ಚಿನ್ನ, ಬೆಳ್ಳಿಯನ್ನು ಕಡಿಮೆ ಬೆಲೆಗೆ ಖರೀದಿಸಬೇಕಾದರೆ ಈ 5 ಅಂಶಗಳನ್ನು ನೆನಪಿನಲಿಟ್ಟರೆ ಸಾಕು!

ಚಿನ್ನ ಮತ್ತು ಬೆಳ್ಳಿಯ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೊಸ ಚಿನ್ನ ಖರೀದಿಸುವ ಬದಲು ಇದ್ದ ಚಿನ್ನ, ಬೆಳ್ಳಿಯನ್ನು ಜೋಪಾನವಾಗಿ ಉಳಿಸಿಕೊಂಡರೆ ಸಾಕು ಎನ್ನುವ ಹಾಗಾಗಿದೆ. ಇದರ ಮಧ್ಯೆ, ನಿಮಗೇನಾದರೂ ಚಿನ್ನ ಅಥವಾ ಬೆಳ್ಳಿ ಆಭರಣಗಳನ್ನು ಖರೀದಿಸುವ ಯೋಚನೆ ಇದ್ದರೆ ಕೆಲವೊಂದು ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಜನರು ಆಭರಣ ಅಂಗಡಿಗೆ ಹೋಗುವಾಗ ತಾವು ಇಷ್ಟಪಡುವ ವಿನ್ಯಾಸವನ್ನು ಆರಿಸಿಕೊಳ್ಳುತ್ತಾರೆ. ಚಿನ್ನದ ಬೆಲೆ, ಹಾಲ್‌ಮಾರ್ಕಿಂಗ್ ಅಥವಾ ಮೇಕಿಂಗ್‌ ಚಾರ್ಜ್‌ ಇದ್ಯಾವುದನ್ನೂ ಗಮನಿಸದೆ ಚಿನ್ನವನ್ನು ಖರೀದಿ ಮಾಡುತ್ತಾರೆ. ಪರಿಣಾಮವಾಗಿ, ಅಗತ್ಯಕ್ಕಿಂತ ಹೆಚ್ಚೇ ದುಡ್ಡು ಪಾವತಿಸಿ ಬಂದಿರುತ್ತಾರೆ. ಯಾಕೆಂದರೆ ಬೇರೆ ಬೇರೆ ಡಿಸೈನ್‌ಗಳಿಗೆ ಶುಲ್ಕ ಬೇರೆ ಬೇರೆಯಾಗಿರುತ್ತದೆ. ಈ ಶುಲ್ಕಗಳು 30% ರಿಂದ 50% ಅಥವಾ ಅದಕ್ಕಿಂತಲೂ ಹೆಚ್ಚಾಗಿರಲೂಬಹುದು. ಆದ್ದರಿಂದ, ಆಭರಣಗಳನ್ನು ಖರೀದಿಸುವ ಮೊದಲು ಕೆಲವು ಪ್ರಮುಖ ಅಂಶಗಳ ಬಗ್ಗೆ ತಿಳಿದಿಕೊಂಡಿರಲೇ ಬೇಕು. ಅನಗತ್ಯ ಖರ್ಚುಗಳನ್ನು ತಪ್ಪಿಸಿ ಸರಿಯಾದ ಬೆಲೆಗೆ ಆಭರಣ ಖರೀದಿಸಬೇಕಾದರೆ ಈ ಅಂಶಗಳತ್ತ ವಿಶೇಷ ಗಮನ ಹರಿಸಬೇಕು.

Five Major Points To Keep In Your Mind While Purchasing Gold And Silver To AVoid Extra Charge

ಆಭರಣಗಳ ಶುದ್ಧತೆಯನ್ನು ಚೆಕ್‌ ಮಾಡಿ

ಆಭರಣಗಳನ್ನು ಖರೀದಿಸುವಾಗ, ಮೊದಲು ಅದರ ಪ್ಯೂರಿಟಿ ಚೆಕ್‌ ಮಾಡಿಕೊಳ್ಳಬೇಕು. ಆಭರಣದ ಮೇಲಿನ ಹಾಲ್‌ಮಾರ್ಕ್ ಅತ್ಯಂತ ವಿಶ್ವಾಸಾರ್ಹ ಸೂಚಕವಾಗಿರುತ್ತದೆ. ಇದು ಚಿನ್ನದ ಶುದ್ಧತೆ ಮತ್ತು ಗುಣಮಟ್ಟವನ್ನು ಅಧಿಕೃತವಾಗಿ ಪ್ರಮಾಣೀಕರಿಸುತ್ತದೆ. ಆದ್ದರಿಂದ, ಖರೀದಿಸುವಾಗ ಯಾವಾಗಲೂ BIS ಹಾಲ್‌ಮಾರ್ಕ್ ಇರುವ ಚಿನ್ನವನ್ನೇ ಆರಿಸಿಕೊಳ್ಳುವುದು ಜಾಣತನ.

ಆಭರಣದ ಬೆಲೆಯನ್ನು ಮೊದಲೇ ತಿಳಿದುಕೊಳ್ಳಿ

ಆಭರಣಗಳನ್ನು ಖರೀದಿಸಲು ಹೊರಡುವ ಮೊದಲು, ನಿಮ್ಮ ನಗರದಲ್ಲಿ ಚಿನ್ನ ಮತ್ತು ಬೆಳ್ಳಿಯ ಆ ದಿನದ ಮಾರುಕಟ್ಟೆ ಬೆಲೆಗಳನ್ನು ಚೆಕ್‌ ಮಾಡಿ ತಿಳಿದುಕೊಳ್ಳಿ. ಇದರಿಂದ ಜ್ಯುವೆಲ್ಲರಿ ಶಾಪ್‌ನಲ್ಲಿ ಹೇಳುವ ದರವು ಮಾರುಕಟ್ಟೆ ಬೆಲೆಗೆ ಹೊಂದಿಕೆಯಾಗುತ್ತದೆಯೇ ಎನ್ನುವುದನ್ನು ತಿಳಿದುಕೊಳ್ಳಬಹುದು. ಬಿಲ್ ಮಾಡುವಾಗ ಒಂದು ವೇಳೆ ಹೆಚ್ಚು ಬಿಲ್‌ ಹಾಕಿದರೆ ನೀವದನ್ನು ಪ್ರಶ್ನಿಸಬಹುದು. ಜೊತೆಗೆ ಮೇಕಿಂಗ್ ಜಾರ್ಜ್‌ ಬಗ್ಗೆ ತಿಳಿದುಕೊಳ್ಳುವುದನ್ನು ಮರೆಯಬೇಡಿ.

ಯಾವಾಗಲೂ ಶುಲ್ಕ ವಿಧಿಸುವ ಬಗ್ಗೆ ಕೇಳಿ

ಖರೀದಿ ಮಾಡುವ ಮೊದಲು ಯಾವಾಗಲೂ ಬೇರೆ ಬೇರೆ ಅಂಗಡಿಗಳಲ್ಲಿ ಶುಲ್ಕದ ಬಗ್ಗೆ ವಿಚಾರಿಸಿ. ಒಂದು ಆಭರಣವನ್ನು ಇಷ್ಟಪಟ್ಟಾಗ, ಅದರ ತೂಕ, ಪ್ರತಿ ಗ್ರಾಂಗೆ ಚಿನ್ನದ ಬೆಲೆ ಮತ್ತು ಅನ್ವಯವಾಗುವ ಶುಲ್ಕಗಳ ಕುರಿತು ವಿವರವಾಗಿ ಕೇಳಿ ತಿಳಿದುಕೊಳ್ಳಿ. ಇದು ಬೆಲೆಗಳನ್ನು ನಿಖರವಾಗಿ ಹೋಲಿಸಲು, ಉತ್ತಮ ಡೀಲ್ ಅನ್ನು ಪಡೆಯಲು ಮತ್ತು ಅನಗತ್ಯ ವೆಚ್ಚಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಯಾವಾಗಲೂ ಸರಿಯಾದ ಬಿಲ್ ತೆಗೆದುಕೊಳ್ಳಿ

ಆಭರಣಗಳನ್ನು ಖರೀದಿಸುವಾಗ ಯಾವಾಗಲೂ ಸರಿಯಾದ ಬಿಲ್ ಅನ್ನೇ ಕೇಳಿ ತೆಗೆದುಕೊಳ್ಳಿ. GST ಉಳಿಸುವ ಪ್ರಯತ್ನದಲ್ಲಿ ನೀವು ಮಾಡುವ ತಪ್ಪು ಮುಂದಿನ ದಿನಗಳಲ್ಲಿ ನಿಮಗೆ ದುಬಾರಿಯಾಗಬಹುದು. ಆಭರಣಗಳ ಶುದ್ಧತೆ, ಬೆಲೆ, ವಿನಿಮಯ ಅಥವಾ ಮರುಖರೀದಿಗೆ ಸಂಬಂಧಿಸಿದ ವಿಷಯಗಳಲ್ಲಿ ಅಥವಾ ಯಾವುದೇ ದೂರು ಬಂದಾಗ ನಿಮ್ಮಲ್ಲಿರುವ ಬಿಲ್ ಅತ್ಯಂತ ನಿರ್ಣಾಯಕ ದಾಖಲೆಯಾಗಿರುತ್ತದೆ. ಆದ್ದರಿಂದ, ಆಭರಣಗಳನ್ನು ಖರೀದಿಸುವಾಗ ಯಾವಾಗಲೂ ಸರಿಯಾದ ಬಿಲ್ ಅನ್ನು ಕೇಳಿ ಪಡೆಯಿರಿ. ಅದರ ಮೇಲೆ ದಾಖಲಿಸಲಾದ ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಚೆಕ್‌ ಮಾಡಿಕೊಳ್ಳಿ.

ತೂಕ ಪರಿಶೀಲಿಸದೆ ಆಭರಣಗಳನ್ನು ಖರೀದಿಸಬೇಡಿ

ಅನೇಕ ಜನರು ಡಿಸೈನ್‌ ಇಷ್ಟವಾದ ತಕ್ಷಣ ಖರೀದಿಗೆ ಮುಂದಾಗಿ ಬಿಡುತ್ತಾರೆ. ಇಲ್ಲಿ ಡಿಸೈನ್‌ ಜೊತೆಗೆ ತೂಕ ಕೂಡಾ ಬಹಳ ಮುಖ್ಯ.ಚಿನ್ನದ ತೂಕದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೆಲೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಕೆಲವೇ ಮಿಲಿಗ್ರಾಂ ಚಿನ್ನದ ಬೆಲೆ ನೂರಾರು ಅಥವಾ ಸಾವಿರಾರು ರೂಪಾಯಿಗಳಷ್ಟಾಗಬಹುದು. ಆದ್ದರಿಂದ, ಆಭರಣಗಳನ್ನು ಖರೀದಿಸುವಾಗ, ತೂಕವನ್ನು ಸರಿಯಾಗಿ ಚೆಕ್‌ ಮಾಡಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+