ಯುಪಿಎ ಅವಧಿಯಲ್ಲೇ ತರಕಾರಿ ಬೆಲೆ ಗಗನಚುಂಬಿ

ನವದೆಹಲಿ, ಸೆ.20: ಯುಪಿಎ ಸರ್ಕಾರದ ಅವಧಿಯಲ್ಲಿ ಹಿಂದಿನ ಯಾವುದೇ ಸರ್ಕಾರದ ಅವಧಿಯಲ್ಲಿ ಹೆಚ್ಚಾಗದಷ್ಟು ತರಕಾರಿ ಮತ್ತು ಆಹಾರ ಬೆಲೆ ಗಗನಕ್ಕೇರಿದೆ ಎಂದು ಅಂಕಿ ಅಂಶಗಳು ಬಹಿರಂಗಗೊಳಿಸಿದೆ.

ಕೇಂದ್ರದಲ್ಲಿ 2004 ರಿಂದ ಇಲ್ಲಿವರೆಗೆ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಉತ್ಪನ್ನಗಳ ಬೆಲೆ ಶೇ.157 ರಷ್ಟು ಏರಿಕೆಯಾದರೆ ತರಕಾರಿ ಬೆಲೆ ಶೇ.350ರಷ್ಟು ಹೆಚ್ಚಳವಾಗಿದೆ. ವಿಶ್ವದಲ್ಲೇ ಅತಿಹೆಚ್ಚು ತರಕಾರಿ ಬೆಳೆಯುವ ಎರಡನೇ ರಾಷ್ಟ್ರ ಭಾರತ ಎಂಬುದು ದಾಖಲೆಗೆ ಮಾತ್ರ ಸೀಮಿತವಾಗಿದೆ.

ಅದರಲ್ಲೂ ಗೃಹಿಣಿಯರು ಕಣ್ಣೀರು ಸುರಿಸುವಂತೆ ಮಾಡಿರುವ ಈರುಳ್ಳಿ ಬೆಲೆ 2004 ರಿಂದ 2013ರ ವರೆಗೆ ಶೇ.521ರಷ್ಟು ದುಬಾರಿಯಾಗಿದೆ. ಈ ಹಿಂದೆ ಆಡಳಿತ ನಡೆಸಿದ ಎನ್ ಡಿಎ ಅವಧಿಯಲ್ಲಿ ತರಕಾರಿ ಬೆಲೆ 70-80 ರು ಸರಾಸರಿ ಆಸುಪಾಸಿನಲ್ಲೇ ಏರಿಕೆಯಾಗಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಕೈಗೆ ಅಧಿಕಾರ ಚುಕ್ಕಾಣಿ ಸಿಗುತ್ತಿದ್ದಂತೆ ತರಕಾರಿ ಬೆಲೆ ಗಗನಕ್ಕೇರಿತು. ಇದರಿಂದ ಜನಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿದೆ.

Food prices rose 157% between 2004 and 2013

ಪ್ರಮುಖ ಆಹಾರ ಉತ್ಪನ್ನಗಳಾದ ಅಕ್ಕಿ ಶೇ.137, ಗೋಧಿ ಶೇ.117, ಬೇಳೆಕಾಳುಗಳು ಶೇ.123, ತರಕಾರಿಗಳು ಶೇ.350, ಆಲೂಗಡ್ಡೆ ಶೇ.185, ಈರುಳ್ಳಿ ಶೇ.521, ಟೊಮ್ಯಾಟೋ ಶೇ.139, ಬದನೆಕಾಯಿ ಶೇ.311, ಬೆಂಡೆಕಾಯಿ ಶೇ.160, ಹೂ ಕೋಸು ಶೇ.714 ರಷ್ಟು ಏರಿಕೆಯಾಗಿದೆ.

ಇದೇ ರೀತಿ ಹಾಲು ಶೇ.119, ಮೊಟ್ಟೆ ಶೇ.124, ಬೇಕರಿ ಪದಾರ್ಥಗಳು ಶೇ.119, ಸಕ್ಕರೆ ಶೇ.106, ಉಪ್ಪು ಶೇ.75ರಷ್ಟು ಹೆಚ್ಚಳವಾಗಿದೆ. ಬೇಯಿಸಿದ ಆಹಾರ ಪದಾರ್ಥಗಳ ಬೆಲೆ ಶೇ 85 ರಷ್ಟು ಕಳೆದ ದಶಕದಲ್ಲಿ ಕಾಣಲಾಗಿದೆ.

ದರ ಹೆಚ್ಚಳಕ್ಕೆ 2004-2009 ರ ಅವಧಿಯಲ್ಲಿ ವಿವಿಧ ರಾಜ್ಯಗಳಲ್ಲಿ ಉಂಟಾದ ಬರಗಾಲ ಒಂದೆಡೆಯಾದರೆ, ಕೆಲವು ಕಡೆ ಅತಿಯಾದ ಅನಾವೃಷ್ಟಿಯಿಂದ ಬೆಳೆ ಆಹುತಿಯಾದ ಪರಿಣಾಮ ಬೆಲೆ ಹೆಚ್ಚಳವಾಗಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷಗಳಿಗೆ ಆಹಾರ ಪದಾರ್ಥ ಬೆಲೆ ಏರಿಕೆ ಪ್ರಮುಖ ವಿಷಯವಾಗಲಿದ್ದು, ಕೋಪಗೊಂಡ ಮತದಾರರನ್ನು ಎದುರು ಕಾಣಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+