ಮುಕೇಶ್ ನಂತರ ಅತಿ ಶ್ರೀಮಂತರ ಪಟ್ಟಿಯಲ್ಲಿ ನಂ.2 ಯಾರು?

ನವದೆಹಲಿ, ಫೆಬ್ರವರಿ15: ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ನಿರೀಕ್ಷೆಯಂತೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮೆಟೆಡ್ ಚೇರ್ಮನ್ ಮುಕೇಶ್ ಅಂಬಾನಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ಉತ್ತಮ ಜಿಗಿತ ಕಂಡಿರುವ ಡಿ ಮಾರ್ಟ್ ಸೂಪರ್ ಮಾರ್ಕೆಟ್ ಮಾಲೀಕ ರಾಧಾಕಿಶನ್ ದಮಾನಿ ಎರಡನೇ ಸ್ಥಾನಕ್ಕೇರಿ ಅಚ್ಚರಿ ಮೂಡಿಸಿದ್ದಾರೆ.

ದಮಾನಿ ಬಳಿ 17.9 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಇದೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಏಷ್ಯಾದ ಅತಿ ಶ್ರೀಮಂತ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಒಟ್ಟು 57.9 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ.

ದಮಾನಿ ಹಾಗೂ ಕುಟುಂಬದ ಆಸ್ತಿ 96 ಮಿಲಿಯನ್ ಡಾಲರ್ ಏರಿಕೆ ಕಂಡಿದೆ. ಶಿವನಾಡರ್, ಉದಯ್ ಕೋಟಕ್, ಉದ್ಯಮಿ ಗೌತಮ್ ಅದಾನಿ, ಲಕ್ಷ್ಮಿ ಮಿತ್ತಲ್ ಅವರನ್ನು ದಮಾನಿ ಹಿಂದಿಕಿದ್ದಾರೆ.

D-Mart’s Radhakishan Damani now 2nd richest Indian after RIL’s Mukesh Ambani

ರಾಧಾಕಿಶನ್, ಗೋಪಿಕಿಶನ್ ದಮಾನಿ, ಶ್ರೀಕಾಂತಾದೇವಿ ಆರ್ ದಮಾನಿ ಹಾಗೂ ಕಿರಣ್ ದೇವಿ ಜಿ ದಮಾನಿ ಅವರು 1.48 ಕೋಟಿ ಷೇರುಗಳನ್ನು 2049 ರು ಮುಖಬೆಲೆಯಂತೆ ಮಾರಾಟ ಮಾಡಿದ್ದಾರೆ. 2017ರಿಂದ ಷೇರುಪೇಟೆಯಲ್ಲಿ ಲಿಸ್ಟಿಂಘ್ ಕಂಪನಿಯಾಗಿರುವ ಡಿ ಮಾರ್ಟ್ ಆರಂಭಿಕ ಮಾರುಕಟ್ಟೆ ಮೌಲ್ಯ 39, 988 ಕೋಟಿ ರು ನಷ್ಟಿತ್ತು, ಇದೀಗ 1.58 ಲಕ್ಷ ಕೋಟಿ ರು ಗೇರಿದೆ. ಭಾರತದ ಅಗ್ರಗಣ್ಯ ರೀಟೈಲ್ ಮಾರುಕಟ್ಟೆ ಮಳಿಗೆ ಜಾಲ ಹೊಂದಿರುವ ಡಿ ಮಾರ್ಟ್ ಸುಮಾರು 196 ಮಳಿಗೆಗಳನ್ನು ದೇಶದೆಲ್ಲೆಡೆ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+