ಮನೆ ಖರೀದಿಸುವ ಮುನ್ನವೇ ರಿಯಲ್ ಅನುಭವ ಪಡೆಯಿರಿ
ಬೆಂಗಳೂರು, ಮಾ.24: ರಿಯಲ್ ಎಸ್ಟೇಟ್ ದೈತ್ಯ ಸಂಸ್ಥೆ ಬ್ರಿಗೇಡ್ ಗ್ರೂಪ್ ಹೊಸ ಸೇವೆಯನ್ನು ತನ್ನ ಗ್ರಾಹಕರಿಗಾಗಿ ಆರಂಭಿಸಿದೆ. ಬ್ರಿಗೇಡ್ ಗ್ರೂಪ್ ಆರಂಭಿಸಿರುವ, ಹೆಚ್ಚು ತಿಳಿದಿಲ್ಲದ, ಇನ್ನೊಂದು ಅದ್ಭುತ ಸೇವೆಯೇ 'ಎಕ್ಸ್ ಪೀರಿಯೆನ್ಸ್' ಸೆಂಟರ್.
ಇದು 2013ರಲ್ಲಿ ಆರಂಭಗೊಂಡಿದ್ದು, ಅತ್ಯಾಧುನಿಕ ತಾಂತ್ರಿಕ ಕೌಶಲ್ಯವಿರುವ ಈ ಸೌಲಭ್ಯವು ಬ್ರಿಗೇಡ್ ಸಮೂಹದಡಿ ನಿರ್ಮಿಸಿರುವ ಪ್ರತಿಯೊಂದು ಪ್ರಾಪರ್ಟಿಗಳ ಸಮಗ್ರ ನೋಟವನ್ನು ಖರೀದಿದಾರರಿಗೆ ನೀಡುತ್ತದೆ.
ಯಶವಂತಪುರ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿರುವ ಬ್ರಿಗೇಡ್ ಕಾರ್ಪೊರೇಟ್ ಕಚೇರಿಯ ನೆಲಮಹಡಿಯ ಎಕ್ಸ್ ಪೀರಿಯೆನ್ಸ್ ಸೆಂಟರ್ ಗೆ ಬನ್ನಿ ಮತ್ತು ಅಲ್ಲಿ ನಿಮಗೆ ವೃತ್ತಿಪರ ಸೇಲ್ಸ್ ಮ್ಯಾನೇಜರ್ ಗಳು ಸಿಗುತ್ತಾರೆ. ಅವರು ನಿಮಗೆ ಮಾರ್ಗದರ್ಶನ ನೀಡುತ್ತಾರೆ. 55 ಇಂಚಿನ ಮೈಕ್ರೋಸಾಫ್ಟ್ ಸರ್ಫೇಸ್ ಇಂಟರಾಕ್ಟೀವ್ ಟಚ್ ಸ್ಕ್ರೀನ್ ಸ್ಕ್ರೀನ್ ನೊಂದಿಗೆ ಇದು ಆರಂಭಗೊಳ್ಳುತ್ತದೆ.

ಸ್ಕ್ರೀನ್ ನ ಮೇಲಿನ ಹೋಮ್ ಪೇಜ್ ನಲ್ಲಿ ಬ್ರಿಗೇಡ್ ಗ್ರೂಪ್ ನ ಬ್ಯಾನರ್ ನಡಿಯ ಪ್ರತಿ ಪ್ರಾಜೆಕ್ಟ್ ಗಳನ್ನು ಸೂಚಿಸುವ ವಿವಿಧ ಟ್ಯಾಬ್ ಗಳನ್ನು ತೋರಿಸುತ್ತದೆ. ನೀವು ಇವುಗಳಲ್ಲಿ ಪ್ರತಿಯೊಂದನ್ನು ಒಳಹೊಕ್ಕು ನೋಡುತ್ತಾ ಹೋಗಬಹುದು.
ನಿಮ್ಮ ಬೆರಳ ತುದಿಯಿಂದ ದರ್ಶನ, ಉನ್ನತೀಕರಣ ಯೋಜನೆಗಳು, ಸ್ಥಳದ ಮ್ಯಾಪ್, ಮಾಸ್ಟರ್ ಪ್ಲಾನ್, ಅಂತಸ್ತು ಯೋಜನೆ, ಪ್ರಾಜೆಜೆಕ್ಟ್ ಕರಪತ್ರ ಮತ್ತೂ ಇನ್ನಷ್ಟು ಆಯ್ಕೆಗಳನ್ನು ನೋಡಬಹುದು. ಪ್ರತಿ ದರ್ಶನವೂ ಸುಮಾರು 2-3 ನಿಮಿಷಗಳಷ್ಟು ದೀರ್ಘವಿರುತ್ತದೆ ಮತ್ತು ನಿಮ್ಮ ಆಯ್ಕೆಯ ಪೂರ್ತಿ ಅಪಾರ್ಟ್ ಮೆಂಟ್ ನ ಹಗಲು ಮತ್ತು ರಾತ್ರಿಯ ಬೆಳಕಿನಲ್ಲಿ ಸ್ಪಷ್ಟ ನೋಟವನ್ನು ನೀಡುತ್ತದೆ.
ಇಂಟರಾಕ್ಟೀವ್ ಕನ್ಸೋಲ್ ನ ಬಳಿಕ ನಿಮ್ಮ ವೈಯಕ್ತಿಕ ಐಡಿಗೆ ಕರಪತ್ರವನ್ನು ಇ-ಮೇಲ್ ಮಾಡಲಾಗುತ್ತದೆ. ಸಂಪೂರ್ಣ ಅನುಭವವು ನಿಮಗೆ ಆಪ್ಯಾಯಮಾನವಾಗಿರುತ್ತದೆ, ಸಿನಿಮಾ, ಪ್ರಸೆಂಟೇಶನ್ ನೋಡುವಂತಹ ಕಸ್ಟಮ್ ಮೇಡ್ ಸ್ಕ್ರೀನ್ ನಲ್ಲಿ ಅದು ನಿಮಗೆ ನಿಜವಾದ ಪ್ರಾಜೆಕ್ಟ್ ಸೈಟ್ ಗೆ ಹೋಗಿ ಬಂದಷ್ಟು ವಾಸ್ತವದ ಅನುಭವವನ್ನು ಒದಗಿಸುತ್ತದೆ.
ಮೈಕ್ರೋಸಾಫ್ಟ್ ಸರ್ಫೇಸ್ ನಲ್ಲಿನ ಕನ್ಸೋಲ್ ಕಾರ್ಯವು ಹಾರ್ಡ್ ವೇರ್ ವಿಷಯವಾಗಿದೆ. ಒಒಬಿಐ ಇಂಟರ್ ಫೇಸ್ ಅಭಿವೃದ್ಧಿಪಡಿಸಿದ್ದರೆ, ಡಾಟಾಟೋನ್ ವೀಡಿಯೋ ಸರ್ವರ್ ನೊಂದಿಗೆ ಡಿಸ್ ಪ್ಲೇ ಇಂಟರ್ ಫೇಸ್ ಆಗಿದ್ದು ಇದು ಮೈಕ್ರೋಸಾಫ್ಟ್ ಸರ್ಫೇಸ್ ಮೂಲಕ ಇಂಟರಾಕ್ಟೀವ್ ಆಗುವಂತೆ ಮಾಡುತ್ತದೆ.
ವಿಡಿಯೋ ಸರ್ವರ್ ಅಥವಾ ಲ್ಯಾಪ್ ಟಾಪ್ ನಿಂದ ಲೋಡ್ ಮಾಡಿಕೊಂಡು ಮೂವಿಗಳನ್ನು ಮತ್ತು ಪ್ರಸೆಂಟೇಶನ್ ಗಳನ್ನು ರನ್ ಮಾಡಲು ವಿಡಿಯೋ ವಾಲ್ ಗಳನ್ನು ಉಪಯೋಗಿಸಬಹುದಾಗಿದೆ. ಇದನ್ನು ಚರ್ಚಾ ಪ್ರದೇಶದಲ್ಲೇ ಇಟ್ಟುಕೊಳ್ಳಬಹುದು.
ನೀಡಲಾದ ಯಾವುದೇ ಸಮಯದಲ್ಲಿ, ವಿವಿಧ ಮಾರುಕಟ್ಟೆ ಮತ್ತು ಬಜೆಟ್ ಗಳಲ್ಲಿರುವ ಪ್ರಾಜೆಕ್ಟ್ ಗ ಬ್ರಿಗೇಡ್ ಪೋರ್ಟ್ ಫೋಲಿಯೋವನ್ನು 2 ಸ್ಕ್ರೀನ್ ಗಳಲ್ಲಿ ಪ್ರದರ್ಶಿಸುವ ಸಾಮರ್ಥ್ಯವನ್ನು ಎಕ್ಸ್ ಪೀರಿಯೆನ್ಸ್ ಸೆಂಟರ್ ಹೊಂದಿದೆ. ಯಾವುದೇ ವೇಳೆಯಲ್ಲೂ ಗ್ರಾಹಕರು 2 ಬೇರೆ ಸ್ಕ್ರೀನ್ ಗಳಲ್ಲಿ ಪ್ರಾಜೆಕ್ಟ್ ಗಳನ್ನು ನೋಡಬಹುದು. ಒಬ್ಬ ಭಾವಿ ಖರೀದಿದಾರನಿಗೆ, ಪ್ರಾಜೆಕ್ಟ್ ನ ವಾಸ್ತವಿಕ ನಿರೂಪಣೆಯನ್ನು ನೋಡುವುದರಿಂದ ಆತನ ಮನೆ ಖರೀದಿಸುವ ಪ್ರಮುಖ ನಿರ್ಧಾರಕ್ಕೆ ನೆರವಾಗುತ್ತದೆ. (ಒನ್ಇಂಡಿಯಾ ಬಿಜಿನೆಸ್)












Click it and Unblock the Notifications