ಡಾಲರ್ ವಿರುದ್ಧ ಮೈ ಕೊಡವಿ ನಿಂತ ರುಪಾಯಿ, 12 ವಾರದ ಗರಿಷ್ಠ ಮಟ್ಟಕ್ಕೆ

ಡಾಲರ್ ವಿರುದ್ಧ ರುಪಾಯಿ ಮೌಲ್ಯ ಚಿಗಿತುಕೊಂಡಿದೆ. ಹತ್ತಿರ ಹತ್ತಿರ ಕಳೆದ 12 ವಾರದ ಗರಿಷ್ಠ ಮಟ್ಟಕ್ಕೆ ಗುರುವಾರ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇನ್ನಷ್ಟು ಇಳಿಕೆಯಾಗಿದ್ದರಿಂದ ರುಪಾಯಿ ಮೌಲ್ಯ ಬಲಗೊಂಡಿದೆ ಎನ್ನಲಾಗುತ್ತಿದೆ.

ಅಮೆರಿಕ ಡಾಲರ್ ವಿರುದ್ಧ 71 ತಲುಪಿದಾಗ ರುಪಾಯಿಗೆ ಮತ್ತಷ್ಟು ಬಲ ಸಿಕ್ಕಂತಾಯಿತು. ಹಾಗೇ 70.69 ತಲುಪಿತು. ಕಳೆದ ಸೆಪ್ಟೆಂಬರ್ 3ನೇ ತಾರೀಕಿನಿಂದ ಈಚೆಗೆ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಈ ಮಟ್ಟಕ್ಕೆ ಏರಿರಲಿಲ್ಲ. ಮಂಗಳವಾರದಂದು ವ್ಯವಹಾರ ಮುಕ್ತಾಯಗೊಂಡಾಗ ಡಾಲರ್ ವಿರುದ್ಧ ರುಪಾಯಿ ಮೌಲ್ಯ 71.46 ಇತ್ತು.

ಸ್ಥಳೀಯವಾಗಿ ರಜಾ ಇದ್ದ ಕಾರಣ ಬುಧವಾರದಂದು ವಿದೇಶಿ ವಿನಿಮಯ ಮಾರುಕಟ್ಟೆ ಕಾರ್ಯ ನಿರ್ವಹಿಸಲಿಲ್ಲ. ಭಾರತಕ್ಕೆ ಅಗತ್ಯ ಇರುವ ತೈಲ ಪ್ರಮಾಣದಲ್ಲಿ ಮೂರನೇ ಎರಡರಷ್ಟು ಪ್ರಮಾಣವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಆಗಿರುವುದರಿಂದ ಆಮದುದಾರರಿಗೆ ನೀಡಬೇಕಾದ ಡಾಲರ್ ಪಾವತಿ ಮೊತ್ತವೂ ಇಳಿಕೆಯಾಗಿದೆ.

Dollar against Rupee hits near 12-week high

ಹಾಗಂತ ವಿದೇಶಿ ವಿನಿಮಯ ಮಾರುಕಟ್ಟೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರವೇಶಿಸಿ, ಪರಿಸ್ಥಿತಿ ನಿಭಾಯಿಸಿದಂತೆ ಕಾಣುವುದಿಲ್ಲ ಎಂದು ಡೀಲರ್ ಗಳು ಅಭಿಪ್ರಾಯ ಪಡುತ್ತಾರೆ. ಬ್ರೆಂಟ್ ಬೆಂಚ್ ಮಾರ್ಕ್ 67 ಸೆಂಟ್ಸ್ ನಷ್ಟು ಇಳಿಕೆಯಾಗಿ ಬ್ಯಾರಲ್ ತೈಲ ಬೆಲೆ $ 62.82 ತಲುಪಿತ್ತು. ಕಳೆದ ಸೆಷನ್ ನಲ್ಲಿ $ 1ನಷ್ಟು ಇಳಿಕೆ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+