ಹೊಸ ಆದಾಯ ತೆರಿಗೆ ಪೋರ್ಟಲ್ ತೊಂದರೆ, ಇನ್ಫಿ ಜೊತೆ ಸಭೆ

ಬೆಂಗಳೂರು, ಜೂನ್ 16: ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಹೊಸದಾಗಿ ಆರಂಭಿಸಿರುವ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಸಮಸ್ಯೆಗಳು/ತಾಂತ್ರಿಕ ಅಡಚಣೆ ಎದುರಾಗಿದೆ. ಈ ತಾಂತ್ರಿಕ ಅಡಚಣೆಗಳ ಕುರಿತು ಸೂಕ್ತ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ.

ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು 2021ರ ಜೂನ್ 22ರಂದು ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ಹೊಸದಾಗಿ ಆರಂಭಿಸಿರುವ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಎದುರಾಗಿರುವ ಸಮಸ್ಯೆಗಳು/ತಾಂತ್ರಿಕ ಅಡಚಣೆಗಳ ಕುರಿತು ಇನ್ಫೋಸಿಸ್ (ವೆಂಡರ್ ಮತ್ತು ಅದರ ತಂಡ) ದ ಜೊತೆ ಸಂವಾದಾತ್ಮಕ ಸಭೆಯನ್ನು ನಡೆಸಲಿದ್ದಾರೆ.

ಐಸಿಎಐನ ಸದಸ್ಯ, ಲೆಕ್ಕ ಪರಿಶೋಧಕರು, ಸಲಹೆಗಾರರು ಮತ್ತು ತೆರಿಗೆ ಪಾವತಿದಾರರು ಸೇರಿ ಎಲ್ಲ ಪಾಲುದಾರರು ಈ ಸಂವಾದಾತ್ಮಕ ಸಭೆಯಲ್ಲಿ ಪಾಲ್ಗೊಳ್ಳುವರು. ಹೊಸ ತೆರಿಗೆ ಪೋರ್ಟಲ್‌ನಲ್ಲಿ ಹಲವು ತಾಂತ್ರಿಕ ದೋಷಗಳು/ಸಮಸ್ಯೆಗಳು ಕಾಣಿಸಿಕೊಂಡಿರುವುದರಿಂದ ತೆರಿಗೆ ಪಾವತಿದಾರರಿಗೆ ಅನಾನುಕೂಲವಾಗುತ್ತಿದೆ. ಪಾಲುದಾರರರಿಂದ ಪೋರ್ಟಲ್‌ನಲ್ಲಿ ಎದುರಿಸುತ್ತಿರುವ ಸಮಸ್ಯೆಗಳು/ತೊಂದರೆಗಳ ಕುರಿತು ಲಿಖಿತ ಮನವಿಗಳನ್ನು ಸಲ್ಲಿಸುವಂತೆ ಕೋರಲಾಗಿದೆ.

Finance Ministry to hold meeting with Infosys on issues in new Income Tax Portal

ಇನ್ಫೋಸಿಸ್‌ನ ತಂಡದ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿರಲಿದ್ದು, ಅವರು ಸಮಸ್ಯೆಗಳಿಗೆ ಸ್ಪಷ್ಟ ಉತ್ತರ ನೀಡಲಿದ್ದಾರೆ ಮತ್ತು ಪೋರ್ಟಲ್‌ನ ಕಾರ್ಯವೈಖರಿ ಕುರಿತು ಮಾಹಿತಿಗಳನ್ನು ಪಡೆದು, ತಾಂತ್ರಿಕ ದೋಷಗಳನ್ನು ಸರಿಪಡಿಸುವರು ಮತ್ತು ತೆರಿಗೆ ಪಾವತಿದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+