ಚಿನ್ನ ಬೆಲೆಯಲ್ಲಿ ಸಂಚಲನ, 50,00,000 ಭಾರತೀಯರು ಅಮೆರಿಕ ಬಿಟ್ಟು ವಾಪಸ್? Gold Price
ಚಿನ್ನ.. ಚಿನ್ನ.. ಅಂತಾ ಕಾಯುತ್ತಿದ್ದವರಿಗೆ ಮತ್ತೊಂದು ಭೀಕರ ಆಘಾತ ಎದುರಾಗಿದೆ. ಚಿನ್ನ ಬೆಲೆ ಭಾರಿ ಏರಿಕೆ ಕಾಣುವ ಜೊತೆಗೆ ಜನ ಸಾಮಾನ್ಯರು & ಮಧ್ಯಮ ವರ್ಗ ಹಾಗೂ ಬಡ ವರ್ಗದ ಜನರು ಚಿನ್ನ ಖರೀದಿ ಮಾಡಲು ಆಗದೇ ಇರುವ ಪರಿಸ್ಥಿತಿ ಎದುರಾಗಿದೆ. ನೋಡ ನೋಡುತ್ತಲೇ ಚಿನ್ನ ಬೆಲೆ ಆಕಾಶಕ್ಕೆ ಹತ್ತಿ ಕೂತಿದೆ. ಇದು ಒಂದು ಕಡೆ ಸಂಚಲನ ಸೃಷ್ಟಿ ಮಾಡಿರುವಾಗಲೇ, ದೂರದ ಅಮೆರಿಕ ದೇಶದಿಂದ ಮತ್ತೊಂದು ಆಘಾತಕಾರಿ ಸುದ್ದಿ ಸಿಕ್ಕಿದೆ. ಹೀಗಿದ್ದಾಗಲೇ, ಚಿನ್ನ ಬೆಲೆಯಲ್ಲಿ ಸಂಚಲನ, 50,00,000 ಭಾರತೀಯರು ಅಮೆರಿಕ ಬಿಟ್ಟು ವಾಪಸ್?
ಚಿನ್ನ ಅಥವಾ ಬಂಗಾರದ ಬೆಲೆ ಭಾರಿ ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುತ್ತಿದೆ ಅಂತಾ ಚಿಂತೆಯನ್ನು ಮಾಡ್ತಿದ್ದ ಜನರಿಗೆ ಮತ್ತೊಂದು ಆಘಾತ ಇದೀಗ ಎದುರಾಗಿದೆ. ಅಂದಹಾಗೆ ಮತ್ತೊಮ್ಮೆ ಚಿನ್ನ ಬೆಲೆ ಭಾರಿ ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುವ ಮೂಲಕ ಇದೀಗ ಸಂಚಲನಕ್ಕೆ ಕಾರಣವಾಗಿದೆ. ಭಾರತ ಅಭಿವೃದ್ಧಿ ಪಥದಲ್ಲಿ ಮುಂದೆ ನುಗ್ಗುತ್ತಿರುವ ಸಮಯದಲ್ಲೇ ಚಿನ್ನದ ಬೆಲೆ ಏರಿಕೆ ವಿಚಾರ ಈಗ ಭಾರಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಹಾಗಾದ್ರೆ ಇದೀಗ ಚಿನ್ನದ ಬೆಲೆ ಭಾರಿ ಏರಿಕೆ ಕಾಣಲು ಕಾರಣ ಏನು? ಈಗ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.

ಚಿನ್ನದ ಬೆಲೆ 2,00,000 ರೂಪಾಯಿ...
ಹೌದು, ಚಿನ್ನದ ಬೆಲೆ ಭಾರಿ ದೊಡ್ಡ ಮಟ್ಟಿಗೆ ಏರಿಕೆ ಕಂಡಿದೆ. ಅದರಲ್ಲೂ ಕಳೆದ 10 ವರ್ಷಗಳಲ್ಲಿ ಚಿನ್ನದ ಬೆಲೆ ಕಂಟ್ರೋಲ್ ಮಾಡೋದಕ್ಕೂ ಆಗುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ ಚಿನ್ದನ ಬೆಲೆ ಏರಿಕೆ ವಿಚಾರ ಇದೀಗ ಮಂಡ್ಯ ಟು ಇಂಡಿಯಾ ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗೂ ದಾರಿ ಮಾಡಿಕೊಟ್ಟಿದೆ. ಇಂತಹ ಸಮಯದಲ್ಲೇ ಮತ್ತೊಂದು ಆಘಾತಕಾರಿ ಸುದ್ದಿಯು ಈಗ ಸಿಕ್ಕಿದ್ದು, ಚಿನ್ನದ ಬೆಲೆ ಅತಿ ಶೀಘ್ರದಲ್ಲೇ ಸುಮಾರು 2,00,000 ರೂಪಾಯಿ ತಲುಪುವ ಸ್ಫೋಟಕ ಚರ್ಚೆಯೂ ಶುರುವಾಗಿದೆ.
ಚಿನ್ನ & ಬೆಳ್ಳಿ ಬೆಲೆ ಭಾರಿ ಏರಿಕೆ!
ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತೀಯರ ಮತವನ್ನೇ ಪಡೆದು ಆಯ್ಕೆ ಆಗಿದ್ದು ಇದೀಗ ಭಾರತ ಮೂಲದ ಜನರಿಗೆ ಅಮೆರಿಕದಲ್ಲಿ ದೊಡ್ಡ ಸಮಸ್ಯೆ ಮಾಡುತ್ತಿದ್ದಾರೆ. ಕೆಲಸದ ವೀಸಾ ಮೇಲೆ ಭರ್ಜರಿ 1,00,000 ಯುಎಸ್ ಡಾಲರ್ ಅಂದ್ರೆ ಸುಮಾರು 88,00,000 ರೂಪಾಯಿ ಮೀರಿ ಶುಲ್ಕ ವಿಧಿಸುವ ಕುತಂತ್ರದ ಈ ಯೋಜನೆಗೆ ಸಹಿ ಹಾಕಿದ ನಂತರ ತಲ್ಲಣ ಸೃಷ್ಟಿಯಾಗಿದೆ. ಸಾವಿರಾರು ಭಾರತದ ಕಂಪನಿಗಳು ಇದೇ ವೀಸಾ ನಂಬಿ ಭಾರತ ಮೂಲದ ನೌಕರರನ್ನು ಅಮೆರಿಕಗೆ ಕಳುಹಿಸುತ್ತಿವೆ, ಆದರೆ ಇದೀಗ ಟ್ರಂಪ್‌ಗೆ ಏನಾಯ್ತೋ ಗೊತ್ತಿಲ್ಲ ಭಾರತ & ಭಾರತ ಮೂಲದ ನೌಕರರ ವಿರುದ್ಧವೇ ನಿರ್ಣಯ ಕೈಗೊಂಡಿದ್ದಾರೆ. ಅಲ್ಲದೆ ಕಂಪನಿಗಳಿಗೂ ಇದೀಗ ಎಚ್ಚರಿಕೆ ನೀಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಮತ್ತೊಂದು ಕಡೆ ಚಿನ್ನ & ಬೆಳ್ಳಿ ಬೆಲೆ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಎಂಬ ಅಭಿಪ್ರಾಯ ಇದೀಗ ಕೇಳಿ ಬಂದಿದೆ.












Click it and Unblock the Notifications