ಉಮಂಗ್ ಬೇಡಿ- ಫೇಸ್ ಬುಕ್ ಇಂಡಿಯಾಕ್ಕೆ ಹೊಸ ಎಂಡಿ

Posted By:
Subscribe to Oneindia Kannada

ನವದೆಹಲಿ, ಜೂನ್ 07: ಫೇಸ್ ಬುಕ್ ಇಂಡಿಯಾ ತನ್ನ ಹೊಸ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಉಮಂಗ್ ಬೇಡಿ ಅವರನ್ನು ನೇಮಿಸಿದೆ. ಕೃತಿಕಾ ರೆಡ್ಡಿ ಅವರ ಸ್ಥಾನವನ್ನು ತುಂಬಲಿರುವ ಉಮಂಗ್ ಅವರು ಮೆನ್ಲೋ ಪಾರ್ಕಿನಲ್ಲಿರುವ ಕೇಂದ್ರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಎರಡು ದಶಕಗಳ ಕಾಲ ಮಾರುಕಟ್ಟೆ ವಿಭಾಗದಲ್ಲಿ ಅನುಭವ ಹೊಂದಿರುವ ಬೇಡಿ ಅವರು ಫೇಸ್ ಬುಕ್ ಸೇರುವುದಕ್ಕೂ ಮುನ್ನ ಅಡೋಬ್ ಐಎನ್ ಸಿಯ ದಕ್ಷಿಣ ಏಷ್ಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

Facebook appoints Umang Bedi as India MD

ಭಾರತದದಲ್ಲಿ ಸರಿ ಸುಮಾರು 150 ಮಿಲಿಯನ್ ಗೂ ಅಧಿಕ ಮಂದಿ ಫೇಸ್ ಬುಕ್ ಬಳಕೆ ಮಾಡುತ್ತಿದ್ದಾರೆ. ಅದರಲ್ಲೂ ಮೊಬೈಲಿನಲ್ಲಿ ಬಳಕೆ ಹೆಚ್ಚಾಗಿದೆ. ಫೇಸ್ ಬುಕ್ ನ ವ್ಯವಸ್ಥಾಪಕ ನಿರ್ದೇಶಕರಾಗಿ ಜುಲೈ ತಿಂಗಳಿನಲ್ಲಿ ಉಮಂಗ್ ಬೇಡಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೃತಿಕಾ ಅವರು ಆಗಸ್ಟ್ ನಲ್ಲಿ ಹೊಸ ಹುದ್ದೆಯನ್ನು ಪಡೆಯಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Facebook India on Tuesday named Umang Bedi as its managing director. He will take over from Kirthiga Reddy, who will be returning to the US to take on a new role at the company’s Menlo Park headquarters.
Please Wait while comments are loading...