ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲೇ ಮೊದಲ ಬಾರಿಗೆ ಮಹಿಳೆಯರಿಗಾಗಿ ಉದ್ಯಮ ಪಾರ್ಕ್

|
Google Oneindia Kannada News

ಬೆಂಗಳೂರು, ನವೆಂಬರ್ 19: ದೇಶದಲ್ಲೇ ಮೊದಲ ಬಾರಿಗೆ ಮಹಿಳೆಯರಿಗಾಗಿ ಉದ್ಯಮ ಪಾರ್ಕ್ ಸ್ಥಾಪಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಮಹಿಳೆಯರನ್ನು ಉದ್ಯಮದತ್ತ ಇನ್ನಷ್ಟು ‌ಆಕರ್ಷಿಸಲು‌ ಮೈಸೂರು, ಧಾರವಾಡ, ಹಾರೋಹಳ್ಳಿ ಮತ್ತು ಕಲಬುರಗಿ ಯಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಮಹಿಳಾ ಉದ್ಯಮ ಪಾರ್ಕ್‍ಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ‌ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಘೋಷಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ಪ್ರಯುಕ್ತ ಉಬುಂಟು ಸಂಸ್ಥೆ ಹಮ್ಮಿಕೊಂಡಿದ್ದ 'ಟುಗೆದರ್ ವಿ ಗ್ರೋ ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉಬಂಟು, (UNUNTU-consortium of women entrepreneur's associations) ಇದೊಂದು ಮಹಿಳಾ ವಾಣಿಜ್ಯೋದಮ ಒಕ್ಕೂಟಗಳ ಸಂಘಟನೆಯಾಗಿದೆ. ಇದರಡಿ ಸುಮಾರು 30 ಮಹಿಳಾ ಉದ್ಯಮಿಗಳ ಸಂಘಟನೆಗಳು ಹಾಗೂ 1500 ಸದಸ್ಯರ ಒಂದೇ ವೇದಿಕೆಯಡಿ ಕೆಲಸ ಮಾಡುತ್ತಾರೆ.

'ಅಪ್ಪು' ಕಂಡಿದ್ದ ಕನಸು ನನಸು ಮಾಡುವ ಸಣ್ಣ ಪ್ರಯತ್ನ: ಸಚಿವ ಮುರುಗೇಶ್ ನಿರಾಣಿ!'ಅಪ್ಪು' ಕಂಡಿದ್ದ ಕನಸು ನನಸು ಮಾಡುವ ಸಣ್ಣ ಪ್ರಯತ್ನ: ಸಚಿವ ಮುರುಗೇಶ್ ನಿರಾಣಿ!

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ನೇತೃತ್ವದ ಉಬುಂಟು ಮಹಿಳೆಯರಲ್ಲಿ ಉದ್ಯಮ ಶೀಲತೆಯ ಮನೋಭಾವವನ್ನು ಪ್ರೋತ್ಸಾಹಿಸಿ ಅವರು ಯಶಸ್ಸನ್ನು ಸಾಧಿಸಲು ನೆರವಾಗಿದೆ. ಇಂಥ ಸಂಘಟನೆಯ ಸಾರಥ್ಯ ವಹಿಸಿರುವ ಅವರ ಪರಿಶ್ರಮಕ್ಕೆ ಮೆಚ್ಚುಗೆ ‌ಸೂಚಿಸಿದರು.

‌ಮಹಿಳಾ ಉದ್ಯಮಿಗಳಿಗಾಗಿಯೇ ನಿರ್ದಿಷ್ಟ ಕೈಗಾರಿಕಾ ಪಾರ್ಕ್

‌ಮಹಿಳಾ ಉದ್ಯಮಿಗಳಿಗಾಗಿಯೇ ನಿರ್ದಿಷ್ಟ ಕೈಗಾರಿಕಾ ಪಾರ್ಕ್

ದೇಶದಲ್ಲೇ ಮೊದಲ ಬಾರಿಗೆ ‌ಮಹಿಳಾ ಉದ್ಯಮಿಗಳಿಗಾಗಿಯೇ ನಿರ್ದಿಷ್ಟ ಕೈಗಾರಿಕಾ ಪಾರ್ಕ್ ಸ್ಥಾಪಿಸುತ್ತಿರುವ ಮೊದಲ ರಾಜ್ಯ ನಮ್ಮ ಕರ್ನಾಟಕ. ಇದರ ಸದುಪಯೋಗವನ್ನು ಪಡೆದುಕೊಂಡರೆ ಇದರ ಉದ್ದೇಶ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಮಹಿಳೆಯರು ಸ್ವಯಂ ಉದ್ಯಮಿಗಳಾಗಿ ಇನ್ನೊಬ್ಬರಿಗೆ, ಉದ್ಯೋಗ ನೀಡುವ ಹಂತಕ್ಕೆ ಬೆಳೆಯುವ ಮೂಲಕ ರಾಜ್ಯದ ಕೈಗಾರಿಕಾ ಪ್ರಗತಿಯಲ್ಲಿ ಕೈ ಜೋಡಿಸಬೇಕು ಎಂದು ಇದೇ ವೇಳೆ ಮಹಿಳಾ ಉದ್ಯಮಿಗಳಿಗೆ ಕರೆ ನೀಡಿದರು.

ಕೈಗಾರಿಕಾ ಪ್ರಗತಿಯಲ್ಲಿ ಕೈ ಜೋಡಿಸಿ

ಕೈಗಾರಿಕಾ ಪ್ರಗತಿಯಲ್ಲಿ ಕೈ ಜೋಡಿಸಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ನೀವು ಉದ್ಯೋಗ ಪಡೆದರಷ್ಟೇ ಸಾಲದು. ಉದ್ಯಮಿಯಾಗುವುದರ ಜೊತೆಗೆ ನೂರಾರು ಜನರಿಗೆ ಕೆಲಸ ಕೊಡುವ ಮಟ್ಟಕ್ಕೆ ಬೆಳೆದಾಗ ಮಹಿಳಾ ಸಬಲೀಕರಣಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಇನ್ಫೋಸಿಸ್‌ನ ಸುಧಾ ನಾರಾಯಣ ಮೂರ್ತಿ, ಕಿರಣ್ ಮಜುಂದಾರ್ ಷಾ, ಸೇರಿದಂತೆ ಅನೇಕ ಯಶಸ್ವಿ ಮಹಿಳಾ ಉದ್ಯಮಿಗಳು ನಮಗೆಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ. ಅವರ ಜೀವನದ ಯಶೋಗಾಥೆ ಇಂದಿನ ಯುವ ಮಹಿಳಾ ಉದ್ಯಮಿಗಳಿಗೆ ಪ್ರೇರಣೆಯಾಗಬೇಕು ಎಂದು ಆಶಿಸಿದರು.

ಮಹಿಳೆಯರನ್ನು ಉದ್ಯಮದತ್ತ ಆಕರ್ಷಿಸಲು ನಮ್ಮ ಸರ್ಕಾರ ರಾಜ್ಯದಲ್ಲಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಉದ್ಯಮ ಶೀಲತೆಯ ಅವಕಾಶಗಳನ್ನು ‌ ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಉದ್ಯೋಗದಾತರಾಗಿ ಎಂದು ಸಲಹೆ ಮಾಡಿದರು.

ಸರ್ಕಾರ ನಿಮ್ಮ ಜತೆ ಇರುತ್ತದೆ ಎಂದು ಅಭಯ

ಸರ್ಕಾರ ನಿಮ್ಮ ಜತೆ ಇರುತ್ತದೆ ಎಂದು ಅಭಯ

ಸ್ವಂತ ಉದ್ಯಮ ಸ್ಥಾಪಿಸಿ, ಉದ್ಯೋಗದಾತರಾಗುವುದರ ಜೊತಗೆ ಇತರರೂ ನಿಮ್ಮಂತೆ ಉದ್ಯಮಿಗಳಾಗಬೇಕು ಎಂಬುದು ನನ್ನ ಅಭಿಲಾಷೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮಇಲಾಖೆ ' ಉದ್ಯಮಿಯಾಗು, ಉದ್ಯೋಗ ನೀಡು' ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲೂ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮಹಿಳಾ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವಿರುವ "ಉಬುಂಟು" ದಂತಹ ಸಂಸ್ಥೆಗಳು ಈಗ ಬೆಂಬಲ ನೀಡುವ ವ್ಯವಸ್ಥೆಯಾಗಿ ಮಾರ್ಪಟ್ಟಿವೆ. ನಿಮ್ಮಇಂಥ ಪ್ರಯತ್ನಗಳಲ್ಲಿ ಸರ್ಕಾರ ನಿಮ್ಮ ಜತೆ ಇರುತ್ತದೆ ಎಂದು ಅಭಯ ನೀಡಿದರು.

Recommended Video

RSS ಸಂಘಟನೆ ದೇಶಸೇವೆಗಾಗಿಯೇ ಹುಟ್ಟಿದ್ದಾ?RSS ಉದ್ದೇಶ ಏನು? | Oneindia Kannada
ಹೆಚ್ಚುವರಿ ಪ್ರೋತ್ಸಾಹವನ್ನು ಪ್ರಸ್ತಾಪಿಸಲಾಗಿದೆ

ಹೆಚ್ಚುವರಿ ಪ್ರೋತ್ಸಾಹವನ್ನು ಪ್ರಸ್ತಾಪಿಸಲಾಗಿದೆ

ದೇಶದಲ್ಲಿಂದು ಮಹಿಳೆಯರೇ ನಡೆಸುವಂಥ ಉದ್ಯಮಗಳ ಸಂಖ್ಯೆ13.5 ರಿಂದ 15.7 ದಶಲಕ್ಷವಿದ್ದು, ಒಟ್ಟು ಉದ್ಯಮಗಳಲ್ಲಿ ಇದರ ಪಾಲು ಶೇ.20ರಷ್ಟಿದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಉದ್ಯಮಶೀಲತೆಯ ಗುಣಮಟ್ಟ ಮತ್ತು ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಮಹಿಳಾ ಸ್ವಾಮ್ಯದ ಉದ್ಯಮಗಳನ್ನು 30 ದಶಲಕ್ಷಕ್ಕೆ ಹೆಚ್ಚಿಸಬಹುದು. ಮಹಿಳೆಯರು ಮನಸ್ಸು ಮಾಡಿದರೆ ಈ ಗುರಿ ತಲುಪುವುದು ಕಷ್ಟವೇನಲ್ಲ ಎಂದು ಕಿವಿಮಾತು ಹೇಳಿದರು.

1948ರ ಫ್ಯಾಕ್ಟರಿ ತಿದ್ದುಪಡಿ ಕಾಯಿದೆಯಡಿ ಕಾರ್ಖಾನೆಗಳಲ್ಲಿ ರಾತ್ರಿ 7 ರಿಂದ ಬೆಳಿಗ್ಗೆ 6ರವರೆಗೆ ಕೆಲಸ ಮಾಡಲು ಸರ್ಕಾರ ಮಹಿಳೆಯರಿಗೆ ಅನುಮತಿ ನೀಡಿದೆ. ನೂತನ ಕೈಗಾರಿಕಾ ನೀತಿಯಡಿ ಎಸ್ಸಿ/ಎಸ್ಟಿ, ಮಹಿಳೆಯರು ಸೇರಿದಂತೆ ವಿಶೇಷ ವರ್ಗದ ಉದ್ಯಮಿಗಳಿಗೆ ಹೆಚ್ಚುವರಿ ಪ್ರೋತ್ಸಾಹ ವನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.

English summary
The Karnataka government on Thursday announced that it would have four industrial parks dedicated to women in Mysuru, Dharwad, Harohalli and Kalaburagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X