Get Updates
Get notified of breaking news, exclusive insights, and must-see stories!

ಅನಿಲ್ ಅಂಬಾನಿ ಒಡೆತನದ ಕಂಪನಿ ವಿರುದ್ಧ ಗಂಭೀರ ಆರೋಪ ಮಾಡಿದ ಕೊಬ್ರಾಪೋಸ್ಟ್

ನವದೆಹಲಿ: ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್ 2006ರಿಂದ ತಮ್ಮ ಒಡೆತನದಲ್ಲಿರುವ ಸಂಸ್ಥೆಗಳ ಮೂಲಕ ನಿಧಿ ತಿರುಚಿ 41,921 ಕೋಟಿ ರೂಪಾಯಿ ಮೌಲ್ಯದ ಭಾರಿ ದೊಡ್ಡ ವಂಚನೆ ಮಾಡಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ತನಿಖಾತ್ಮಕ ತಾಣ ಎಂದೇ ಗುರುತಿಸಿಕೊಂಡಿರುವ ಕೊಬ್ರಾಪೋಸ್ಟ್ ವರದಿ ಮಾಡಿದೆ. ಅಲ್ಲದೆ ಈ ಆರೋಪದ ಬಗ್ಗೆ ಕೂಡ ಪ್ರತಿಕ್ರಿಯಿಸಿರುವ ಸಂಸ್ಥೆ, ಷೇರು ಬೆಲೆ ಕುಸಿಯುವಂತೆ ಮಾಡುವ ದುರುದ್ದೇಶ ಹೊಂದಿದ ಪ್ರಚಾರ ಎಂಬುದನ್ನೂ ತಿರಸ್ಕರಿಸಿದೆ.

ಕೊಬ್ರಾಪೋಸ್ಟ್ ಆರೋಪ ಮಾಡಿದಂತೆ, ಬ್ಯಾಂಕ್ ಸಾಲ, ಐಪಿಒ ಮೊತ್ತ ಮತ್ತು ಬಾಂಡ್‌ ಮೂಲಕ ಸಂಗ್ರಹಿಸಿದ 28,874 ಕೋಟಿ ರೂಪಾಯಿ ಮೊತ್ತವನ್ನ ರಿಲಯನ್ಸ್ ಕಮ್ಯುನಿಕೇಷನ್ಸ್ ಸೇರಿ ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಹೋಮ್ ಫೈನಾನ್ಸ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ & ರಿಲಯನ್ಸ್ ಕಾರ್ಪೊರೇಟ್ ಸಲಹಾ ಸೇವೆಗಳಂತಹ ಪಟ್ಟಿ ಮಾಡಿದ ಕಂಪನಿಗಳಿಂದ ಪ್ರಮೋಟರ್ ಸಂಬಂಧಿತ ಕಂಪನಿಗಳಿಗೆ ವರ್ಗಾಯಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದೆ.

Fund Diversion Allegations Against Anil Ambani s Group by Cobrapost

ಈ ಬಗ್ಗೆ ತನಿಖೆ ಆಧಾರದಲ್ಲಿ, 1.535 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ ಸುಮಾರು 13,047 ಕೋಟಿ ರೂಪಾಯಿ ಮೊತ್ತವನ್ನ ಸಿಂಗಪುರ್, ಮಾರಿಷಸ್, ಸೈಪ್ರಸ್, ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಮತ್ತು ಅಮೆರಿಕ ಸೇರಿದಂತೆ ಯುಕೆ ರೀತಿ ವಿದೇಶಿ ಸಂಸ್ಥೆಗಳ ಮೂಲಕ ಭಾರತದ ಒಳಗೆ "ವಂಚನಾ ರೀತಿ" ತಂದುಕೊಳ್ಳಲಾಗಿದೆ ಎಂದು ಆರೋಪಿಸಿದೆ.

ಕೊಬ್ರಾಪೋಸ್ಟ್ ಆರೋಪ ಮಾಡಿರುವಂತೆ, ಸಿಂಗಾಪುರ ಮೂಲದ ಕಂಪನಿ ಎಮರ್ಜಿಂಗ್ ಮಾರ್ಕೆಟ್ ಇನ್ವೆಸ್ಟ್‌ಮೆಂಟ್ಸ್ & ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್(EMITS) ಎಕ್ಸ್‌ಜೆನ್ ಕ್ಯಾಪಿಟಲ್ ಎಂಬ "ರಹಸ್ಯ ದಾನಿಯಿಂದ" ಸುಮಾರು 750 ಮಿಲಿಯನ್ ಅಮೆರಿಕನ್ ಡಾಲರ್ ಹಣ ಪಡೆದಿದ್ದು, ನಂತರ ಆ ಮೊತ್ತ ರಿಲಯನ್ಸ್ ಇನೋವೆಂಚರ್ಸ್‌ಗೆ (ರಿಲಯನ್ಸ್ ಗುಂಪಿನ ಹೋಲ್ಡಿಂಗ್ ಕಂಪನಿ) ವರ್ಗಾಯಿಸಿ ಕಂಪನಿ ಮುಚ್ಚಿದೆ ಎಂದು ಗಂಭೀರ ಆರೋಪ ಮಾಡಿದೆ. ಈ ವ್ಯವಹಾರವು "ಹಣದ ಅಳವಡಿಕೆ" ಯಾಗಿ ಪರಿಗಣಿಸಬಹುದೆಂದು ಆರೋಪಿಸಲಾಗಿದೆ.

ಹಾಗೇ ಈ ವರದಿಯು ಮತ್ತೊಂದು ಗಂಭೀರ ಆರೋಪ ಕೂಡ ಮಾಡಿದೆ. ಕಂಪನಿಗಳ ಕಾಯಿದೆ, ಫೆಮಾ, ಪಿಎಂಎಲ್‌ಎ, ಸೆಬಿ ಕಾಯಿದೆ, ಆದಾಯ ತೆರಿಗೆ ಕಾಯ್ದೆ ಉಲ್ಲಂಘನೆ ಆಗಿದೆ ಎಂಬ ಗಂಭೀರ ಆರೋಪ ಮಾಡಿದೆ. ಮತ್ತು ತನಿಖೆ ಸಂಸ್ಥೆಗಳ ಅಧಿಕೃತ ದಾಖಲಾತಿ ಮತ್ತು ಆದೇಶಗಳ ಆಧಾರದ ಮೇಲೆ ನಡೆದಿದೆ ಎಂದು ತಿಳಿಸಿದೆ.

ಹಾಗೇ ಈ ವರದಿ 2008ರಲ್ಲಿ ಅನಿಲ್ ಅಂಬಾನಿ ಅವರು ಪಟ್ಟಿ ಮಾಡಿದ ಕಂಪನಿ ನಿಧಿಗಳಿಂದ 20 ಮಿಲಿಯನ್ ಬೆಲೆ ಯಾಚ್ ಖರೀದಿಸುವ ಮೂಲಕ ಸಂಸ್ಥೆಯ ನಿಧಿಯನ್ನ ವೈಯಕ್ತಿಕ ಸೌಕರ್ಯಕ್ಕಾಗಿ ದುರುಪಯೋಗ ಮಾಡಿದ್ದಾರೆ ಎಂದು ಆರೋಪ ಮಾಡಿದೆ.

ತನಿಖೆ ವರದಿ ಪ್ರಕಾರ ಎಡಿಎ ಗ್ರೂಪ್ ಕಂಪನಿಗಳು ನಿಧಿಯನ್ನ ತಿರುಗಿಸಲು ಹಲವು ಪಾಸ್‌ತ್ರು ಸಂಸ್ಥೆ & ಎಸ್‌ಪಿವಿ ಬಳಸಿದ್ದವು ಎಂದು ಆರೋಪಿಸಲಾಗಿದೆ. ನಂತರ ಆ ನಿಧಿ ಬರೆಯಲ್ಪಟ್ಟವು, ಇದರಿಂದ 6 ಪ್ರಮುಖ ಪಟ್ಟಿ ಮಾಡಿದ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವು ಎಂದು ಕೂಡ ಆರೋಪ ಮಾಡಲಾಗಿದೆ.

ಕೊಬ್ರಾಪೋಸ್ಟ್ ಆರೋಪಿಸದಂತೆ, ಒಳನಾಡು & ವಿದೇಶಿ ತಿರುಗಾಟ ಸೇರಿ ಒಟ್ಟಾರೆ ನಿಧಿಗಳ ತಿರುಚು 41,921 ಕೋಟಿ ರೂಪಾಯಿಗೂ ಮೀರಿ ಹೋಗಿದೆ. ಇದು ಬ್ರಿಟಿಷ್ ವರ್ಜಿನ್ ದ್ವೀಪಗಳು, ಸೈಪ್ರಸ್, ಮಾರಿಷಸ್, ಸಿಂಗಾಪುರ, ಅಮೆರಿಕ & ಬ್ರಿಟನ್‌ ರೀತಿ ಪ್ರದೇಶಗಳಲ್ಲಿನ ಅನೇಕ ಪಾಸ್‌ತ್ರೂ ಸಂಸ್ಥೆಗಳು, ಉಪಸಂಸ್ಥೆಗಳು, ಶೆಲ್ ಕಂಪನಿ & ಆಫ್‌ಶೋರ್ ಘಟಕಗಳ ಮೂಲಕ ನಡೆದಿದೆ ಎಂದು ಆರೋಪ ಮಾಡಿದೆ.

ಸಂಪಾದಕ ಅನಿರುದ್ಧ ಬಹಲ್ ತಿಳಿಸಿದಂತೆ ಈ ತನಿಖೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಸೆಬಿ, ಎನ್‌ಸಿಎಲ್‌ಟಿ ಮತ್ತು ಆರ್‌ಬಿಐ ಸೇರಿದಂತೆ ಸಂಸ್ಥೆಗಳ ಅಧಿಕೃತ ದಾಖಲಾತಿ ಹಾಗೂ ಕೋರ್ಟ್ ಆದೇಶಗಳ ಆಧಾರದ ಮೇಲೆ ನಡೆದಿದೆ ಎಂದು ಹೇಳಿದ್ದಾರೆ. ಮಾರುಕಟ್ಟೆ ಮೌಲ್ಯ & ಕೆಟ್ಟ ಸಾಲಗಳ ಪರಿಣಾಂ 3.38 ಲಕ್ಷ ಕೋಟಿ ರೂಪಾಯಿ ಸಾರ್ವಜನಿಕ ಸಂಪತ್ತಿನ ಪೂರ್ಣ ನಷ್ಟವಾಯಿತು ಎಂದು ಆರೋಪವನ್ನ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿಲಯನ್ಸ್ ಗ್ರೂಪ್ ವರದಿಯಲ್ಲಿನ ಆರೋಪಗಳನ್ನು ತಿರಸ್ಕರಿಸಿದೆ. ಅದು "ಹಳೆಯ, ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಮೇಲಿನ ಆರೋಪಗಳು ಎಂದಿದೆ ಸಂಸ್ಥೆ. ಈಗಾಗಲೇ ಸಿಬಿಐ, ಇಡಿ, ಸೆಬಿ ಮತ್ತು ಇತರೆ ಸಂಸ್ಥೆಗಳು ಪರಿಶೀಲಿಸಿದ್ದವು" ಎಂದು ಇದೀಗ ಪ್ರತಿಕ್ರಿಯೆ ನೀಡಿದೆ. ಇದು "ನ್ಯಾಯಸಮ್ಮತ ವಿಚಾರಣೆಯ ಪ್ರಭಾವಿಸಲು ಸಂಯೋಜಿತ ಪ್ರಯತ್ನ" ಎಂದು ಆರೋಪಿಸಿದೆ.

ಈ ವರದಿಯನ್ನು "ತನ್ನ ಖ್ಯಾತಿ ಹಾಳುಮಾಡುವ & ಹೂಡಿಕೆದಾರರನ್ನ ತಪ್ಪಾಗಿ ಮಾರ್ಗದರ್ಶಿಸುವ ದುರುದ್ದೇಶಿತ ಪ್ರಚಾರ" ಎಂದು ಖಂಡಿಸಿದೆ. ಕೊಬ್ರಾಪೋಸ್ಟ್ ಅನ್ನ "2019ರಿಂದ ನಿಷ್ಕ್ರಿಯವಾಗಿದ್ದ, ಶೂನ್ಯ ಪತ್ರಿಕೋದ್ಯಮ ನಂಬಿಕೆಯುಳ್ಳ ವೇದಿಕೆ, ನಿಗದಿತ ಉದ್ದೇಶದ ವೇದಿಕೆ" ಎಂದು ಆರೋಪ ಮಾಡಿದೆ.

ಹಾಗೇ ಮತ್ತೊಂದು ಆರೋಪದಲ್ಲಿ "ಷೇರು ಬೆಲೆ ಕುಸಿತಗೊಳಿಸಿ, ಮಾರುಕಟ್ಟೆಯಲ್ಲಿ ಆತಂಕವನ್ನ ಸೃಷ್ಟಿಸಿ ರಿಲಯನ್ಸ್ ಗ್ರೂಪ್ ಆಸ್ತಿ ಸ್ವಾಧೀನಪಡಿಸಿಕೊಳ್ಳುವ ಉದ್ದೇಶದ, ನಿಯೋಜಿತ ದುಷ್ಪ್ರಚಾರ, ತಪ್ಪು ಮಾಹಿತಿ ಹಾಗೂ ಪಾತ್ರಹತ್ಯಾ ಅಭಿಯಾನ" ಎಂದು ಆರೋಪ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+