ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ಮೂಲದ ಅರ್ಬಾನಿಕ್‌ನೊಂದಿಗೆ ಫ್ಲಿಪ್‌ಕಾರ್ಟ್ ಪಾಲುದಾರಿಕೆ

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 8: ಹಬ್ಬದ ಸೀಸನ್ ಮತ್ತು ಬಹುನಿರೀಕ್ಷಿತ ಬಿಗ್ ಬಿಲಿಯನ್ ಡೇಸ್ ಸಿದ್ಧತೆಗಾಗಿ, ಫ್ಲಿಪ್‌ಕಾರ್ಟ್‌ ದೇಶಾದ್ಯಂತ ಯುವ ಗ್ರಾಹಕರಿಗೆ ವ್ಯಾಪಕವಾದ ಶ್ರೇಣಿಯ ಜಾಗತಿಕ ಫ್ಯಾಷನ್ ಅನ್ನು ತಂದುಕೊಡುವ ನಿಟ್ಟಿನಲ್ಲಿ ಲಂಡನ್ ಮೂಲದ ಝೆನ್ Z ಫ್ಯಾಷನ್ ಬ್ರ್ಯಾಂಡ್ ಅರ್ಬಾನಿಕ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ. ಈ ಬ್ರ್ಯಾಂಡ್‌ನಡಿ ಸುಮಾರು 1000 ಕ್ಕೂ ಅಧಿಕ ವಿಶಿಷ್ಟ ಶೈಲಿಯ ಸೊಗಸಾದ ಸಂಗ್ರಹವನ್ನು ಪೂರೈಸಲಾಗುತ್ತದೆ. 2 ಮತ್ತು 3 ನೇ ಶ್ರೇಣಿಯ ನಗರಗಳಲ್ಲಿ ಬೆಳೆಯುತ್ತಿರುವ ನೋಂದಾಯಿತ ಗ್ರಾಹಕರ ಸಂಖ್ಯೆಯು 350 ಮಿಲಿಯನ್ ತಲುಪಿದೆ.

ಈ ಗ್ರಾಹಕರಿಗೆ ಝೆನ್ Zಬ್ರ್ಯಾಂಡ್ ಅರ್ಬಾನಿಕ್ ಸಂಗ್ರಹವನ್ನು ನೀಡಲಿದೆ. ಅರ್ಬಾನಿಕ್ ಜೊತೆಗಿನ ಈ ಪಾಲುದಾರಿಕೆಯು ಫ್ಲಿಪ್‌ಕಾರ್ಟ್‌ಗಾಗಿ ಈ ಋತುವಿನಲ್ಲಿ ಹಲವಾರು ರೋಮಾಂಚನಕಾರಿ ಅನುಭವವನ್ನು ನೀಡುತ್ತದೆ. ಇದು ಒಂದು ಮಹತ್ವದ ಘಟ್ಟದಲ್ಲಿ ಬರಲಿದ್ದು, ಜನರು ವಿಶೇಷವಾಗಿ ಯುವ ಪೀಳಿಗೆಯವರು ನಿಧಾನವಾಗಿ ಸುರಕ್ಷಿತ ರೀತಿಯಲ್ಲಿ ಹೊರಹೋಗಲು ಆರಂಭಿಸಿದ್ದಾರೆ ಮತ್ತು ಸೊಗಸಾದ ಫ್ಯಾಷನ್ ಆಯ್ಕೆಗಳತ್ತ ಒಲವು ತೋರುತ್ತಿದ್ದಾರೆ.

ಫ್ಲಿಪ್‌ಕಾರ್ಟ್‌ ನೊಂದಿಗಿನ ಪಾಲುದಾರಿಕೆಯು ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿ ಫ್ಲಿಪ್‌ಕಾರ್ಟ್‌ಗೆ ತಲುಪುವ ಮೂಲಕ ವ್ಯಾಪಕವಾದ ವ್ಯಾಪಾರಿಗಳನ್ನು ತಲುಪಲಿದೆ. ಇದರ ಮೂಲಕ ಫ್ಯಾಷನ್ ಅನ್ನು ಪ್ರಜಾಪ್ರಭುತ್ವಗೊಳಿಸುವ ನಿಟ್ಟಿನಲ್ಲಿ ಅರ್ಬಾನಿಕ್ ಅನ್ನು ಶಕ್ತಗೊಳಿಸುತ್ತದೆ. ಇದರ ಮೂಲಕ ಫ್ಲಿಪ್ ಕಾರ್ಟ್ ನ ಆದ್ಯತೆಯೊಂದಿಗೆ ತನ್ನ ಫ್ಯಾಷನ್ ಪೋರ್ಟ್ ಫೋಲಿಯೋವನ್ನು ನಿರಂತರವಾಗಿ ವಿಸ್ತರಣೆ ಮಾಡಲು ಮತ್ತು ಇತ್ತೀಚಿನ ಟ್ರೆಂಡ್ ಗಳನ್ನು ದೇಶಾದ್ಯಂತ ಫ್ಯಾಷನ್ -ಅನ್ವೇಷಕರಿಗೆ ಪ್ರವೇಶಿಸುವಂತೆ ಮಾಡುತ್ತದೆ. ಗ್ರಾಹಕರು ಉಡುಪುಗಳು ಮತ್ತು ಲೌಂಜ್ ವೇರ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿವಿಧ ಶೈಲಿಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

299 ರೂಪಾಯಿಯಿಂದ ಆರಂಭವಾಗಲಿದೆ

299 ರೂಪಾಯಿಯಿಂದ ಆರಂಭವಾಗಲಿದೆ

ಇವುಗಳ ಬೆಲೆ 299 ರೂಪಾಯಿಯಿಂದ ಆರಂಭವಾಗಲಿದೆ. ಅರ್ಬಾನಿಕ್ ಆಯ್ಕೆಯು ಟಾಪ್ಸ್, ಡೆನಿಮ್, ಚಳಿಗಾಲದ ಉಡುಗೆ, ಒಳಉಡುಪು ಮತ್ತು ಈಜುಡುಗೆಯನ್ನು ಒಳಗೊಂಡಿರುತ್ತದೆ ಮತ್ತು ಇಂದು ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ. ಫ್ಲಿಪ್ ಕಾರ್ಟ್ ನೊಂದಿಗೆ ಈ ಪಾಲುದಾರಿಕೆಯ ಮೂಲಕ ಅರ್ಬಾನಿಕ್ ನ ಬೆಳವಣಿಗೆಯ ದೃಷ್ಟಿಕೋನವು ಭಾರತದಲ್ಲಿ ಹೆಚ್ಚಿನ ಶಾಪರ್ ಗಳನ್ನು ತೊಡಗಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸುತ್ತದೆ.

ಲಂಡನ್ ಮೂಲದ ಅರ್ಬಾನಿಕ್ ನಲ್ಲಿ ಪಾಲುದಾರರಾಗಿರುವ ಜೇಮ್ಸ್ ವೆಲ್ವುಡ್ ಅವರು ಮಾತನಾಡಿ,''ಅರ್ಬಾನಿಕ್ ಕೈಗೆಟುಕುವ ಶ್ರೇಣಿಯಲ್ಲಿನ ಬೆಲೆಯಲ್ಲಿ ಫ್ಯಾಷನ್ ಮತ್ತು ಟ್ರೆಂಡಿ ಬಟ್ಟೆಗಳನ್ನು ಎಲ್ಲಾ ವ್ಯಕ್ತಿಗಳಿಗೂ ಸಮಾನವಾಗಿ ಒದಗಿಸುತ್ತದೆ ಎಂಬುದನ್ನು ಖಚಿತಪಡಿಸಲು ನಾವು ಬಯಸುತ್ತೇವೆ'' ಎಂದು ಹೇಳಿದರು.

ಉಪಾಧ್ಯಕ್ಷ ನಿಶ್ಚಿತ್ ಗಾರ್ಗ್ ಅವರು ಮಾತನಾಡಿ

ಉಪಾಧ್ಯಕ್ಷ ನಿಶ್ಚಿತ್ ಗಾರ್ಗ್ ಅವರು ಮಾತನಾಡಿ

ಫ್ಲಿಪ್‌ಕಾರ್ಟ್‌ ಫ್ಯಾಷನ್‌ನ ಉಪಾಧ್ಯಕ್ಷ ನಿಶ್ಚಿತ್ ಗಾರ್ಗ್ ಅವರು ಮಾತನಾಡಿ, ''ಫ್ಲಿಪ್‌ಕಾರ್ಟ್‌ಗೆ ಹಬ್ಬದ ಈ ಸಮಯದಲ್ಲಿ ಹೊಸ ಗ್ರಾಹಕರನ್ನು ಒಳಗೊಳ್ಳುವಲ್ಲಿ ಫ್ಯಾಷನ್ ಪ್ರಮುಖ ಪಾತ್ರ ವಹಿಸುತ್ತದೆ. ಮತ್ತು ಇದರೊಂದಿಗೆ ನಮ್ಮ ಝೆನ್ Z ಗ್ರಾಹಕರ ಸಂಖ್ಯೆಯನ್ನು ಹೆಚ್ಚು ಮಾಡಲಿದೆ ಎಂಬುದನ್ನು ನಾವು ನಂಬುತ್ತೇವೆ. ಕಳೆದ ವರ್ಷದಲ್ಲಿ ಫ್ಯಾಷನ್ ಅಗತ್ಯಗಳು ವಿಭಿನ್ನ ರೀತಿಯಲ್ಲಿ ವಿಕಸನಗೊಂಡಿವೆ ಮತ್ತು ನಾವು ಬಹುನಿರೀಕ್ಷಿತ ಈ ಋತುವಿಗೆ ತಯಾರಿ ನಡೆಸುತ್ತಿರುವಾಗ ಜಾಗತಿಕ ಶೈಲಿಗಳು ದೊಡ್ಡ ಪ್ರಭಾವವನ್ನು ಮುಂದುವರಿಸುತ್ತದೆ. ಈ ವರ್ಷ ನಮ್ಮ ಅತಿದೊಡ್ಡ ಫ್ಯಾಷನ್ ಪಾಲುದಾರಿಕೆಗಳಲ್ಲಿ ಒಂದಾಗಿರುವ ಅರ್ಬಾನಿಕ್ ಅನ್ನು ಫ್ಲಿಪ್ ಕಾರ್ಟ್ ನಲ್ಲಿ ಆರಂಭಿಸಲು ನಾವು ಸಂತೋಷಪಡುತ್ತೇವೆ. ಇತ್ತೀಚಿನ ಶೈಲಿಗಳನ್ನು ದೇಶಾದ್ಯಂತದ ಪ್ರತಿಯೊಬ್ಬ ಮಹತ್ವಾಕಾಂಕ್ಷಿ ಗ್ರಾಹಕರಿಗೂ ಲಭ್ಯವಾಗುವಂತೆ ಮಾಡಬೇಕು ಎಂಬುದನ್ನು ನಾವು ನಂಬುತ್ತೇವೆ'' ಎಂದು ತಿಳಿಸಿದರು.

2+ ಶ್ರೇಣಿಯ ಪ್ರದೇಶಗಳಲ್ಲಿ ಲಭ್ಯ

2+ ಶ್ರೇಣಿಯ ಪ್ರದೇಶಗಳಲ್ಲಿ ಲಭ್ಯ

''ನಾವು ಫ್ಯಾಷನ್ ಟ್ರೆಂಡ್ ಗಳನ್ನು ಸಮೀಕರಿಸುವಲ್ಲಿ ಮತ್ತು ಮಹಾನಗರಗಳು ಹಾಗೂ 2+ ಶ್ರೇಣಿಯ ಪ್ರದೇಶಗಳಲ್ಲಿ ಗ್ರಾಹಕರ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಮುಖವಾದ ಪಾತ್ರವನ್ನು ಮುಂದುವರಿಸುತ್ತೇವೆ. ಇದೇ ಮಾದರಿಯಲ್ಲಿ ಇನ್ನೊಂದು ಹೆಜ್ಜೆಯೆಂದರೆ ಇತ್ತೀಚೆಗೆ ಟ್ರೆಂಡ್ ಸ್ಟಾಪ್!'- ಸಣ್ಣ ಲೇಬಲ್ ಗಳ ಪಾಲುದಾರಿಕೆಯಲ್ಲಿನ 55,000 ಕ್ಕೂ ಅಧಿಕ ಇತ್ತೀಚಿನ ಯುವ ಶೈಲಿಗಳ ಇನ್-ಆ್ಯಪ್ ಕ್ಯುರೇಶನ್ ಆಗಿದ್ದು, ಉತ್ತಮ ಯಶಸ್ಸನ್ನು ಕಂಡಿದೆ. ನಮ್ಮ ಯುವ ಫ್ಯಾಷನ್ ಪೋರ್ಟ್ ಫೋಲಿಯೋವನ್ನು ಬೆಳೆಸಲು ನಾವು ಉದ್ಯಮದಲ್ಲಿ ಅತ್ಯುತ್ತಮವಾದವರೊಂದಿಗೆ ಸಹಕರಿಸುತ್ತೇವೆ ಮತ್ತು ಅರ್ಬಾನಿಕ್ ಜೊತೆಗಿನ ಈ ಪಾಲುದಾರಿಕೆಯು ಈ ದೃಷ್ಟಿಗೆ ಅನುಗುಣವಾಗಿದೆ'' ಎಂದು ಅವರು ಹೇಳಿದರು.

ಅರ್ಬಾನಿಕ್ ಇಂಡಿಯಾದ ರಾಹುಲ್ ದಯಾಮ

ಅರ್ಬಾನಿಕ್ ಇಂಡಿಯಾದ ರಾಹುಲ್ ದಯಾಮ

ಫ್ಲಿಪ್ ಕಾರ್ಟ್ ನೊಂದಿಗಿನ ಪಾಲುದಾರಿಕೆ ಬಗ್ಗೆ ಮಾತನಾಡಿದ ಅರ್ಬಾನಿಕ್ ಇಂಡಿಯಾದ ಮಾರುಕಟ್ಟೆ ಮುಖ್ಯಸ್ಥ ರಾಹುಲ್ ದಯಾಮ ಅವರು, ''ಫ್ಲಿಪ್ ಕಾರ್ಟ್ ನೊಂದಿಗೆ ಸಹಭಾಗಿತ್ವ ಮಾಡಿಕೊಂಡಿರುವುದು ಅತ್ಯದ್ಭುತವಾದ ಅವಕಾಶವಾಗಿದೆ ಮತ್ತು ಇದು ಫ್ಲಿಪ್ ಕಾರ್ಟ್ ನೊಂದಿಗೆ ಸಹಕರಿಸಲು ಮತ್ತು ಅರ್ಬಾನಿಕ್ ನ ಉತ್ಕೃಷ್ಠತೆ, ಉಬರ್ ಚೆಕ್ ಮತ್ತು ಇನ್ ವೋಗ್ ಸಂಗ್ರಹವನ್ನು ಭಾರತದ ಅತ್ಯುತ್ತಮ ಶಾಪಿಂಗ್ ತಾಣಕ್ಕೆ ಕರೆ ತರುವಲ್ಲಿ ಉತ್ತಮ ಅವಕಾಶವನ್ನು ಒದಗಿಸುತ್ತದೆ. ಈ ಪಾಲುದಾರಿಕೆಯ ಮೂಲಕ ನಾವು ಫ್ಲಿಪ್ ಕಾರ್ಟ್ ನ ವ್ಯಾಪ್ತಿಯನ್ನು ದೇಶದ ಉದ್ದಗಲಕ್ಕೂ ವಿಸ್ತರಿಸುತ್ತಿದ್ದೇವೆ. ಇದು ನಮ್ಮ ಸಮುದಾಯದ ಶೈಲಿಯ ಐಕಾನ್ ಗಳಿಗೆ ಉನ್ನತ ಡಿಜಿಟಲ್ ಶಾಪಿಂಗ್ ಅನುಭವವನ್ನು ನೀಡುವ ತಂತ್ರಜ್ಞಾನವಾಗಿದೆ'' ಎಂದರು.

English summary
Walmart-owned Flipkart on Wednesday announced its partnership with Urbanic, a London-based fashion brand, targeting young consumers across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X