್ಟ್ 19: 52,250-55,000

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications