• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫ್ಯೂಚರ್ ಎಂಟರ್‌ಪ್ರೈಸಸ್ ಲಿಮಿಟೆಡ್ ಮಂಡಳಿ ಸಭೆ ಮತ್ತೊಮ್ಮೆ ಮುಂದೂಡಿಕೆ

|

ನವದೆಹಲಿ, ಆಗಸ್ಟ್‌ 29: ಫ್ಯೂಚರ್ ಎಂಟರ್‌ಪ್ರೈಸಸ್ನಿಂದ ಇಂದು ಮಹತ್ವದ ನಿರ್ಧಾರ ಹೊರಬೀಳಲಿದೆ ಎಂದು ಕಾದು ಕುಳಿತಿದ್ದವರಿಗೆ ನಿರಾಸೆಯಾಗಿದೆ. ಫ್ಯೂಚರ್ ಎಂಟರ್‌ಪ್ರೈಸಸ್ ತನ್ನ ಮಂಡಳಿಯ ಸಭೆಯನ್ನು ಮತ್ತೊಮ್ಮೆ ಮರು ನಿಗದಿ ಮಾಡಿದ್ದು ಸೆಪ್ಟೆಂಬರ್ 7 ಕ್ಕೆ ಮುಂದೂಡಿದೆ.

ಇದು ಮಂಡಳಿಯ ಸಭೆಯನ್ನು ಕಂಪನಿಯು ಮುಂದೂಡುತ್ತಿರುವ ಎರಡನೇ ಬಾರಿ. ಇದಕ್ಕೂ ಮೊದಲು ಆಗಸ್ಟ್ 22 ರಂದು ಸಭೆ ನಡೆಯಬೇಕಿದ್ದ ಸಭೆಯನ್ನು ಆಗಸ್ಟ್ 28 ಕ್ಕೆ ಮುಂದೂಡಲಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಬೇರೆ ದಿನವನ್ನು ನಿಗದಿಪಡಿಸಿದೆ.

ಇಂದು ರಿಲಯನ್ಸ್‌ ಬಿಗ್ ಡೀಲ್: ಫ್ಯೂಚರ್ ಗ್ರೂಪ್ ರಿಟೇಲ್‌ ಖರೀದಿಗೆ ರೆಡಿ

"2020 ರ ಮಾರ್ಚ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ವರ್ಷದ ಕಂಪನಿಯ ಲೆಕ್ಕಪರಿಶೋಧಿತ ಹಣಕಾಸು ಫಲಿತಾಂಶಗಳ ಪರಿಗಣನೆ ಮತ್ತು ಅನುಮೋದನೆಗಾಗಿ ಕಂಪನಿಯ ನಿರ್ದೇಶಕರ ಸಭೆ ಇಂದು ಅಂದರೆ ಆಗಸ್ಟ್ 28, 2020 ರಂದು ನಡೆಯಲಿದೆ ಎಂದು ನಾವು ನಿಮಗೆ ತಿಳಿಸುತ್ತೇವೆ (" ಹಣಕಾಸು ಫಲಿತಾಂಶಗಳು ") ಹಣಕಾಸು ಫಲಿತಾಂಶಗಳ ಲೆಕ್ಕಪರಿಶೋಧನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಕಾರಣ ಮುಂದೂಡಲಾಗಿದೆ. ಮುಂದೂಡಲ್ಪಟ್ಟ ಸಭೆಯನ್ನು ಈಗ ಸೆಪ್ಟೆಂಬರ್ 07, 2020 ರಂದು ಸೋಮವಾರ ನಡೆಸಲಾಗುವುದು" ಎಂದು ಕಂಪನಿ ತಿಳಿಸಿದೆ.

ಇಂದು ಫ್ಯೂಚರ್ ಗ್ರೂಪ್‌ ಸಭೆಯಲ್ಲಿ ರಿಲಯನ್ಸ್‌ಗೆ ಆಸ್ತಿಗಳನ್ನು ಮಾರಾಟ ಮಾಡುವ ಕುರಿತು ಅಂತಿಮ ತೀರ್ಮಾನಕ್ಕೆ ಬರಲಿದ್ದು, ಬಿಗ್ ಬಜಾರ್, ಫ್ಯಾಶನ್ ಅಟ್ ಬಿಗ್ ಬಜಾರ್, ಈಸಿ ಡೇ ಮತ್ತು ಬ್ರಾಂಡ್ ಫ್ಯಾಕ್ಟರಿ ಸೇರಿದಂತೆ ಭಾರತದ ಕೆಲವು ಪ್ರಮುಖ ಚಿಲ್ಲರೆ ಸ್ವರೂಪಗಳನ್ನು ರಿಲಯನ್ಸ್ ಸ್ವಾಧೀನಪಡಿಸಿಕೊಳ್ಳಲಿದೆ ಎನ್ನಲಾಗಿತ್ತು. ಆದರೆ ಮಂಡಳಿ ಸಭೆಯನ್ನು ಮರು ನಿಗದಿ ಮಾಡಲಾಗಿದೆ.

English summary
Future Enterprises has once again rescheduled its board meeting, to be held on August 28, to September 7. This is the second time the company has deferred the board meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X