'ಗ್ಲೋ & ಹ್ಯಾಂಡ್ಸಮ್' ಟೈಟಲ್ ವಿವಾದ:ಹಿಂದೂಸ್ತಾನ್ ಯೂನಿಲಿವರ್‌ಗೆ ತಾತ್ಕಾಲಿಕ ರಿಲೀಫ್

ಬೆಂಗಳೂರು, ಜುಲೈ 7: ಜುಲೈ 6ರ ಆದೇಶದ ಪ್ರಕಾರ 'ಗ್ಲೋ & ಹ್ಯಾಂಡ್ಸಮ್' ಟ್ರೇಡ್‌ಮಾರ್ಕ್ ಕುರಿತು ಕಾನೂನು ಕ್ರಮಗಳನ್ನು ಪ್ರಾರಂಭಿಸುವ ಮೊದಲು ದೊಡ್ಡ ಪ್ರತಿಸ್ಪರ್ಧಿ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್‌ಗೆ ಏಳು ದಿನಗಳ ನೋಟಿಸ್ ನೀಡುವಂತೆ ಗ್ರಾಹಕ ಸರಕು ತಯಾರಕ ಇಮಾಮಿ ಲಿಮಿಟೆಡ್‌ಗೆ ಭಾರತೀಯ ನ್ಯಾಯಾಲಯ ನಿರ್ದೇಶನ ನೀಡಿದೆ.

ಜಾಗತಿಕ ಗ್ರಾಹಕ ದೈತ್ಯ ಯೂನಿಲಿವರ್‌ನ ಜುಲೈ 2 ರಂದು ತನ್ನ ಫೇಮಸ್ ಬ್ರ್ಯಾಂಡ್ 'ಫೇರ್ & ಲವ್ಲಿ' ಅನ್ನು 'ಗ್ಲೋ & ಲವ್ಲಿ' ಎಂದು ಮರುಹೆಸರಿಸುವುದಾಗಿ ಹೇಳಿದೆ.

ಪುರುಷರಿಗಾಗಿ ಅದರ ಸ್ಕಿನ್ ಕ್ರೀಮ್ ಅನ್ನು 'ಗ್ಲೋ & ಹ್ಯಾಂಡ್ಸಮ್' ಎಂದು ಕರೆಯಲಾಗುವುದು ಎಂದು ಕಂಪನಿ ಹೇಳಿದೆ. ಆದರೆ ಹಿಂದೂಸ್ತಾನ್ ಯೂನಿಲಿವರ್ ಹೆಸರು ಬದಲಾವಣೆಯನ್ನು ಘೋಷಿಸುವ ಒಂದು ವಾರದ ಮೊದಲೇ ಡಿಜಿಟಲ್ ಆಗಿ 'ಗ್ಲೋ & ಹ್ಯಾಂಡ್ಸಮ್' ಅನ್ನು ತಾನು ಪ್ರಾರಂಭಿಸಿದ್ದೇನೆ ಎಂದು ಇಮಾಮಿ ಲಿಮಿಟೆಡ್‌ ಹೇಳಿದೆ.

Big Relief For Unilevers India Unit: Court Grants Relief Over Glow & Handsome Trademark

ಹಿಂದೂಸ್ತಾನ್ ಯೂನಿಲಿವರ್ ಮೊದಲ ಬಾರಿಗೆ 2018 ರ ಸೆಪ್ಟೆಂಬರ್‌ನಲ್ಲಿ 'ಗ್ಲೋ & ಲವ್ಲಿ' ಮತ್ತು 'ಗ್ಲೋ & ಹ್ಯಾಂಡ್‌ಸಮ್' ಎಂಬ ಟ್ರೇಡ್‌ಮಾರ್ಕ್‌ಗಳಿಗೆ ಅರ್ಜಿ ಸಲ್ಲಿಸಿತ್ತು. ಇದಕ್ಕಾಗಿ ಅರ್ಜಿ 2019 ರಲ್ಲಿ ತಿರಸ್ಕರಿಸಲ್ಪಟ್ಟಿತು ಮತ್ತು ಜೂನ್ 2020 ರಲ್ಲಿ ಮತ್ತೆ ಅರ್ಜಿ ಸಲ್ಲಿಸಲಾಯಿತು ಎಂದು ಕಂಪನಿಯು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.

ಹಿಂದೂಸ್ತಾನ್ ಯೂನಿಲಿವರ್ ಮತ್ತು ಇಮಾಮಿ ಪ್ರತಿಕ್ರಿಯೆಯ ಕೋರಿಕೆಗಳಿಗೆ ಸ್ಪಂದಿಸಲಿಲ್ಲ ಮತ್ತು ನ್ಯಾಯಾಲಯವು ಜುಲೈ 27 ಅನ್ನು ಮುಂದಿನ ವಿಚಾರಣೆಯ ದಿನಾಂಕವಾಗಿ ನಿಗದಿಪಡಿಸಿದೆ.

ಹಿಂದೂಸ್ತಾನ್ ಯೂನಿಲಿವರ್ 'ಫೇರ್ & ಲವ್ಲಿ' ಎಂಬ ಹೆಸರು ಚರ್ಮದ ಟೋನ್‌ಗಳತ್ತ ಉತ್ತೇಜಿಸಿದೆ ಎಂಬ ಟೀಕೆಗಳನ್ನು ಎದುರಿಸಿದ ನಂತರ ಅದರ ಚರ್ಮದ ಕ್ರೀಮ್‌ಗಳ ಮರುಬ್ರಾಂಡ್ ಮಾಡುವ ನಿರ್ಧಾರಕ್ಕೆ ಬಂದಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+