Gold Price on April 17: ದುಬಾರಿ ಚಿನ್ನ: ಅಂಗಡಿಯಲ್ಲಿ ಸಿಗುವ ಚಿನ್ನಕ್ಕಿಂತ ಮನೆಯಲ್ಲಿರುವ ಮಡದಿ ಬಂಗಾರವೇ ಲೇಸು

ಭಾರತದಲ್ಲಿ ಚಿನ್ನದ ಬೆಲೆ ಕೇಳಿ ಜನ ಸುಸ್ತಾಗಿ ಹೋಗಿದ್ದಾರೆ. ಒಂದೆರೆಡು ದಿನ ಬಂಗಾರದ ಬೆಲೆ ಕಡಿಮೆಯಾದರೆ ಮತ್ತೆರೆಡು ದಿನ ಚಿನ್ನದ ಬೆಲೆ ಗಗನಕ್ಕೇರಿರುತ್ತದೆ. ಇದರಿಂದಾಗಿ ಜನ ಚಿನ್ನ ಖರೀದಿಗೆ ಸೂಕ್ತ ಸಮಯ ಯಾವುದು ಅಂತ ತಲೆ ಕೆಡಿಸಿಕೊಂಡಿದ್ದಾರೆ. ಇನ್ನೇನು ಚಿನ್ನದ ಬೆಲೆ ಕಡಿಮೆ ಆಯ್ತು ನಾಳೆ ಚಿನ್ನ ಖರೀದಿ ಮಾಡಿಯೇ ಬಿಡೋಣ ಅಂದುಕೊಂಡರೆ ಇಂದು ಇದ್ದ ಬೆಲೆ ನಾಳೆಗೆ ಇರುವುದಿಲ್ಲ. ಹೀಗಾಗಿ ಚಿನ್ನದ ಅಂಗಡಿಗೆ ತೆರಳಿ ಬರಿಗೈಯಲ್ಲಿ ವಾಪಾಸ್‌ ಆಗದೆ, ಇದ್ದ ಬೆಲೆಗೆ ಚಿನ್ನ ಖರೀದಿ ಮಾಡಿಕೊಂಡು ಬರುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ನೀವೇನಾದ್ರು ಚಿನ್ನಾಭರಣ ಖರೀದಿ ಮಾಡಬೇಕು ಅಂದುಕೊಂಡಿದ್ದರೆ ಇಂದಿನ ಬೆಲೆ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಹಾಗಾದರೆ ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಇಂದು (ಏಪ್ರಿಲ್ 17) ಚಿನ್ನ ಮತ್ತು ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿಯೊಣ.

ಬೆಂಗಳೂರಿನಲ್ಲಿ ಇಂದು (ಏಪ್ರಿಲ್ 17) 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 89,200 ರೂಪಾಯಿ ಇದೆ. ಕಳೆದ ದಿನ ಈ ಬೆಲೆ 88,150 ರೂಪಾಯಿ ಇತ್ತು. ಇದರೊಂದಿಗೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 97,310 ರೂಪಾಯಿ ಇದ್ದರೆ, ಕಳೆದ ದಿನ 96,170 ರೂಪಾಯಿ ಇತ್ತು. ಅಲ್ಲದೆ ಇಂದು 18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 72,980 ರೂಪಾಯಿ ಇದ್ದರೆ, ಕಳೆದ ದಿನ 72,130 ರೂಪಾಯಿ ಇತ್ತು. ಇನ್ನೂ ಬೆಳ್ಳಿ ಬೆಲೆ ಬೆಂಗಳೂರಿನಲ್ಲಿಂದು (ಏಪ್ರಿಲ್ 17) ಕೆಜಿಗೆ 1,00,000 ರೂಪಾಯಿ ಆಗಿದೆ. ಹಾಗಾದರೆ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ.

gold and silver price april 17 gold and silver prices increase across India including bengaluru

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ (ಏಪ್ರಿಲ್ 17)

*ದೆಹಲಿ-ಮುಂಬೈ ನಲ್ಲಿ ಚಿನ್ನದ ದರ:

ದೆಹಲಿಯಲ್ಲಿಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 88,310 ರೂಪಾಯಿ ಇದೆ, 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 96,330 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನೂ ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನವು 10 ಗ್ರಾಂಗೆ 88,160 ರೂ.ಗೆ ಮತ್ತು 24 ಕ್ಯಾರೆಟ್ ಚಿನ್ನವು 96,180 ರೂ.ಗೆ ಮಾರಾಟವಾಗುತ್ತಿದೆ. ಅಲ್ಲದೆ ಬೆಳ್ಳಿ ಬೆಲೆಯೂ ಇಂದು ಏರಿಕೆಯಾಗಿದೆ. ಬೆಳ್ಳಿಯ ಬೆಲೆ ಕೆಜಿಗೆ 1,00,000 ರೂ. ಇತ್ತು. ಆದರೆ ಇಂದು (ಏಪ್ರಿಲ್ 17) ಬೆಳ್ಳಿ ಬೆಲೆ ಕೆಜಿಗೆ 300 ರೂಪಾಯಿ ಹೆಚ್ಚಳವಾಗಿದೆ.

* ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 88,160 ರೂಪಾಯಿ 24 ಕ್ಯಾರೆಟ್ ಚಿನ್ನದ ದರ 96,180 ರೂಪಾಯಿ ಇದೆ.

* ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 87,190 ರೂಪಾಯಿ 24 ಕ್ಯಾರೆಟ್ ಚಿನ್ನದ ದರ 96,180 ರೂಪಾಯಿ ಇದೆ.

* ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 88,160 ರೂಪಾಯಿ 24 ಕ್ಯಾರೆಟ್ ಚಿನ್ನದ ದರ 96,180 ರೂಪಾಯಿ ಇದೆ.

* ಜೈಪುರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 88,310 ರೂಪಾಯಿ 24 ಕ್ಯಾರೆಟ್ ಚಿನ್ನದ ದರ 96,330 ರೂಪಾಯಿ ಇದೆ.

* ನೋಯ್ಡಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 88,310 ರೂಪಾಯಿ 24 ಕ್ಯಾರೆಟ್ ಚಿನ್ನದ ದರ 96,330 ರೂಪಾಯಿ ಇದೆ.

*ಘಾಜಿಯಾಬಾದ್್ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 88,310 ರೂಪಾಯಿ 24 ಕ್ಯಾರೆಟ್ ಚಿನ್ನದ ದರ 96,330 ರೂಪಾಯಿ ಇದೆ.

* ಲಕ್ನೋನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 88,310 ರೂಪಾಯಿ 24 ಕ್ಯಾರೆಟ್ ಚಿನ್ನದ ದರ 96,330 ರೂಪಾಯಿ ಇದೆ.

* ಪಾಟ್ನಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 88,160 ರೂಪಾಯಿ 24 ಕ್ಯಾರೆಟ್ ಚಿನ್ನದ ದರ 96,180 ರೂಪಾಯಿ ಇದೆ.

gold and silver price april 17 gold and silver prices increase across India including bengaluru

ಬೆಲೆ ಏರಿಕೆಗೆ ಕಾರಣ

ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆ ಮತ್ತು ಸುಂಕ ವಿವಾದದಿಂದಾಗಿ ಚಿನ್ನದ ಬೆಲೆಗಳು ನಿರಂತರ ಏರಿಳಿತಗಳನ್ನು ಕಾಣುತ್ತಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮ ಭಾರತದಲ್ಲಿಯೂ ಗೋಚರಿಸುತ್ತಿದೆ. ಪ್ರಸ್ತುತ ಚಿನ್ನವು ಸೀಮಿತ ವ್ಯಾಪ್ತಿಯಲ್ಲಿ ವಹಿವಾಟು ನಡೆಸುತ್ತಿದೆ. ಮಾರುಕಟ್ಟೆ ಪರಿಸ್ಥಿತಿ ಸ್ಥಿರವಾಗಿದ್ದರೆ, ಮುಂದಿನ ಆರು ತಿಂಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 75,000 ರೂ.ಗೆ ಇಳಿಯಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅಮೆರಿಕ-ಚೀನಾ ಸುಂಕ ಯುದ್ಧ ಮತ್ತಷ್ಟು ತೀವ್ರಗೊಂಡರೆ, ಅದು 10 ಗ್ರಾಂಗೆ 1,38,000 ರೂ.ಗೆ ತಲುಪಬಹುದು ಎಂದಿದ್ದಾರೆ.

Take a Poll

ಚಿನ್ನದ ಹೂಡಿಕೆಯಿಂದ ಲಾಭ

ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಚಿನ್ನವು ಶತಮಾನಗಳಿಂದ ಹೂಡಿಕೆದಾರರಲ್ಲಿ ಜನಪ್ರಿಯವಾಗಿರುವ ಒಂದು ಹೂಡಿಕೆ ಆಯ್ಕೆಯಾಗಿದೆ. ಆದರೆ ಚಿನ್ನವನ್ನು ಖರೀದಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ, ಇದರಿಂದ ನಿಮ್ಮ ಹೂಡಿಕೆ ಸುರಕ್ಷಿತ ಮತ್ತು ಲಾಭದಾಯಕವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+