10 ಸಾವಿರ ಮಂದಿ ಸ್ಥಳೀಯರಿಗೆ ಕಾಂಗ್ನಿಜೆಂಟ್ ಗಾಳ
ನ್ಯೂಜೆರ್ಸಿ, ಡಿ.4: ಅಮೆರಿಕದಲ್ಲಿ ಕಾಗ್ನಿಜೆಂಟ್ ಆದಾಯ ಹಾಗೂ ಕಾರ್ಯ ನಿರ್ವಹಣೆ ವೆಚ್ಚ ಆಧಾರಿಸಿ ಜೆಪಿ ಮಾರ್ಗನ್ ಕಳೆದ ಜೂನ್ ನಲ್ಲಿ ನೀಡಿದ್ದ ವರದಿ ಪರಿಣಾಮ ಈಗ ಕಾಣಿಸಿಕೊಳ್ಳುತ್ತಿದೆ. ನ್ಯೂಜೆರ್ಸಿ ಮೂಲದ ಕಾಂಗ್ನಿಜೆಂಟ್ ಕಂಪನಿ ಯುಎಸ್ ನಲ್ಲಿ 10 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು ಸ್ಥಳೀಯರೇ ಮಾತ್ರ ಆದ್ಯತೆ ನೀಡಲು ನಿರ್ಧರಿಸಿದೆ.
ಅಮೆರಿಕ ವಲಸೆ ನೀತಿಯಿಂದಾಗಿ ಗೂಗಲ್ ಮೀರಿಸಿ ಬೆಳೆಯುತ್ತಿದ್ದ ಕಾಂಗ್ನಿಜೆಂಟ್ ಪ್ರಗತಿಗೆ ಅಡ್ಡಿಯುಂಟಾಗಲಿದೆ ಎಂದು ಜೆಪಿ ಮಾರ್ಗನ್ ಸಂಸ್ಥೆ ಈ ಹಿಂದೆ ಎಚ್ಚರಿಸಿತ್ತು. ಈ ನಿಟ್ಟಿನಲ್ಲಿ ಗಮನ ಹರಿಸಿರುವ ಕಾಂಗ್ನಿಜೆಂಟ್ ಟೆಕ್ನಾಲಜಿ ಸಲ್ಯೂಷನ್ಸ್(ಸಿಟಿಎಸ್) ಮುಂದಿನ ಮೂರು ವರ್ಷಗಳಲ್ಲಿ 10 ಸಾವಿರಕ್ಕೂ ಅಧಿಕ ಫುಲ್ ಟೈಮ್ ಉದ್ಯೋಗಿಗಳನ್ನು ಅಮೆರಿಕದಲ್ಲಿ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.

ಸಾಮಾಜಿಕ ಮಾಧ್ಯಮ, ಮೊಬೈಲ್, ಕ್ಲೌಡ್ ಕಂಪ್ಯೂಟಿಂಗ್, ಅನಾಲಿಟಿಕ್ಸ್ ಮುಂತಾದ ಕ್ಷೇತ್ರದಲ್ಲಿ ಹೊಸ ರೀತಿ ತೊಡಗಿಸಿಕೊಳ್ಳಲು ಕಾಂಗ್ನಿಜೆಂಟ್ ನಿರ್ಧರಿಸಿದೆ. ಸ್ಥಳೀಯ ನೀತಿ ಕಾನೂನಿಗೆ ಅನ್ವಯವಾಗಿ ಕಾರ್ಯನಿರ್ವಹಿಸಬೇಕಾಗಿರುವುದು ಅನಿವಾರ್ಯ. ಬೇಡಿಕೆಗೆ ತಕ್ಕಂತೆ ನೇಮಕಾತಿ ನಡೆಯಲಿದೆ ಎಂದು ಕಾಂಗ್ನಿಜೆಂಟ್ ನ ಅಧ್ಯಕ್ಷ ಗೊರ್ಡನ್ ಕೊಬರ್ನ್ ಹೇಳಿದ್ದಾರೆ.
ಆದರೆ, ಈ ನಡುವೆ ಭಾರತದಲ್ಲಿ ತನ್ನ ಅಸ್ತಿತ್ವದ ಪ್ರಗತಿಯನ್ನು ಉಳಿಸಿಕೊಂಡಿರುವ ಸಿಟಿಎಸ್, ಮುಂದಿನ ಮೂರು ವರ್ಷಗಳಲ್ಲಿ ಸುಮಾರು 150,000 ಡಾಲರ್ ಹೂಡಿಕೆ ಮಾಡುತ್ತಿದ್ದು ವಿಶ್ವವಿದ್ಯಾಲಯ ಪ್ರಾಯೋಜಿತ ವಿಜ್ಞಾನ-ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತ(STEM) ವಿಭಾಗಗಳ ಅಭಿವೃದ್ಧಿಗಾಗಿ ಟೆಕ್ಸಾಸ್ ನ ವಿವಿಗಳ ಜತೆ ಜಂಟಿ ಯೋಜನೆ ಹಾಕಿಕೊಂಡಿದೆ.
ಸುಮಾರು ಶೇ 80 ರಷ್ಟು ಆದಾಯ ಅಮೆರಿಕದಲ್ಲೇ ಉತ್ಪನ್ನವಾಗುತ್ತಿದೆ. ಹೀಗಾಗಿ, ವಲಸೆ ನೀತಿ, ಯುಎಸ್ ವಿದೇಶಾಂಗ ನೀತಿ ಬದಲಾವಣೆ ಕಾಗ್ನಿಜೆಂಟ್ ಗೆ ಕಷ್ಟವಾಗಿ ಪರಿಣಮಿಸಿದೆ.
ವಲಸೆ ನೀತಿ: ಸ್ಥಳೀಯರಿಗೆ ಉದ್ಯೋಗ, ಸ್ಥಳೀಯ ಸಂಸ್ಥೆಗಳಿಗೆ ಸಬ್ಸಿಡಿ, ಆಫ್ ಶೋರ್ ಐಟಿ ಸರ್ವೀಸ್ ಸಂಸ್ಥೆಗಳಿಗೆ ಕಡಿವಾಣ, ವೀಸಾ ದರ ಹೆಚ್ಚಳ ಮುಂತಾದ ವಿಷಯಗಳನ್ನು ವಲಸೆ ನೀತಿ ಹೊಂದಿದೆ. ಕ್ಲೈಂಟ್ ಸ್ಥಳಕ್ಕೆ (ಅಮೆರಿಕ) ಭಾರತದಿಂದ ಉದ್ಯೋಗಿಗಳನ್ನು ಸಲೀಸಾಗಿ ಕಳಿಸಲು ಸಾಧ್ಯವಾಗುವುದಿಲ್ಲ. ಸ್ಥಳೀಯರನ್ನೇ ಆಯ್ಕೆ ಮಾಡಬೇಕಾಗುತ್ತದೆ. ಸ್ಥಳೀಯರು ಕಡಿಮೆ ಮೊತ್ತಕ್ಕೆ ದುಡಿಯುವುದಂತೂ ಇಲ್ಲ. ಇದರಿಂದ ಸಂಸ್ಥೆಗಳು ಯೋಜನೆ ಮೇಲೆ ಹಾಕಿದ ಮೊತ್ತ ದುಪ್ಪಟ್ಟಾಗುತ್ತದೆ. ಹೊರಗುತ್ತಿಗೆ ನಂಬಿಕೊಂಡಿರುವ ಭಾರತದ ಪ್ರಮುಖ ಸಂಸ್ಥೆಗಳಿಗೆ ಸರಿಯಾದ ಪಾಠವಾಗಲಿದೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications