3.37 ಲಕ್ಷಕೋಟಿಗೆ ಟ್ವಿಟ್ಟರ್ ಖರೀದಿ, ಮುಂದುವರೆದ ಮಸ್ಕ್ ಯಶಸ್ಸಿನ ಹಾದಿ

ಬೆಂಗಳೂರು, ಏ. 26: ವಿಶ್ವದ ನಂಬರ್ ಒನ್ ಶ್ರೀಮಂತ ಹಾಗೂ ಉದ್ಯಮಸಾಹಸಿ ಎಲಾನ್ ಮಸ್ಕ್ ಅವರು ತಾವು ಹೇಳಿದಂತೆ ಟ್ವಿಟ್ಟರ್ ಎಂಬ ಜನಪ್ರಿಯ ಸೋಷಿಯಲ್ ಮೀಡಿಯಾ ಕಂಪನಿಯನ್ನು ಖರೀದಿಸಿದ್ದಾರೆ. ಸುಮಾರು 44 ಬಿಲಿಯನ್ ಡಾಲರ್, ಅಂದರೆ 3.37 ಲಕ್ಷಕೋಟಿ ರೂಪಾಯಿಗೆ ಟ್ವಿಟ್ಟರ್ ಅನ್ನು ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದಾರೆ. ಟ್ವಿಟ್ಟರ್‌ನ ಪ್ರತೀ ಷೇರನ್ನೂ 54.20 ಡಾಲರ್ (ಸುಮಾರು 4,149 ರೂ) ಬೆಲೆಯಂತೆ ಕೊಳ್ಳಲಾಗಿದೆ.

ಟೆಸ್ಲಾ, ಸ್ಪೇಸ್‌ಎಕ್ಸ್ ಮೊದಲಾದ ಕಂಪನಿಗಳ ಮಾಲೀಕರಾದ ಎಲಾನ್ ಮಸ್ಕ್ ಅವರು ಏಪ್ರಿಲ್ 14ರಂದೇ ತಾನು ಟ್ವಿಟ್ಟರ್ ಖರೀದಿಸುವುದಾಗಿ ಹೇಳಿ 43 ಬಿಲಿಯನ್ ಡಾಲರ್ ಆಫರ್ ಮುಂದಿಟ್ಟಿದ್ದರು. ಆದರೆ, ಟ್ವಿಟ್ಟರ್ ಆಡಳಿತ ಮಂಡಳಿಯವರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಟ್ವಿಟ್ಟರ್ ಖರೀದಿಸಿಲು ತಾನು ಮಾಡಿರುವ ಹಣದ ವ್ಯವಸ್ಥೆಯ ವಿವರವನ್ನು ಮಸ್ಕ್ ಅಧಿಕೃತವಾಗಿ ಘೋಷಿಸಿದ ಬಳಿಕ ಟ್ವಿಟ್ಟರ್ ಆಡಳಿತ ಮಂಡಳಿ ಮಾತುಕತೆಗೆ ಮುಂದಾಗಿತ್ತು ಎನ್ನಲಾಗಿದೆ.

ಖರೀದಿಗೂ ಮುನ್ನ ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ನ ಪ್ರಮುಖ ಷೇರುದಾರರಾಗಿದ್ದರು. ಶೇ 9.2ರಷ್ಟು ಷೇರುಗಳನ್ನು ಅವರು ಹೊಂದಿದ್ದರು. ತನ್ನ ಪ್ರಸ್ತಾವಕ್ಕೆ ಟ್ವಿಟ್ಟರ್ ಸರಿಯಾಗಿ ಸ್ಪಂದಿಸದಿದ್ದಾಗ ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ನ ಇತರ ಪ್ರಮುಖ ಷೇರುದಾರರನ್ನ ಖಾಸಗಿಯಾಗಿ ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದರೆನ್ನಲಾಗಿದೆ. ಒಂದು ವೇಳೆ, ಇದಕ್ಕೂ ಟ್ವಿಟ್ಟರ್ ಆಡಳಿತ ಮಂಡಳಿ ಬಗ್ಗದಿದ್ದರೆ ವಿವಿಧ ಷೇರುದಾರರ ಮೂಲಕ ಒತ್ತಡ ಹಾಕಿಸುವುದು ಮಸ್ಕ್ ಅವರ ತಂತ್ರವಾಗಿತ್ತೆನ್ನಲಾಗಿದೆ.

ಕುತೂಹಲ ಎಂದರೆ ಎಲಾನ್ ಮಸ್ಕ್ ಅವರು ಟ್ವಿಟ್ಟರ್‌ನ ಕಟು ಟೀಕಾಕಾರರಾಗಿದ್ದಾರೆ. ಟ್ವಿಟ್ಟರ್‌ ವೇದಿಕೆಯಲ್ಲಿ ಮುಕ್ತವಾದ ವಾಕ್‌ಸ್ವಾತಂತ್ರ್ಯ ಇಲ್ಲ ಎಂದು ಅವರು ಹಲವು ಬಾರಿ ಕುಟುಕಿದ್ದಾರೆ.

ತಾನೇನಾದರೂ ಟ್ವಿಟ್ಟರ್ ಖರೀದಿ ಮಾಡಿದರೆ ಅಮೂಲಾಗ್ರ ಬದಲಾವಣೆ ಮಾಡುತ್ತೇನೆ. ಎಲ್ಲಾ ರೀತಿಯ ವಿಚಾರಗಳಿಗೂ ವೇದಿಕೆಯಾಗುವಂತೆ ಮಾಡುತ್ತೇನೆ ಎಂದು ಹೇಳಿದ್ದರು. ಇದೀಗ ಅವರು ಅಂದುಕೊಂಡಂತೆ ಟ್ವಿಟ್ಟರ್ ಖರೀದಿ ಮಾಡಿದ್ದಾರೆ. ಅವರ ಹೇಳಿದಂತೆ ಟ್ವಿಟ್ಟರ್‌ನಲ್ಲಿ ಬದಲಾವಣೆಗಳನ್ನ ತರಲಿದ್ದಾರಾ?

"ನನ್ನ ಕಟು ಟೀಕಾಕಾರರೂ ಟ್ವಿಟ್ಟರ್‌ನಲ್ಲೇ ಇರುತ್ತಾರೆ ಎಂದು ಆಶಿಸುತ್ತೇನೆ. ಮುಕ್ತ ವಾಕ್ ಸ್ವಾತಂತ್ರ್ಯ ಎಂದರೆ ಇದೇ" ಎಂದು ಹೇಳಿದ್ದರು.

"ಪ್ರಜಾತಂತ್ರ ಜೀವಂತವಾಗಿರಬೇಕಾದರೆ ಮುಕ್ತ ವಾಕ್ ಸ್ವಾತಂತ್ರ್ಯ ಇರುವುದು ಮುಖ್ಯ ಎಂಬುದು ನನ್ನ ನಂಬಿಕೆ. ವಾಕ್ ಸ್ವಾತಂತ್ರ್ಯಕ್ಕೆ ಒಳ್ಳೆಯ ವೇದಿಕೆಯಾಗುವ ಶಕ್ತಿ ಟ್ವಿಟ್ಟರ್‌ಗೆ ಇದೆ. ಹೀಗಾಗಿ ನಾನು ಟ್ವಿಟ್ಟರ್‌ನಲ್ಲಿ ಹಣ ಹೂಡಿಕೆ ಮಾಡಿದ್ದೇನೆ. ಟ್ವಿಟ್ಟರ್‌ಗೆ ಅಗಾಧ ಸಾಮರ್ಥ್ಯ ಇದೆ. ಅದನ್ನ ನಾನು ಅನಾವರಣ ಮಾಡುತ್ತೇನೆ" ಎಂದು ಅಮೆರಿಕದ ಪ್ರಾಧಿಕಾರಕ್ಕೆ (ಎಸ್‌ಇಸಿ) ಫೈಲಿಂಗ್ ಮಾಡುವ ಸಂದರ್ಭದಲ್ಲಿ ಎಲಾನ್ ಮಸ್ಕ್ ತಿಳಿಸಿದ್ದರು.

ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಅನ್ನು ಪಬ್ಲಿಕ್ ಲಿಸ್ಟಿಂಗ್‌ನಿಂದ ಹೊರತಂದು ಸಂಪೂರ್ಣ ಖಾಸಗಿ ಕಂಪನಿಯಾಗಿ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಅಂದರೆ ಸಾರ್ವಜನಿಕವಾಗಿ ಬಂಡವಾಳ ಸಂಗ್ರಹಿಸಲು ಟ್ವಿಟ್ಟರ್ ಕೆಲ ವರ್ಷಗಳ ಹಿಂದೆ ಐಪಿಒಗೆ ಹೋಗಿತ್ತು.

Elon Musk buys Twitter for 44 billion US dollar

ಷೇರುಪೇಟೆಯಲ್ಲೂ ಅದು ಲಿಸ್ಟ್ ಆಗಿದೆ. ಈಗ ಎಲ್ಲಾ ಷೇರುಗಳನ್ನ ಮಸ್ಕ್ ಅವರೇ ಖರೀದಿ ಮಾಡಿರುವುದರಿಂದ ಇಡೀ ಕಂಪನಿ ಅವರೊಬ್ಬರ ಸುಪರ್ದಿಗೆ ಬರುತ್ತದೆ. ಹಾಗೆಯೇ, ಪ್ರಾಧಿಕಾರದ ಹಲವ ಕಟ್ಟುಪಾಡುಗಳು ಖಾಸಗಿ ಕಂಪನಿಗಳಿಗೆ ಅನ್ವಯ ಆಗುವುದಿಲ್ಲ. ಟ್ವಿಟ್ಟರ್‌ನಲ್ಲಿ ತಾನು ಅಂದುಕೊಂಡಂತೆ ಬದಲಾವಣೆ ತರಲು ಸಾಧ್ಯವಾಗುತ್ತದೆ. ಟ್ವಿಟ್ಟರ್ ಅನ್ನು ಖಾಸಗಿಗೆ ತರುವ ಮಸ್ಕ್ ಉದ್ದೇಶಕ್ಕೆ ಇದೂ ಒಂದು ಕಾರಣ ಎನ್ನಲಾಗಿದೆ.

ಮತ್ತೇನು ಬದಲಾವಣೆ ತರಬಹುದು?:
ಎಲಾನ್ ಮಸ್ಕ್ ಅವರು ತಾನು ಟ್ವಿಟ್ಟರ್‌ನಲ್ಲಿ ಏನೇನು ಬದಲಾವಣೆ ತರುತ್ತೇನೆ ಎಂದು ಎಲ್ಲಿಯೂ ಸ್ಪಷ್ಟವಾಗಿ ಹೇಳಿಲ್ಲ. ಈ ಹಿಂದಿನ ಕೆಲ ಟ್ವೀಟ್‌ಗಳಲ್ಲಿ ಸುಳಿವು ಕೊಟ್ಟಿದ್ದಾರಷ್ಟೇ. ಅದರಲ್ಲಿ ಪ್ರಮುಖವಾದುದು ಎಡಿಟ್ ಬಟನ್. ಸದ್ಯ ಟ್ವಿಟ್ಟರ್‌ನಲ್ಲಿ ನಾವು ಹಾಕುವ ಪೋಸ್ಟ್ ಅನ್ನು ಎಡಿಟ್ ಮಾಡಲು ಅವಕಾಶ ಇಲ್ಲ. ಏನಾದರು ತಪ್ಪಿದ್ದರೆ ಇಡೀ ಪೋಸ್ಟ್ ಅನ್ನು ಡಿಲೀಟ್ ಮಾಡಬೇಕಾಗಬಹುದು ಅಷ್ಟೇ. ಈಗ ಫೇಸ್‌ಬುಕ್‌ನಲ್ಲಿರುವಂತೆ ಟ್ವಿಟ್ಟರ್‌ನಲ್ಲಿ ಎಡಿಟ್ ಬಟನ್ ಇದ್ದರೆ ಚೆನ್ನ ಎಂದು ಈ ಹಿಂದೆ ಮಸ್ಕ್ ಅವರು ಟ್ವೀಟ್‌ಗಳನ್ನು ಮಾಡಿದ್ದುಂಟು.

ಹಾಗೆಯೇ, ತಾನೇನಾದರೂ ಟ್ವಿಟ್ಟರ್ ಖರೀದಿಸಿದ್ದೇ ಆದಲ್ಲಿ ಸ್ಪ್ಯಾಮ್ ಬೋಟ್‌ಗಳನ್ನು ಸೋಲಿಸುತ್ತೇವೆ ಎಂದಿದ್ದರು. ಸ್ಪ್ಯಾಮ್ ಬೋಟ್‌ಗಳೆಂದರೆ ಯಾಂತ್ರಿಕವಾಗಿ ಹರಿಯಬಿಡುವ ಅನಪೇಕ್ಷಿತ ಸಂದೇಶಗಳು.

ಇನ್ನು, ಮಸ್ಕ್ ಅವರು ಈ ಹಿಂದೆ ಮತ್ತೊಂದು ಟ್ವೀಟ್‌ನಲ್ಲಿ, "ಟ್ವಿಟ್ಟರ್ ವೇದಿಕೆಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಅಧಿಕೃತತೆ ಕೊಡುವುದು ಉತ್ತಮ" ಎಂದು ಹೇಳಿದ್ದರು.(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+