• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇಕ್ ಮೈ ಟ್ರಿಪ್ ಸಂಸ್ಥೆಯ ಆದಾಯ ಖೋತಾ, 350 ಉದ್ಯೋಗ ಕಡಿತ

|

ಗುರುಗ್ರಾಮ, ಜೂನ್ 1: ಹಲವರ ಪಾಲಿಗೆ ಆನ್ ಲೈನ್ ಟ್ರಾವೆಲ್ ಗೈಡ್ ಆಗಿರುವ ಗುರುಗ್ರಾಮ ಮೂಲದ ಮೇಕ್ ಮೈ ಟ್ರಿಪ್ ಸಂಸ್ಥೆಗೂ ಕೊವಿಡ್ 19 ಹೊಡೆತ ಬಿದ್ದಿದೆ. ಸಂಸ್ಥೆಯ 350ಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಈ ಕುರಿತಂತೆ ಸಂಸ್ಥೆಯ ಸ್ಥಾಪಕ ದೀಪ್ ಕಾಲ್ರಾ ಹಾಗೂ ಸಿಇಒ ರಾಜೇಶ್ ಮಗೋ ಅವರು ತಮ್ಮ ಉದ್ಯೋಗಿಗಳಿಗೆ ಪತ್ರ ಮೂಲಕ ತಿಳಿಸಿದ್ದಾರೆ.

HSBC ಸಂಸ್ಥೆಯಿಂದ ಸುಮಾರು 35000 ಉದ್ಯೋಗ ಕಡಿತ!HSBC ಸಂಸ್ಥೆಯಿಂದ ಸುಮಾರು 35000 ಉದ್ಯೋಗ ಕಡಿತ!

ಕೊವಿಡ್ 19 ಲಾಕ್ಡೌನ್ ನಿಂದಾಗಿ ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಭಾರಿ ನಷ್ಟ ಅನುಭವಿಸಿದೆ. ಇದರ ಜೊತೆಗೆ ಸಾರಿಗೆ ಸಂಪರ್ಕ ಕೂಡಾ ಸಮರ್ಪಕವಾಗಿರದ ಕಾರಣ ಆನ್ ಲೈನ್ ಟ್ರಾವೆಲ್ ಉದ್ಯಮ ಭಾರಿ ಹಿನ್ನಡೆ ಅನುಭವಿಸಿದೆ.

ಸಂಸ್ಥೆಯ ಉದ್ಯೋಗಿಗಳಿಗೆ ಉದ್ಯೋಗ ಕಡಿತವಾದರೂ ಮೆಡಿಕ್ಲೆಮ್ ಸೌಲಭ್ಯ ಈ ವರ್ಷಾಂತ್ಯದ ತನಕ ಲಭ್ಯವಿರಲಿದೆ ಎಂದು ಎಂಎಂಟಿ ಸ್ಥಾಪಕರು ಹೇಳಿದ್ದಾರೆ. ಸಾಮಾನ್ಯವಾಗಿ ಮುಂಗಾರು ಆರಂಭಕ್ಕೂ ಮುನ್ನವೇ ಮೇಕ್ ಮೈಟ್ರಿಪ್ ನಿಂದ ಟಿಕೆಟ್ ಬುಕ್ಕಿಂಗ್ ರಿಯಾಯಿತಿ, ವಿನಾಯಿತಿ, ಕ್ಯಾಶ್ ಬ್ಯಾಕ್, ಹೋಟೆಲ್ ರೂಮ್ ಬುಕ್ಕಿಂಗ್ ಆಫರ್ ಗಳು ಘೋಷಣೆಯಾಗುತ್ತಿತ್ತು. ಆದರೆ ಈಗ ಸಂಸ್ಥೆ ಈ ಎಲ್ಲಾ ಆಫರ್ ನೀಡಲು ಲಾಕ್ಡೌನ್ ನಿಯಮಗಳು ಅಡ್ಡಿಯಾಗಿವೆ. ಪ್ರವಾಸೋದ್ಯಮ ಕುರಿತಂತೆ ಸರ್ಕಾರ ಇನ್ನೂ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಪ್ರಕಟಿಸಿಲ್ಲ.

ಲಾಕ್ಡೌನ್ ನಡುವೆ ಉದ್ಯೋಗಿಗಳಿಗೆ ಶುಭ ಸುದ್ದಿ ಕೊಟ್ಟ HCLಲಾಕ್ಡೌನ್ ನಡುವೆ ಉದ್ಯೋಗಿಗಳಿಗೆ ಶುಭ ಸುದ್ದಿ ಕೊಟ್ಟ HCL

ಕೋವಿಡ್ 19ನಿಂದಾಗಿ ಶೇ 81ರಷ್ಟು ಸಾರಿಗೆ, ಪ್ರವಾಸೋದ್ಯಮ ಸಂಸ್ಥೆಗಳು ಶೇ 100ರಷ್ಟು ಆದಾಯ ನಷ್ಟ ಅನುಭವಿಸಿವೆ. ಶೇ 40ರಷ್ಟು ಸಂಸ್ಥೆಗಳು ಮುಂದಿನ 3 ರಿಂದ 6 ತಿಂಗಳಲ್ಲಿ ಮುಚ್ಚುವ ಭೀತಿಯಲ್ಲಿವೆ ಎಂದು ಅಂಕಿ ಅಂಶದಿಂದ ತಿಳಿದು ಬಂದಿದೆ.

English summary
Gurugram-based travel firm MakeMyTrip has decided to lay off 350 employees after being severely hit by covi 19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X