ನೋಟು ನಿಷೇಧ: ಮಕ್ಕಳು ಪಡೆಯುವ ನಿರ್ಧಾರ ಮುಂದೂಡಿದ ಭಾರತೀಯರು

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮುಂಬೈ, ಫೆಬ್ರವರಿ 6: ನವೆಂಬರ್ 8ರ ನೋಟು ನಿಷೇಧದ ನಂತರ ಭಾರತೀಯ ದಂಪತಿಗಳು ಮಕ್ಕಳು ಪಡೆಯುವ ನಿರ್ಧಾರವನ್ನು ಮುಂದೂಡುತ್ತಿದ್ದಾರಂತೆ. ಮೊರಾದಬಾದ್, ಮುಜಾಫರ್ ನಗರ್ ನಂಥ ಸಣ್ಣ ಪಟ್ಟಣಗಳಲ್ಲಿನ ವೈದ್ಯರೇ ಈ ಬಗ್ಗೆ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ.

ಇನ್ ವಿಟ್ರೋ ಫರ್ಟಿಲೈಸೇಷನ್ (ಐವಿಎಫ್) ಚಿಕಿತ್ಸೆಗೆ ಮುಂದಾಗಬೇಕು ಎಂದಿದ್ದವರೇ ಅದಕ್ಕೆ ಕ್ರೆಡಿಟ್ ಕಾರ್ಡ್ ಮೂಲಕ ಹಣ ಕೊಟ್ಟರೆ ಮುಂದೆ ಹೇಗೋ ಏನೋ ಎಂಬ ಆತಂಕದಲ್ಲಿ, ಇನ್ನೂ ಕೆಲವರು ಹಣ ಹೊಂದಿಸಲಾಗದೆ ನಿರ್ಧಾರ ಮೂಂದೂಡಿದ್ದಾರಂತೆ. ಐವಿಎಫ್ ತಜ್ಞ ವೈದ್ಯೆಯೊಬ್ಬರು ಹೇಳಿರುವ ಪ್ರಕಾರ, ನವೆಂಬರ್ ನಂತರ ಐವಿಎಫ್ ಚಿಕಿತ್ಸೆಗೆ ಬರುವವರಲ್ಲೇ ಶೇ 80ರಷ್ಟು ಕಡಿಮೆ ಆಗಿದ್ದಾರೆ.

Demonetisation: Many Indian couples delay having babies

ನಮ್ಮ ಬಳಿ ಬರುತ್ತಿದ್ದವರ ಪೈಕಿ ಶೇ 50ರಷ್ಟು ಮಂದಿ ಚಿಕಿತ್ಸೆಯನ್ನು ನಾಲ್ಕೈದು ತಿಂಗಳು ಮುಂದೆ ಹಾಕಿದ್ದಾರೆ. ಹಲವರು ಈ ಚಿಕಿತ್ಸೆಗಾಗಿಯೇ ಹಣ ಕೂಡಿಟ್ಟಿರುತ್ತಾರೆ. ಏಕ್ ದಂ ಅ ಹಣ ಚಲಾವಣೆ ಮಾಡಲು ಆಗುವುದಿಲ್ಲ ಅಂದಾಗ ಅವರಿಗೆ ಸಮಸ್ಯೆಯಾಗಿದೆ. ಇನ್ನು ಚಿಕಿತ್ಸೆ ಅರ್ಧದಷ್ಟು ಪಡೆದವರು ಸಾಲ ಮಾಡುವಂತಾಗಿದೆ ಎಂದಿದ್ದಾರೆ ಅವರು.

ಒಂದು ಅಂದಾಜಿನ ಪ್ರಕಾರ 2ರಿಂದ 3.50 ಕೋಟಿ ಭಾರತೀಯ ದಂಪತಿ ಫಲವಂತಿಕೆ ಸಮಸ್ಯೆ ಎದುರಿಸುತ್ತಿದ್ದಾರೆ. ಅ ಪೈಕಿ ಒಂದು ಲಕ್ಷ ದಂಪತಿ ಮಾತ್ರ ಚಿಕಿತ್ಸೆಗೆ ಮುಂದಾಗುತ್ತಾರೆ ಎಂದು ಇ ಅಂಡ್ ವೈ ಅಧ್ಯಯನ ವರದಿ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Many Indian couples are delaying their plans to have babies after PM Narendra Modi announced the demonetisation move.
Please Wait while comments are loading...